ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೆದರ್ ಲ್ಯಾಂಡ್ಸ್ ನ ಹೇಗ್ ನಲ್ಲಿ ವಿಶ್ವ ಯೋಗ ದಿನಾಚರಣೆ

|
Google Oneindia Kannada News

ಹೇಗ್, ಜೂನ್ 19: ಇಡೀ ಮನುಕುಲಕ್ಕೆ ಭಾರತ ನೀಡಿದ ಕೊಡುಗೆ ಯೋಗ. ಇಂಥ ಯೋಗ ದಿನಾಚರಣೆಗೆ ಮೂರು ವರ್ಷದ ಹಿಂದೆ ಪ್ರಧಾನಿ ಮೋದಿ ಚಾಲನೆ ಕೊಟ್ಟರು ಎಂದು ನೆದರ್ ಲ್ಯಾಂಡ್ಸ್ ಗೆ ಭಾರತದ ನೂತನ ರಾಯಭಾರಿ ಆಗಿರುವ ವೇಣು ರಾಜಮೊಣಿ ಅವರು ಹೇಳಿದರು.

ನೆದರ್ ಲ್ಯಾಂಡ್ಸ್ ನ ಹೇಗ್ ನಲ್ಲಿ ಜೂನ್ ಹದಿನೆಂಟರ ಭಾನುವಾರ ಹೇಗ್ ನ ಐಸ್ ಪ್ಯಾಲೇಸ್ ನಲ್ಲಿ ಭಾರತ ರಾಯಭಾರ ಕಚೇರಿ ಆಯೋಜಿಸಿದ್ದ ಮೂರನೇ ಅಂತರರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

3rd International Day of Yoga Celebrations in the Hague

ತುಂಬ ದೊಡ್ಡ ಮಟ್ಟದಲಿ ಆಚರಿಸಿದ ಯೋಗ ದಿನ ಕಾರ್ಯಕ್ರಮದಲ್ಲಿ ಸಾವಿರ ಮಂದಿ ಪಾಲ್ಗೊಂಡಿದ್ದರು. ಕಾರ್ಯಕ್ರಮಕ್ಕೆ ಹೇಗ್ ಸಿಟಿ ಕೌನ್ಸಿಲ್ ನ ಬೆಂಬಲವಿತ್ತು. ಯೋಗದ ಅಭ್ಯಾಸ ನಡೆದ ವೇಳೆ ಭಾರತೀಯ ಕ್ರಿಕೆಟರ್ ಸುರೇಶ್ ರೈನಾ, ನೆಂದರ್ ಲ್ಯಾಂಡ್ಸ್ ನ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಜೋರಿಸ್ ಗ್ರೀವನ್, ಮಿಸ್ ಇಂಡಿಯಾ ಹಾಲೆಂಡ್ 2017 ಪ್ರೀತಿ ಧಿಲ್ಲೋನ್ ಮತ್ತಿತರರು ಪಾಲ್ಗೊಂಡಿದ್ದರು.

ಮೈಸೂರಿನಲ್ಲಿ 20 ಸಾವಿರ ಜನರಿಂದ ಯೋಗಾಭ್ಯಾಸಮೈಸೂರಿನಲ್ಲಿ 20 ಸಾವಿರ ಜನರಿಂದ ಯೋಗಾಭ್ಯಾಸ

ಇನ್ನು ಈ ಕಾರ್ಯಕ್ರಮಕ್ಕೆ ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಷನ್ಸ್, ಭಾರತೀಯ ಪ್ರವಾಸೋದ್ಯಮ-ಆಮ್ ಸ್ಟರ್ ಡ್ಯಾಮ್, ಆರ್ಟ್ ಆಫ್ ಲಿವಿಂಗ್ ಫೌಂಡೇಷನ್, ಇಷಾ ಫೌಂಡೇಷನ್ ಮತ್ತು ಜೆಟ್ ಏರ್ ವೇಸ್ ನ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಭಾರತ ರಾಯಭಾರ ಕಚೇರಿಯ ಸಾಂಸ್ಕೃತಿಕ ವಿಭಾಗದ ಹೇಗ್ ನ ಗಾಂಧಿ ಕೇಂದ್ರದ ಯೋಗ ತಜ್ಞ ಡಾ.ಅಮಿತ್ ಖನ್ನಾ ಯೋಗ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ನವದೆಹಲಿಯ ಮೊರಾರ್ಜಿ ದೇಸಾಯಿ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಯೋಗದ ಶಿಖಾ ಖನ್ನಾ, ಆರ್ಟ್ ಆಫ್ ಲಿವಿಂಗ್ ನ ಮೆಡೆಲಿನ್ ಗಾಸ್ತ್ರಾ ಮತ್ತು ಸ್ಥಳೀಯ ಯೋಗ ತರಬೇತುದಾರ ಫಾರೂಕ್ ಅಬ್ದುಲ್ ಖಾದರ್ ಭಾಗವಹಿಸಿದ್ದರು.

English summary
The largest ever Yoga event in the Netherlands with participation of nearly 1000 people was organised in The Hague on June 18, 2017, Sunday to mark the Third International Day of Yoga. The event was organised by the Embassy of India with the support of The Hague City Council in the Atrium of the City Hall.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X