ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮ್ಯಾಂಚೆಸ್ಟರ್ ಅರೇನಾದಲ್ಲಿ ಬಾಂಬ್ ಸ್ಫೋಟ, 22 ಮಂದಿ ಸಾವು

ಇಂಗ್ಲೆಂಡ್ ನ ಮ್ಯಾಂಚೆಸ್ಟರ್ ಅರೇನಾದಲ್ಲಿ ಸೋಮವಾರ ಪಾಪ್ ಸಗೀತ ಕಾರ್ಯಕ್ರಮದ ನಂತರ ಬಾಂಬ್ ಸ್ಫೋಟವಾಗಿ 22 ಮಂದಿ ಮೃತಪಟ್ಟಿದ್ದಾರೆ. ಸ್ಫೋಟದ ಬಗ್ಗೆ ವರದಿ ಇಲ್ಲಿದೆ

|
Google Oneindia Kannada News

22 ಮಂದಿ ಮೃತಪಟ್ಟು, ಐವತ್ತು ಮಂದಿಗೆ ಗಾಯವಾದ ಘಟನೆ ಇಂಗ್ಲೆಂಡ್ ನ ಮ್ಯಾಂಚೆಸ್ಟರ್ ಅರೇನಾದ ಸಂಗೀತ ಕಾರ್ಯಕ್ರಮದಲ್ಲಿ ಸಂಭವಿಸಿದೆ.

ಆತ್ಮಹತ್ಯಾ ಬಾಂಬರ್ ನಿಂದ ಈ ಕೃತ್ಯ ನಡೆದಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಮ್ಯಾಂಚೆಸ್ಟರ್ ಪೊಲೀಸರು ಫೇಸ್ ಬುಕ್ ನಲ್ಲಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

"ಮ್ಯಾಂಚೆಸ್ಟರ್ ಅರೇನಾದ ಬಾಂಬ್ ಸ್ಫೋಟವಾದ ಸ್ಥಳದಲ್ಲಿ ತುರ್ತು ಸೇವೆ ಒದಗಿಸಲಾಗುತ್ತಿದೆ. ಈ ಘಟನೆಯಲ್ಲಿ ಹಲವರು ಮೃತಪಟ್ಟಿದ್ದು, ಹಲವರಿಗೆ ಗಾಯಗಳಾಗಿವೆ. ಆ ಸ್ಥಳದಲ್ಲಿ ಕಾರ್ಯಾಚರಣೆ ಕೈಗೊಳ್ಳಲು ನೆರವಾಗಿ. ಅಲ್ಲಿಂದ ದೂರವಿರಿ. ಗಾಯಾಳುಗಳ ಬಗ್ಗೆ ಮಾಹಿತಿ ನೀಡುವ ದಳವು ಶೀಘ್ರವೇ ಮಾಹಿತಿ ಒದಗಿಸುತ್ತದೆ" ಎಂದು ತಿಳಿಸಿದ್ದಾರೆ.[ಬಲೂಚಿಸ್ತಾನದಲ್ಲಿ ಬಾಂಬ್ ಸ್ಫೋಟ, 10 ಸಾವು]

19 dead as blasts hit concert at Manchester Arena in England

ಅರೇನಾ ಗ್ರಾಂಡೇ ಸಂಗೀತ ಕಾರ್ಯಕ್ರಮದಲ್ಲಿ ಸೋಮವಾರ ಎರಡು ಭಾರೀ ಸ್ಫೋಟದ ಸದ್ದು ಕೇಳಿದ ನಂತರ ಮ್ಯಾಂಚೆಸ್ಟರ್ ಅರೇನಾದಿಂದ ದೂರ ಉಳಿಯುವಂತೆ ಎಚ್ಚರಿಕೆ ನೀಡಲಾಗಿದೆ. ಇವೋ ಡೆಲ್ಗಾಡೋ ಎಂಬ ಪ್ರತ್ಯಕ್ಷದರ್ಶಿ ಸಿಎನ್ ಎನ್ ಮಾಧ್ಯಮದ ಜತೆ ಮಾತನಾಡಿ, ವೇದಿಕೆ ಹಾಗೂ ಪ್ರೇಕ್ಷಕರು ಕೂರುವ ಸ್ಥಳದಲ್ಲಿ ಭಾರೀ ಹೊಗೆಯಿತ್ತು. ಅಲ್ಲಿ ತುಂಬ ದೊಡ್ಡ ಸ್ಫೋಟವಾಯಿತು. ಎಲ್ಲರೂ ಕೂಗಿಕೊಂಡು ಓಡಿಹೋದರು ಎಂದು ಹೇಳಿದ್ದಾರೆ.

ಸಂಗೀತ ಕಾರ್ಯಕ್ರಮದ ನಂತರ ಎರಡು ಬಾರಿ ದೊಡ್ಡ ಶಬ್ದ ಕೇಳಿಸಿತು. ಇನ್ನು ಗ್ರೇಟರ್ ಮ್ಯಾಂಚೆಸ್ಟರ್ ಪೊಲೀಸರು ಹೇಳಿರುವ ಪ್ರಕಾರ, ಹಲವರು ಮೃತಪಟ್ಟು, ಅನೇಕರಿಗೆ ಗಾಯಗಳಾಗಿವೆ. ಬಾಂಬ್ ಸ್ಫೋಟಕ್ಕೆ ಕಾರಣ ಏನು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಭಯೋತ್ಪಾದನಾ ನಿಗ್ರಹ ದಳವು ಇದನ್ನು ಭಯೋತ್ಪಾದನೆ ಕೃತ್ಯ ಎಂದೇ ಪರಿಗಣಿಸಲಿದೆ.[ಸಿರಿಯಾದಲ್ಲಿ ಕಾರ್ ಬಾಂಬ್ ದಾಳಿಗೆ 100ಕ್ಕೂ ಅಧಿಕ ಮಂದಿ ಬಲಿ]

ಸ್ಫೋಟದ ಸ್ಥಳಕ್ಕೆ ಹತ್ತಿರದಲ್ಲಿರುವ ಮ್ಯಾಂಚೆಸ್ಟರ್ ವಿಕ್ಟೋರಿಯಾ ನಿಲ್ದಾಣವನ್ನು ಮುಚ್ಚಲಾಗಿದೆ. ಎಲ್ಲ ರೈಲುಗಳ ಸಂಚಾರವನ್ನು ರದ್ದುಪಡಿಸಲಾಗಿದೆ. ಬಿಬಿಸಿ ವರದಿ ಪ್ರಕಾರ ಗಾಯಾಳುಗಳಿಗೆ ಪ್ಯಾರಾ ಮೆಡಿಕಲ್ ನವರು ಚಿಕಿತ್ಸೆ ನೀಡಿದ್ದಾರೆ.

English summary
22 persons have died and 50 injured after multiple blasts hit the Manchester Arena in England during a concert. The police are not ruling out the role of a suicide bomber.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X