ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಂದಹಾರ್ ಸೇನಾ ನೆಲೆ ಮೇಲೆ ದಾಳಿ, 26 ಸೈನಿಕರು, 80 ಉಗ್ರರು ಬಲಿ

By Sachhidananda Acharya
|
Google Oneindia Kannada News

ಕಾಬೂಲ್, ಜುಲೈ 26: ಅಫ್ಘಾನಿಸ್ತಾನದ ಪ್ರಮುಖ ನಗರ ಕಂದಹಾರ್ ನಲ್ಲಿರುವ ಸೇನಾ ನೆಲೆಯ ಮೇಲೆ ತಾಲಿಬಾನ್ ಉಗ್ರರು ದಾಳಿ ನಡೆಸಿದ ಪರಿಣಾಮ 26 ಜನ ಸೈನಿಕರು ಅಸುನೀಗಿದ್ದಾರೆ.

ಘಟನೆಯಲ್ಲಿ 13 ಜನರು ಗಾಯಗೊಂಡಿದ್ದಾರೆ. ಮಂಗಳವಾರ ತಡರಾತ್ರಿ ಕಂದಹಾರ್ ಪ್ರಾಂತ್ಯದ ಖಾಕ್ರೆಜ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

26 Soldiers killed as Taliban storms Kandahar base in Afghanistan

ಇನ್ನು ಘಟನೆಯಲ್ಲಿ 21 ಜನರು ನಾಪತ್ತೆಯಾಗಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಜತೆಗೆ 7 ಜನರನ್ನು ಉಗ್ರರು ಅಪಹರಿಸಿದ್ದಾರೆ ಎಂದು ಅಫ್ಘಾನಿಸ್ತಾನದ ಸೇನಾ ಮೂಲಗಳು ಹೇಳಿವೆ.

ಸೇನಾ ನೆಲೆಯನ್ನು ಕೈವಶ ಮಾಡಿಕೊಳ್ಳಲು ತಾಲಿಬಾನ್ ಉಗ್ರರು ಯೋಜನೆ ರೂಪಿಸಿದ್ದರು. ಆದರೆ ಉಗ್ರರ ಯತ್ನವನ್ನು ಸೈನಿಕರು ಹಿಮ್ಮೆಟ್ಟಿಸಿದ್ದು ಪ್ರತಿ ದಾಳಿಯಲ್ಲಿ 80 ಉಗ್ರರನ್ನೂ ಕೊಲ್ಲಲಾಗಿದೆ.

ಸೇನಾಮೂಲಗಳು ಕೇವಲ 26 ಸೈನಿಕರು ಸತ್ತಿರುವುದಾಗಿ ಹೇಳಿದ್ದರೂ, ಉಗ್ರರು ಮಾತ್ರ 70 ಸೈನಿಕರನ್ನು ಕೊಂದಿರುವುದಾಗಿ ಹೇಳಿದ್ದಾರೆ. ಮಾತ್ರವಲ್ಲ ಸೇನೆಗೆ ಸೇರಿದ ವಾಹನ, ಶಸ್ತ್ರಾಸ್ತ್ರಗಳು, ಯುದ್ಧೋಪರಣಗಳನ್ನು ವಶಕ್ಕೆ ಪಡೆದಿರುವುದಾಗಿ ಹೇಳಿದ್ದಾರೆ.

ಕಳೆದ ಏಪ್ರಿಲ್ ನಲ್ಲಿ ಇದೇ ರೀತಿ ಸೇನಾನೆಲೆಯ ಮೇಲೆ ದಾಳಿ ನಡೆಸಿ ಉಗ್ರರು 140 ಸೈನಿಕರನ್ನು ಕೊಂದಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

English summary
At least 26 Afghan soldiers have been killed and 13 wounded in a Taliban attack on a military base in Kandahar province. More than 80 Taliban terrorists were also killed in the counter-attack.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X