ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಸಿಫಿಕ್ ದ್ವೀಪದಲ್ಲಿ ಭೂಕಂಪ, ಸುನಾಮಿ ಭೀತಿ

|
Google Oneindia Kannada News

ಪಪುವಾ, ಮೇ. 5: ನೇಪಾಳದಲ್ಲಿ ಭೂಕಂಪ ಸಂಭವಿಸಿ ಸಾವಿರಾರು ಜನರು ಬೀದಿಪಾಲಾಗಿರುವ ದುರಂತದಿಂದ ಪ್ರಪಂಚ ಚೇತರಿಸಿಕೊಳ್ಳುವ ಮುನ್ನವೇ ಸುನಾಮಿ ಭಯವೂ ಆವರಿಸಿದೆ. ದಕ್ಷಿಣ ಪೆಸಿಫಿಕ್ ದ್ವೀಪ ರಾಷ್ಟ್ರ ಪಪುವಾ ನ್ಯೂಗಿನಿಯಲ್ಲಿ ಮಂಗಳವಾರ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 7.4ರಷ್ಟು ತೀವ್ರತೆ ದಾಖಲಾಗಿದ್ದು ಸುನಾಮಿ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಪಪುವಾದ ಈಶಾನ್ಯ ಪಟ್ಟಣ ಕೊಕೊಪೊದಿಂದ ದಕ್ಷಿಣ ಭಾಗಕ್ಕೆ 130 ಕಿ.ಮೀ. ದೂರದಲ್ಲಿ ಭೂಕಂಪದ ಕೇಂದ್ರಬಿಂದು ಇತ್ತು. ಭೂಮಿಯ 63 ಕಿ.ಮೀ.ಆಳದಲ್ಲಿ ಕಂಪನ ಘಟಿಸಿದೆ ಎಂದು ಅಮೆರಿಕದ ಭೂವೈಜ್ಞಾನಿಕ ಸಂಸ್ಥೆ ತಿಳಿಸಿದೆ.[ನೇಪಾಳದಲ್ಲಿ ಉಳಿದಿರುವುದು ಬರೀ ಅವಶೇಷಗಳೇ!]

earthquake

ಭೂಕಂಪನದ ಪರಿಣಾಮ ಸಾಗರದ 300 ಕಿ.ಮೀ. ವ್ಯಾಪ್ತಿಯಲ್ಲಿ ಸುನಾಮಿ ಸಂಭವಿಸಬಹುದು ಎಂದು ಎಚ್ಚರಿಕೆ ನೀಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಸಮುದ್ರ ತೀರದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ. ಇದೇ ಸ್ಥಳದಲ್ಲಿ ಏ. 30ರಂದು 6.7ರಷ್ಟು ತೀವ್ರತೆಯ ಹಾಗೂ ಮೇ 1ರಂದು 7.1ರಷ್ಟು ತೀವ್ರತೆಯಿಂದ ಕೂಡಿದ ಲಘು ಭೂಕಂಪನ ಉಂಟಾಗಿತ್ತು. ಪದೇ ಪದೇ ಭೂ ಕಂಪನ ಸಂಭವಿಸುತ್ತಿರುವುದು ಆತಂಕ ಹೆಚ್ಚಿಸಿದೆ.[ಭೂಕಂಪನದ ಕರಾಳತೆ ಸಾರುವ ಚಿತ್ರಗಳು]

ನೇಪಾಳದಲ್ಲಿ ಭೂಕಂಪ ಸಂಭವಿಸಿದ ನಂತರ ಭಾರತದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲೂ ಭೂ ಕಂಪನವಾಗಿತ್ತು. ಭೀಕರ ಭೂಕಂಪದ ಒಂದು ವಾರದ ನಂತರ ನೇಪಾಳದಲ್ಲಿ ಮತ್ತೆ ಲಘುವಾಗಿ ಭೂಮಿ ಕಂಪಿಸಿತ್ತು. ಇದಾದ ನಂತದ ಇದೀಗ ಪಪುವಾ ನ್ಯೂಗಿನಿಯಲ್ಲಿ ಭೂಮಿ ಕಂಪಿಸಿದ್ದು ಜನರನ್ನು ಭಯಭೀತರನ್ನಾಗುವಂತೆ ಮಾಡಿದೆ.

English summary
Magnitude earthquake jolted 139 km south of Kokopo, Papua New Guinea on Tuesday, the US Geological Survey said. The epicenter, with a depth of 10.0 k.m, was initially determined to be at 5.6 degrees south latitude and 152.1 degrees east longitude.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X