ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈಜಿಪ್ಟ್ ನಲ್ಲಿ ಗುಂಡಿನ ದಾಳಿ 23 ಮಂದಿ ಸಾವು

ಈಜಿಪ್ಟಿನ ಮಿನ್ಯಾದಲ್ಲಿ ಶುಕ್ರವಾರದಂದು ಕಾಪ್ಟಿಕ್ ಕ್ರಿಶ್ಚಿಯನ್ಸ್ ಗಳಿದ್ದ ಬಸ್ ಹಾಗು ಟ್ರಕ್ ಮೇಲೆ ಶಸ್ಟ್ರಧಾರಿಯೊಬ್ಬ ದಾಳಿ ನಡೆಸಿದ್ದಾನೆ. ಈ ದಾಳಿಯಲ್ಲಿ 23 ಮಂದಿ ಸಾವನ್ನಪ್ಪಿದ್ದು, 25 ಮಂದಿಗೆ ತೀವ್ರಗಾಯಗಳಾಗಿವೆ.

By Mahesh
|
Google Oneindia Kannada News

ಕೈರೋ, ಮೇ 26: ಈಜಿಪ್ಟಿನ ಮಿನ್ಯಾದಲ್ಲಿ ಶುಕ್ರವಾರದಂದು ಕಾಪ್ಟಿಕ್ ಕ್ರಿಶ್ಚಿಯನ್ಸ್ ಗಳಿದ್ದ ಬಸ್ ಹಾಗು ಟ್ರಕ್ ಮೇಲೆ ಶಸ್ಟ್ರಧಾರಿಯೊಬ್ಬ ದಾಳಿ ನಡೆಸಿದ್ದಾನೆ. ಈ ದಾಳಿಯಲ್ಲಿ 23 ಮಂದಿ ಸಾವನ್ನಪ್ಪಿದ್ದು, 25 ಮಂದಿಗೆ ತೀವ್ರಗಾಯಗಳಾಗಿವೆ.

ಬೆನಿ ಸೂಫ್ ಪ್ರಾತ್ದ ಅನ್ಬಾ ಸ್ಯಾಮುಯಲ್ ಧಾರ್ಮಿಕ ಕೇಂದ್ರಕ್ಕೆ ತೆರಳುತ್ತಿದ್ದರು.ಇಲ್ಲಿ ತನಕ ಈ ದಾಳಿಯ ಹೊಣೆಯನ್ನು ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ. ಈ ಪ್ರಾಂತ್ಯದ ರಾಜ್ಯಪಾಲ ಎಸ್ಸಾಮ್ ಅಲ್ ಬೆದೈವಿ ಅವರು ಸಾವು -ನೋವಿನ ವಿವರ ಇನ್ನೂ ನಿಖರವಾಗಿ ತಿಳಿದು ಬಂದಿಲ್ಲ. 23 ಮಂದಿ ಸಾವನ್ನಪ್ಪಿರುವುದು ಪ್ರಾಥಮಿಕ ವರದಿಯಿಂದ ತಿಳಿದು ಬಂದಿದೆ ಎಂದಿದ್ದಾರೆ.

23 dead as gunmen ambush convoy with Coptic Christians in Egypt

ಸಂಭಾವ್ಯ ಉಗ್ರರ ದಾಳಿಯ ಬಗ್ಗೆ ಮೇ 24 ರಂದು ಅಮೆರಿಕ ರಾಯಭಾರಿ ಕಚೇರಿಯಿಂದ ಮುನ್ನಚ್ಚರಿಕೆ ನೀಡಲಾಗಿತ್ತು. Hassm ಗುಂಪಿನಿಂದ ದಾಳಿಯಾಗುವ ನಿರೀಕ್ಷೆ ಇತ್ತು. ಆದರೆ, ಯಾವುದೇ ಉಗ್ರ ಸಂಘಟನೆ ಇನ್ನೂ ದಾಳಿಯ ಹೊಣೆ ಹೊತ್ತಿಲ್ಲದಿರುವುದರಿಂದ ಸದ್ಯಕ್ಕೆ ಕಾರ್ಯಾಚರಣೆಗೆ ಮುಂದಾಗಲು ಸಾಧ್ಯವಿಲ್ಲ ಎಂದು ಈಜಿಪ್ಟ್ ನ ಅಧಿಕಾರಿಗಳು ಹೇಳಿದ್ದಾರೆ.

English summary
23 persons have died and 25 injured after gunmen opened fire on two buses and a truck carrying Coptic Christians in Minya, Egypt on Friday The attack happened as the victims traveled from Beni Suef province to the Anba Samuel monastery near the southern city of Minya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X