ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸದ್ಯದಲ್ಲೇ ಸೃಷ್ಟಿ ಆಗ್ತಾರಾ ನಮ್ಮಂತಹ ತದ್ರೂಪಿ ವ್ಯಕ್ತಿಗಳು?

By Vanitha
|
Google Oneindia Kannada News

ಬೀಜಿಂಗ್, ಡಿಸೆಂಬರ್, ೦೨: ತದ್ರೂಪಿಗಳನ್ನು ಸೃಷ್ಟಿ ಮಾಡುವ ಕ್ಲೋನಿಂಗ್ ತಂತ್ರಜ್ಞಾನ ಅಭಿವೃದ್ಧಿ ಪಡಿಸುವ ಸಲುವಾಗಿ ಚೀನಾದ ಬೋಯಾಲೈಫ್ ಗ್ರೂಪ್ ವಿಶ್ವದ ಬೃಹತ್ ಕ್ಲೋನಿಂಗ್ ಫ್ಯಾಕ್ಟರಿ ನಿರ್ಮಿಸಿದ್ದಾರೆ.

ಕ್ಲೋನಿಂಗ್ ತಂತ್ರಜ್ಞಾನದ ಮೂಲಕ ತದ್ರೂಪಿಗಳನ್ನು ಸೃಷ್ಟಿ ಮಾಡಲು ಈಗಾಗಲೇ ಸಕಲ ಸಿದ್ಧತೆಗಳು ನಡೆದಿದ್ದು, ನಾಲ್ಕೈದು ವರ್ಷಗಳಲ್ಲಿ 10ಲಕ್ಷ ಹಸುಗಳ ತದ್ರೂಪಿಗಳನ್ನು ಸೃಷ್ಟಿಸಲು ಬೋಯಾಲೈಫ್ ಯೋಜನೆ ಹಾಕಿಕೊಂಡಿದೆ. ಜೊತೆಗೆ ಪೊಲೀಸ್ ನಾಯಿಗಳು ಈ ಪ್ರಕ್ರಿಯೆಗೆ ಒಳಗಾಗುವ ಸಾಧ್ಯತೆ ಇದೆ.[ಚೀನಾದ ಸರಕುಗಳು ಪರಿಸರ ವಿನಾಶಕಾರಿಗಳಂತೆ!]

A Boyalife group starts cloning factory in Tianjin, China

ಚೀನಾದ ಟಿಯಾಂಜಿನ್ ನಗರದಲ್ಲಿ ಬೋಯಾಲೈಫ್ ಗ್ರೂಪ್ ದಕ್ಷಿಣ ಕೊರಿಯಾದ ಸೂಆಮ್ ಹಾಗೂ ಚೀನಾ ವಿಜ್ಞಾನ ಅಕಾಡೆಮಿಗಳ ಸಹಯೋಗದಲ್ಲಿ ಫ್ಯಾಕ್ಟರಿ ಆರಂಭಿಸಲಾಗಿದೆ. ಆದರೆ ಈಗಲೇ ಫ್ಯಾಕ್ಟರಿಯಲ್ಲಿ ತದ್ರೂಪಿ ಮಾನವರನ್ನು ಸೃಷ್ಟಿ ಮಾಡಿದ್ದಲ್ಲಿ ಸಾರ್ವಜನಿಕರು ಆಕ್ಷೇಪ ವ್ಯಕ್ತವಾಗಬಹುದೆಂಬ ಕಾರಣಕ್ಕೆ ತದ್ರೂಪಿ ಮಾನವ ವಿಚಾರ ಕೈಬಿಡಲಾಗಿದೆ ಎಂದು ಬೋಯಾಲೈಫ್ ಮುಖ್ಯಸ್ಥ ಹಾಗೂ ವಿಜ್ಞಾನಿ ಕ್ಯೂ ಕ್ಸಿಯೋಚುನ್ ಹೇಳಿದ್ದಾರೆ.

ಕ್ಲೋನಿಂಗ್ ನಿಂದ ಏನೆಲ್ಲಾ ಸೃಷ್ಟಿ ಮಾಡಬಹುದು?

ಈ ತದ್ರೂಪಿ ಪ್ರಯೋಗದಿಂದ ಅಳಿವಿನಂಚಿನಲ್ಲಿರುವ ಪ್ರಾಣಿ, ಪಕ್ಷಿ ಸಂಕುಲವನ್ನು ಉಳಿಸಿಕೊಳ್ಳಬಹುದಾಗಿದೆ. ಈಗಾಗಲೇ ಅವಸಾನದ ಅಂಚಿನಲ್ಲಿರುವ ಪ್ರಾಣಿಗಳ ಕೋಶವನ್ನು ಸಂಗ್ರಹಿಸಿಟ್ಟುಕೊಂಡು ಈ ಕಾರ್ಯ ಮಾಡಬಹುದು.[ನೀವು ತಿನ್ನುವ ಅಕ್ಕಿ ಯಾವುದರಿಂದ ಮಾಡಿದ್ದು!?]

ಅಲ್ಲದೇ ಈಗ ಹುಟ್ಟುವ ಮಕ್ಕಳು ಒಂದು ತಂದೆಯನ್ನೋ ಅಥವಾ ತಾಯಿಯನ್ನೋ ಹೋಲುತ್ತದೆ. ಆದರೆ ಇದರಿಂದ ಮುಂದೆ ತಂದೆ ಅಥವಾ ತಾಯಿಯ ಪಡಿಯಚ್ಚೆ ಆಗಬಹುದು ಎಂದು ತದ್ರೂಪೀಕರಣ ಉಪಯೋಗದ ಬಗ್ಗೆ ತಿಳಿಸಿದ್ದಾರೆ

English summary
A Boyalife group starts cloning factory in Tianjin, China. This factory is the world's biggest cloning factory. Its create the replicate human. But within the next seven months one million cloned cows a year by 2020
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X