ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದ ದೇಗುಲ ಮೇಲೆ ದಾಳಿ, ಶಿವರಾತ್ರಿ ದಿನ ಆತಂಕ

By Mahesh
|
Google Oneindia Kannada News

ವಾಷಿಂಗ್ಟನ್, ಫೆ.17: ಇಲ್ಲಿನ ಹಿಂದೂ ದೇಗುಲವೊಂದರ ಮೇಲೆ ಸೋಮವಾರ ರಾತ್ರಿ ದಾಳಿ ನಡೆಸಲಾಗಿದೆ. ಸಿಯಾಟಲ್ ಮೆಟ್ರೋಪಾಲಿಟನ್ ಪ್ರದೇಶದ ದೇಗುಲದ ಗೋಡೆ ಮೇಲೆ 'ಗೆಟ್ ಔಟ್' ಎಂದು ಅಪರಿಚಿತರು ಬರೆದು ಹೋಗಿದ್ದಾರೆ. ಶಿವರಾತ್ರಿ ಆಚರಣೆಗೆ ಸಿದ್ಧವಾಗುತ್ತಿದ್ದ ಹಿಂದೂಗಳು ಆತಂಕಗೊಂಡಿದ್ದಾರೆ.

ಸ್ನೊಹೊಮಿಷ್ ಕೌಂಟಿ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಈ ಘಟನೆಯಿಂದ ಈ ಪ್ರದೇಶದ ಹಿಂದೂಗಳು ಸಹಜವಾಗಿ ಆತಂಕಕ್ಕೆ ಒಳಗಾಗಿದ್ದಾರೆ. ದುಷ್ಕರ್ಮಿಗಳು ಸ್ವಸ್ತಿಕ್ ಚಿನ್ಹೆ ಬರೆದು ಜೊತೆಗೆ ಗೆಟ್ ಔಟ್ ಎಂದು ಹಾಕಿದ್ದಾರೆ. ಯಾರಿಗೆ ಯಾವುದಕ್ಕೆ ಎಂಬುದು ತಿಳಿದಿಲ್ಲ.

'ಯಾರಿಗೆ ಗೆಟ್ ಔಟ್ ಎಂದು ಹೇಳುತ್ತಿದ್ದಾರೆ. ಎಲ್ಲರನ್ನು ವಲಸಿಗರು ಎಂದು ತಿಳಿದುಕೊಂಡಿದ್ದರೋ ಹೇಗೆ?' ಎಂದು ಹಿಂದೂ ದೇಗುಲದ ಟ್ರಸ್ಟಿ ನಿತ್ಯಾ ನಿರಂಜನ್ ಪ್ರಶ್ನಿಸಿದ್ದಾರೆ.

Hindu temple vandalised in U.S

ಎರಡು ದಶಕಗಳಿಂದ ಈ ದೇಗುಲ ಅಮೆರಿಕದಲ್ಲಿರುವ ಹಿಂದೂಗಳಿಗೆ ಪವಿತ್ರ ತಾಣವಾಗಿ ಜನಪ್ರಿಯತೆ ಗಳಿಸಿದೆ. ಈ ಘಟನೆಯನ್ನು ಹಿಂದೂ ಅಮೆರಿಕನ್ ಫೌಂಡೇಷನ್(ಎಚ್ಎಎಫ್) ತೀವ್ರವಾಗಿ ಖಂಡಿಸಿದೆ. ಕಳೆದ ವರ್ಷ ಜಾರ್ಜಿಯಾದಲ್ಲಿ ದೇಗುಲವೊಂದು ಧ್ವಂಸಗೊಂಡ ಪ್ರಕರಣದ ನಂತರ ಈ ಘಟನೆ ನಡೆದಿದೆ.

ಇದೇ ದೇಗುಲದಲ್ಲಿ ಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆ ಜಪ ತಪ ಹಮ್ಮಿಕೊಳ್ಳಲಾಗಿತ್ತು. ಫೆ.16ರಂದು ಬೆಳಗ್ಗೆ 9 ರಿಂದ ರಾತ್ರಿ 1ಗಂಟೆ ತನಕ ವಿವಿಧ ಪೂಜಾ ಕೈಂಕರ್ಯಗಳನ್ನು ಇಲ್ಲಿನ ಟ್ರಸ್ಟ್ ಆಯೋಜಿಸಿದೆ.

ರುದ್ರಾಭಿಷೇಕ, ರುದ್ರ ಪಠಣ, ಮಹಾ ಪ್ರಸಾದ ವಿನಿಯೋಗ, ಆರತಿ, ಅರ್ಚನೆ, ವಿಶೇಷ ಭಜನೆ ಕಾರ್ಯಕ್ರಮಗಳು ಆಯೋಜನೆಗೊಂಡಿದೆ. ಇದ್ದಲ್ಲದೆ ವಾಷಿಂಗ್ಟನ್ ನ ಮತ್ತೊಂದು ದೇಗುಲದಲ್ಲಿ ಶಿವ ಪಾರ್ವತಿ ಕಲ್ಯಾಣೋತ್ಸವ ಸಮಾರಂಭವೂ ನಡೆಯಲಿದೆ. ಫೆ.23ರಂದು ಕೂಡಾ ಮಹಾರುದ್ರಾಭಿಷೇಕ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗೆ ದೇಗುಲದ ವೆಬ್ ಸೈಟ್ ನೋಡಬಹುದು. (ಪಿಟಿಐ)

English summary
A Hindu temple has been vandalised with hate speech in the US state of Washington, sending shock waves through the community in the area and prompting authorities to launch an investigation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X