ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕ ಕಲ್ಯಾಣದಲ್ಲಿ ಭಾರತೀಯರೇ ಅಗ್ರಗಣ್ಯರು!

By Vanitha
|
Google Oneindia Kannada News

ಹೌಸ್ಟೋನ್, ಸೆಪ್ಟೆಂಬರ್, 08 : 'ಲೋಕೋಪಕಾರಾರ್ಥಂ ಇದಂ ಶರೀರ' ಎಂಬ ಮಾತನ್ನು ಎಲ್ಲರೂ ಅನುಸರಿಸಲಾರರು. ಅವರವರ ಆಳ, ಎತ್ತರ ನೋಡಿಕೊಳ್ಳುವವರ ಮಧ್ಯೆ ಎಲ್ಲೋ ಕೆಲವರು ಮಾತ್ರ ಲೋಕಾರ್ಥ ಚಿಂತೆಯಲ್ಲಿ ಮನಸ್ಸು ಮಾಡಿ ಅದರಂತೆ ಮುನ್ನಡೆಯುತ್ತಾರೆ.

ಹೌದು..ಲೋಕೋಪಯೊಗಿ ಕಾರ್ಯದಲ್ಲಿ ನಮ್ಮ ಏಷ್ಯಾದಲ್ಲಿ 9 ಮಂದಿ ಇದ್ದು, ಅದರಲ್ಲಿ 7 ಮಂದಿ ಭಾರತೀಯರ ಹೆಸರು ಕೇಳಿ ಬರುತ್ತಿದೆ. ಇದರಿಂದ ಇಡೀ ದೇಶ ಹೆಮ್ಮೆ ಪಡುವಂತೆ ಆಗಿದೆ. ಲೋಕ ಕಲ್ಯಾಣಕಾರರ ಪಟ್ಟಿಯಲ್ಲಿ ಇನ್ಫೋಸಿಸ್‌ನ 4 ಮಂದಿ ಸಹ ಸಂಸ್ಥಾಪಕರು ಹಾಗೂ ಭಾರತದ ಬಹುದೊಡ್ಡ ಮಾಹಿತಿ ತಂತ್ರಜ್ಞಾನ ಸೇವಾ ಸಂಸ್ಥೆಯು ಅಗ್ರಪಂಕ್ತಿಯಲ್ಲಿ ನಿಂತಿದೆ.[ಬೆಂಗಳೂರಲ್ಲಿ 1,918 ಕೋಟಿ ಹೂಡಿಕೆ ಮಾಡಲಿದೆ ಇನ್ಫೋಸಿಸ್]

7 Indians feature in Forbes Asia's Heroes of Philanthropy list

ಲೋಕ ಕಲ್ಯಾಣಕ್ಕೆ ಯಾರು ಎಷ್ಟು ಹಣ ಮೀಸಲಿರಿಸಿದ್ದಾರೆ?

* ಕೇರಳದ ಉದ್ಯಮಿಯಾದ ಸನ್ನಿ ವರ್ಕೆಯ್ ಅವರು ಜೂನ್ ತಿಂಗಳಿನಲ್ಲಿ ಸುಮಾರು 2.25 ಬಿಲಿಯನ್ ಹಣವನ್ನು ಬಿಲ್‌ಗೆಟ್ಸ್ ಅವರ ದತ್ತಿ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿದ್ದು, ಲೋಕೋಪಕಾರರ ಸಾಲಿನಲ್ಲಿ ಮೊದಲ ಸ್ಥಾನ ಗಳಿಸಿಕೊಂಡಿದ್ದಾರೆ. ಇವರು ದುಬೈನಲ್ಲಿ ಜೇಮ್ಸ್ ಶಿಕ್ಷಣ ಸಂಸ್ಥೆ, 70 ಖಾಸಗಿ ಶಾಲೆಗಳಲ್ಲಿ 14 ಕೌಟೀಸ್ (Forming of chief unit of local administration)ಗೂ ಹಣ ನೀಡಿದ್ದಾರೆ.

* ಇನ್ಫೋಸಿಸ್‌ ಸಂಸ್ಥೆಯ ಸದಹ ಸಂಸ್ಥಾಪಕರಾದ ಸೇನಾಪತಿ ಗೋಪಾಲಕೃಷ್ಣನ್ , ನಂದನ್ ನೀಲೆಕಾಣಿ ಮತ್ತು ಎಸ್‌ ಡಿ ಶಿಬುಲಾಲ್ ಇವರು ವೈಯಕ್ತಿಕವಾಗಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆಗಳ ಬೆಳವಣಿಗೆಗಾಗಿ ಹಣ ನೀಡಿದ್ದಾರೆ.

* ಇನ್ಫೋಸಿಸ್‌ನ ಸಹ ಸಂಸ್ಥಾಪಕರಾದ ಎನ್ ಆರ್ ನಾರಾಯಣ್ ಮೂರ್ತಿ ಅವರ ಮಗನಾದ ರೋಹನ್ ಅವರು 5.2 ಮಿಲಿಯನ್ ಹಣವನ್ನು ಪ್ರಾಚೀನ ಭಾರತೀಯ ಸಾಹಿತ್ಯಿಕ ಶ್ರೇಷ್ಠತೆಯನ್ನು ಉತ್ತೇಜಿಸಲು ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ನೀಡಿದ್ದಾರೆ.

* ಎನ್ ಆರ್ ನಾರಾಯಣ ಮೂರ್ತಿ ಅವರು ಲೋಕ ಕಲ್ಯಾಣ ವ್ಯಕ್ತಿಯಾಗಿದ್ದು, ಇವರ ಸಹೋದರರಾದ ಸುರೇಶ್ ರಾಮಕೃಷ್ಣನ್ ಮತ್ತು ಮಹೇಶ್ ರಾಮಕೃಷ್ಣನ್ ಮೂಲತಃ ಭಾರತೀಯರಾಗಿದ್ದು, ಲಂಡನ್‌ನಲ್ಲಿ ಮಹಾನ್ ಉದ್ಯೋಗಿಯಾಗಿದ್ದಾರೆ. ಇವರು 3 ಮಿಲಿಯನ್ ಹಣವನ್ನು 4,000 ಮಂದಿಗೆ ಭಾರತದಲ್ಲಿ ಹೊಲಿಗೆ ತರಬೇತಿ ನೀಡಲು ತೊಡಗಿಸಿದ್ದಾರೆ.

English summary
Seven Indians feature in Forbes Asia's ninth Heroes of Philanthropy list, highlighting most noteworthy contributions to philanthropy from 13 countries across Asia Pacific. Of them, four are co-founders of Infosys, one of India's largest information technology(IT) services company.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X