ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

50 ಕೋಟಿ ಯಾಹೂ ಅಕೌಂಟ್ ಹ್ಯಾಕ್: ಸರಕಾರಿ ದಾಳಿ ಎಂದ ಕಂಪೆನಿ

By ಒನ್ಇಂಡಿಯಾ ಪ್ರತಿನಿಧಿ
|
Google Oneindia Kannada News

ವಾಷಿಂಗ್ಟನ್, ಸೆಪ್ಟೆಂಬರ್ 23: 50 ಕೋಟಿ ಯಾಹೂ ಅಕೌಂಟ್ ಗಳ ಮಾಹಿತಿ ಸೋರಿಕೆಯಾಗಿದೆ ಎಂಬುದನ್ನು ಯಾಹೂ ಖಾತ್ರಿ ಪಡಿಸಿದೆ. ಇದು "ಸರಕಾರಿ ಪ್ರಾಯೋಜಿತ'" ದಾಳಿ ಎಂದು ಹೇಳಿದೆ. 2014ರ ನಂತರ ಕಂಪೆನಿ ನೆಟ್ ವರ್ಕ್ ನಿಂದ ಮಾಹಿತಿ ಕಳವಾಗಿದೆ ಎಂದು ಯಾಹೂ ಕಂಪೆನಿಯ ಮುಖ್ಯ ಮಾಹಿತಿ ರಕ್ಷಣಾ ಅಧಿಕಾರಿ ಬಾಬ್ ಲಾರ್ಡ್ ಹೇಳಿರುವುದಾಗಿ ಫಾಕ್ಸ್ ನ್ಯೂಸ್ ವರದಿ ಮಾಡಿದೆ.

ಹೆಸರು, ಇ ಮೇಲ್ ಅಡ್ರೆಸ್, ದೂರವಾಣಿ ಸಂಖ್ಯೆ, ಜನ್ಮದಿನಾಂಕ, ಪಾಸ್ ವರ್ಡ್ ನಂಥ ಮಾಹಿತಿಯನ್ನು ಕಳವು ಮಾಡಲಾಗಿದೆ. ಹಣಕಾಸು ಪಾವತಿ, ಬ್ಯಾಂಕ್ ಮಾಹಿತಿಗಳು ಆ ನೆಟ್ ವರ್ಕ್ ನಲ್ಲಿ ಇರಲಿಲ್ಲ ಎಂದು ಲಾರ್ಡ್ ತಿಳಿಸಿದ್ದಾರೆ. ಕಾನೂನು ಕ್ರಮಕ್ಕೆ ಆಲೋಚಿಸುತ್ತಿರುವುದಾಗಿ ಯಾಹೂ ಕಂಪೆನಿ ತಿಳಿಸಿದೆ. ಕೋಟ್ಯಂತರ ಅಕೌಂಟ್ ಗಳು ಹ್ಯಾಕ್ ಆಗಿವೆ ಎಂಬುದನ್ನು ಗುರುವಾರ ಯಾಹೂ ಖಾತ್ರಿ ಪಡಿಸಿತ್ತು.[ಎಂಟಿಆರ್ ಆಹಾರ, ಮೈಸೂರು ಸ್ಯಾಂಡಲ್ ಸೋಪ್ ಯುಎಸ್ ನಲ್ಲಿ ತಿರಸ್ಕೃತ]

Yahoo

ಕಂಪೆನಿಯ ಮುಖ್ಯ ಅಧಿಕಾರಿಯೊಬ್ಬರು ಹೇಳುವಂತೆ, ಇದರ ತೊಂದರೆ ತಿಂಗಳುಗಳ ಹಿಂದೆಯೇ ಆಗಿದೆ. ಹೆಚ್ಚಿನ ನಷ್ಟ ಆಗದಂತೆ ಯಾಹೂ ಕಂಪೆನಿಯು ಎಲ್ಲ ಅಕೌಂಟ್ ಗಳ ಪಾಸ್ ವರ್ಡ್ ಬದಲಿಸಿಕೊಳ್ಳುವಂತೆ ಸೂಚಿಸಿದೆ. ಇದೀಗ ಈ ಪಾಸ್ ವರ್ಡ್ ಬಳಸಿ ಯಾಹೂ ಹೊರತುಪಡಿಸಿ ಇತರ ಸಾವಿರಾರು ವೆಬ್ ಸೈಟ್ ಗಳನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ.

ಸೈಬರ್ ಪಾತಕಿಗಳು ತುಂಬ ಮುಂದುವರಿದ ತಂತ್ರಜ್ಞಾನ ಬಳಸಿಕೊಂಡು ಬಳಕೆದಾರರು ಬೇರೆ ವೆಬ್ ಸೈಟ್ ನಲ್ಲಿ ಎಲ್ಲೆಲ್ಲಿ ಪಾಸ್ ವರ್ಡ್ ಗಳನ್ನು ಬಳಸಿದ್ದಾರೆ ಎಂದು ತಿಳಿದುಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.[ಬೆಂಗಳೂರಲ್ಲಿ 5 ಮಳಿಗೆ ತೆರೆಯಲಿದೆ ಮೆಟ್ರೊ ಕ್ಯಾಷ್ ಅಂಡ್ ಕ್ಯಾರಿ]

ಇಅದರಿಂದ ಯಾಹೂ ಕಂಪೆನಿಯ 4.8 ಬಿಲಿಯನ್ ಅಮೆರಿಕಾ ಡಾಲರ್ ವ್ಯವಹಾರದ ಮೇಲೆ ಪರಿಣಾಮ ಬೀರಿದೆ. "ಬೇರೆ ಕಂಪೆನಿಯೊಂದಿಗೆ ಸೇರುವಾಗ ಅಥವಾ ಖರೀದಿಸುವಾಗ ಕೆಲವು ಮಟ್ಟದ ರಿಸ್ಕ್ ಇರುತ್ತದೆ. ಬಾಕಿ ಇರುವ ಕಾನೂನು ಹೋರಾಟ, ಕಳಪೆ ಗುಣಮಟ್ಟದ ಉತ್ಪಾದನೆಗಳು ಅಥವಾ ನಿಯಮಗಳ ಉಲ್ಲಂಘನೆ ಎಲ್ಲ ಸಾಧ್ಯವಿರುತ್ತದೆ" ಎಂದು ಕಂಪೆನಿಯ ಉಪಾಧ್ಯಕ್ಷ ಸ್ಟೀವನ್ ಗ್ರಾಸ್ ಮನ್ ಫಾಕ್ಸ್ ನ್ಯೂಸ್ ಗೆ ತಿಳಿಸಿದ್ದಾರೆ.

ಸೈಬರ್ ಸಂಬಂಧಿತ ಸಮಸ್ಯೆಗಳು ಪಟ್ಟಿಯ ಮೊದಲ ಸ್ಥಾನದಲ್ಲಿದೆ. ಡೇಟಾ ಕಳವು ವಿಚಾರದಲ್ಲಿ ಕಂಪೆನಿಗಳು ಬಲಿಪಶುಗಳಾಗುತ್ತಿವೆ. ಈ ಸಮಸ್ಯೆ ಎಷ್ಟು ಗಂಭೀರವಾಗಿದೆಯೋ ಅಷ್ಟು ಪ್ರಾಮುಖ್ಯತೆ ಅದಕ್ಕೆ ಸಿಗುತ್ತಿಲ್ಲ.

English summary
Yahoo has confirmed that hackers stole information from at least 500 million user accounts in what it describes as a "state-sponsored" attack. In a statement released on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X