ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಮಾನ ನಿಲ್ದಾಣದಲ್ಲೇ ಮಕ್ಕಳನ್ನು ಮಲಗಿಸಿದ ಏರ್ ಇಂಡಿಯಾ!

|
Google Oneindia Kannada News

ಪ್ಯಾರೀಸ್, ಜೂ. 17: ಬರ್ಗರ್ ನಲ್ಲಿ ಹಲ್ಲಿ ನೀಡಿದ್ದ ಏರ್ ಇಂಡಿಯಾ ಮತ್ತೊಮ್ಮೆ ಸುದ್ದಿಯಲ್ಲಿದೆ. ಅದು ಬೇಡದ ಕಾರಣಕ್ಕೆ. ಭಾರತದ ಮಕ್ಕಳನ್ನು ಪ್ಯಾರೀಸ್ ನಲ್ಲಿ ಅಮಾನವೀಯ ರೀತಿಯಲ್ಲಿ ಏರ್ ಇಂಡಿಯಾ ನಡೆಸಿಕೊಂಡಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

ಏರ್ ಇಂಡಿಯಾದ ಎಐ-142 ಪ್ಯಾರಿಸ್ ನಿಂದ ಭಾರತಕ್ಕೆ ಹಾರಲು ಜೂನ್ 10 ರಂದು ಸಿದ್ಧವಾಗಿತ್ತು ಆದರೆ ಕೆಲ ತಾಂತ್ರಿಕ ಕಾರಣಗಳಿಂದ ವಿಮಾನವನ್ನು ರದ್ದು ಮಾಡಲಾಯಿತು. ಆದರೆ ತನ್ನ ಪ್ರಯಾಣಿಕರು ತಂಗಲು ಏರ್ ಇಂಡಿಯಾ ಯಾವ ಸಮರ್ಪಕ ವ್ಯವಸ್ಥೆಯನ್ನು ಮಾಡಿ ಕೊಡಲಿಲ್ಲ. ಇದು ಸಾಮಾಜಿಕ ಜಾಲತಾಣದಲ್ಲೂ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರಯಾಣಿಕರಿಗೆ ಆಹಾರ ಒದಗಿಸುವಲ್ಲಿ ಎಡಗಿದ್ದ ಏರ್ ಇಂಡಿಯಾ ಈಗ ಮಕ್ಕಳನ್ನು ಅಮಾನವೀಯ ಬಗೆಯಲ್ಲಿ ನಡೆಸಿಕೊಂಡ ಆರೋಪಕ್ಕೆ ಗುರಿಯಾಗಿದೆ. ಶೈಕ್ಷಣಿಕ ಸೆಮಿನಾರ್ ಗೆಂದು ಯುರೋಪ್ ಗೆ ತೆರಳಿದ್ದ ಮಕ್ಕಳಿಗೆ ಬೋರ್ಡಿಂಗ್ ಪಾಸ್ ಸಹ ನೀಡಲಾಗಿತ್ತು. ಆದರೆ ತಾಂತ್ರಿಕ ಕಾರಣ ನೆಪದಿಂದ ವಿಮಾನ ರದ್ದಾದರೂ ಮಕ್ಕಳಿಗೆ ವಸತಿ ವ್ಯವಸ್ಥೆ ಮಾಡಲಾಗಲಿಲ್ಲ.

ಮಕ್ಕಳ ಸಂಕಷ್ಟ

ಮಕ್ಕಳ ಸಂಕಷ್ಟ

ಪ್ರಯಾಣಿಕರು ವಿಮಾನ ನಿಲ್ದಾಣದಲ್ಲೇ ತಂಗುವಂತಾಯಿತು. ಯುರೋಪ್ ಗೆ ಶೈಕ್ಷಣಿಕ ಕ್ಯಾಂಪ್ ಗೆಂದು ತೆರಳಿದ್ದ ಸುಮಾರು 40 ಅಧಿಕ ಮಕ್ಕಳು ತೊಂದರೆಗೆ ಸಿಕ್ಕಿಹಾಕಿಕೊಳ್ಳಬೇಕಾಯಿತು.

ಏನೂ ಮಾಡಲಾಗಲಿಲ್ಲ

ಏನೂ ಮಾಡಲಾಗಲಿಲ್ಲ

ಮಕ್ಕಳಿಗೆ ಏರ್ ಇಂಡಿಯಾದ ಜತೆ ಹೇಗೆ ಮಾತನಾಡಬೇಕು ಎಂಬುದು ಆ ಕ್ಷಣಕ್ಕೆ ಗೊತ್ತಾಗಲಿಲ್ಲ. ಅವರಿಗೆ ಮೂಲ ಸೌಕರ್ಯ ಕಲ್ಪಿಸಿಕೊಡುವಲ್ಲೂ ಏರ್ ಇಂಡಿಯಾ ವಿಫಲವಾಯಿತು.

ಏರ್ ಪೋರ್ಟೇ ವಸತಿ ಗೃಹ

ಏರ್ ಪೋರ್ಟೇ ವಸತಿ ಗೃಹ

ಎಲ್ಲ ಮಕ್ಕಳು ಅನಿವಾರ್ಯವಾಗಿ ವಿಮಾನ ನಿಲ್ದಾಣದಲ್ಲೇ ಮಲುಗಬೇಕಾಯಿತು. ತಾಂತ್ರಿಕ ದೋಷ ಪರಿಹಾರವಾಗುವುದು ವಿಳಂಬವಾದರೂ ಬೇರೆ ವಿಮಾನದ ವ್ಯವಸ್ಥೆಯನ್ನು ಮಾಡಿ ಕೊಡಲಾಗಲಿಲ್ಲ.

ಬೋರ್ಡಿಂಗ್ ಪಾಸ್ ನೀಡಿದ್ದರು

ಬೋರ್ಡಿಂಗ್ ಪಾಸ್ ನೀಡಿದ್ದರು

ಏರ್ ಇಂಡಿಯಾ ಮಕ್ಕಳಿಗೆ ಬೋರ್ಡಿಂಗ್ ಪಾಸ್ ನೀಡಿತ್ತು. ಆದರೆ ವಿಮಾನ ವಿಳಂಬವಾದ ಹಿನ್ನೆಲೆಯಲ್ಲಿ ಯಾವ ಕ್ರಮವನ್ನು ತೆಗೆದುಕೊಳ್ಳಲಿಲ್ಲ. ಅನಿವಾರ್ಯವಾಗಿ ಮಕ್ಕಳು ಸೇರಿದಂತೆ ಎಲ್ಲ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲೇ ತಂಗಬೇಕಾಯಿತು.

English summary
National carrier of India -- Air India always made headlines for wrong reasons. This time too, the airline is in news as it has been accused of treating Indian children inhumanly in Paris.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X