ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯೋಗಕ್ಕೆ ಮೋದಿ ಮಣೆ : ಸಿಕ್ಕಿತು ಜಾಗತಿಕ ಮನ್ನಣೆ

|
Google Oneindia Kannada News

ನವದೆಹಲಿ, ನ. 1: ಜೂನ್‌ 21ನ್ನು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸಬೇಕು ಎಂದು ವಿಶ್ವಸಂಸ್ಥೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದ ನರೇಂದ್ರ ಮೋದಿಗೆ 50 ದೇಶಗಳು ಬೆಂಬಲ ಸೂಚಿಸಿವೆ. ಅಮೆರಿಕ, ಚೀನಾ, ಕೆನಡಾ ಸೇರಿದಂತೆ ಅನೇಕ ದೇಶಗಳು ಮೋದಿ ಪ್ರಸ್ತಾವನೆಗೆ ಸಹಮತ ವ್ಯಕ್ತಪಡಿಸಿವೆ.

ಜೂನ್ 21ನ್ನು ಅಂತರಾಷ್ಟ್ರೀಯ ಯೋಗ ದಿನವೆಂದು ಘೋಷಿಸಲು ತಯಾರಿಸುತ್ತಿರುವ ನಿರ್ಣಯಕ್ಕೆ 50 ದೇಶಗಳು ಒಪ್ಪಿಗೆ ಸೂಚಿಸಿದ್ದು ನಿರ್ಣಯ ಸದ್ಯದಲ್ಲೇ ವಿಶ್ವಸಂಸ್ಥೆಯ ಸಚಿವಾಲಯಕ್ಕೆ ಸಲ್ಲಿಕೆಯಾಗಲಿದೆ. ಡಿಸೆಂಬರ್ ಅಂತ್ಯದ ವೇಳೆಗೆ ಇದನ್ನು ಅಂಗೀಕಾರ ಮಾಡಲು ಸಕಲ ಪ್ರಯತ್ನಗಳು ನಡೆದಿವೆ.[ವಿಶ್ವಸಂಸ್ಥೆಯಲ್ಲಿ ಮೋದಿ ಭಾಷಣ ಬಾಂಧವ್ಯ ಬೆಸುಗೆ]

modi

ಚೀನಾ, ಜಪಾನ್‌, ಇಂಡೋನೇಷಿಯಾ, ದಕ್ಷಿಣ ಕೊರಿಯ, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ಶ್ರೀಲಂಕಾ, ನೇಪಾಳ, ಭೂತಾನ್‌ , ಲ್ಯಾಟಿನ್‌ ಅಮೆರಿಕ, ಬ್ರೆಜಿಲ್‌, ಅರ್ಜೆಂಟಿನಾ ಮತ್ತಿತರ ರಾಷ್ಟ್ರಗಳು ಜಾಗತಿಕ ಮಟ್ಟದಲ್ಲಿ ಭಾರತದ ಯೋಗಕ್ಕೆ ಮನ್ನಣೆ ಸಿಗಬೇಕೆಂಬ ಪ್ರಸ್ತಾವನೆಗೆ ಸಹಮತ ವ್ಯಕ್ತಪಡಿಸಿವೆ.

ಅಲ್ಲದೇ ಅಮೆರಿಕ ಮತ್ತು ಕೆನಡಾ ಈ ಬಗ್ಗೆ ಬೆಂಬಲ ಸೂಚಿಸಿರುವುದರಿಂದ ಐರೋಪ್ಯ ಒಕ್ಕೂಟದ ದೇಶಗಳು ಸಹಿ ಹಾಕುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಒಟ್ಟಿನಲ್ಲಿ ನರೇಂದ್ರ ಮೋದಿ ಮಾತಿಗೆ ಜಾಗತಿಕ ಮಟ್ಟದಲ್ಲೂ ಮನ್ನಣೆ ಸಿಕ್ಕಂತಾಗಿದೆ.[ಇಲ್ಲಿ ಪುರುಷ, ಮಹಿಳೆಯರಿಗೆ ನಗ್ನ ಸಹ ಯೋಗದ ಭಾಗ್ಯ]

ಸಪ್ಟೆಂಬರ್ 26ರಂದು ವಿಶ್ವಸಂಸ್ಥೆಯಲ್ಲಿ ಮಾತನಾಡಿದ್ದ ಮೋದಿ ತಮ್ಮ ಭಾಷಣದಲ್ಲಿ ಭಾರತದ ಪುರಾತನ ಪರಂಪರೆ ಯೋಗದ ಮಹತ್ವ ವಿವರಿಸಿದ್ದರು. ಅಲ್ಲದೇ ಜೂ. 21ನ್ನು ವಿಶ್ವ ಯೋಗ ದಿನವನ್ನಾಗಿ ಆಚರಿಸಬೇಕು ಎಂಬ ಅಂಶ ಮುಂದಿಟ್ಟಿದ್ದರು. ಈಗ ಶಕ್ತಿಶಾಲಿ ರಾಷ್ಟ್ರಗಳು ಈ ಬಗ್ಗೆ ಮಾತನಾಡಿರುವುದು ಪ್ರಸ್ತಾವನೆಗೆ ಮತ್ತಷ್ಟು ಬಲ ತಂದಿದೆ.

English summary
PM Narendra Modi's first global imprints could come soon with the fructification of his proposal - which he announced in his UNGA speech — for an International Day of Yoga. As many as 50 countries - US, Canada and China most recently — have signed up for co-sponsorship of a draft resolution which India's UN mission is preparing for declaring June 21 as international Yoga day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X