ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ರಮವಾಗಿ ಸೌದಿಯಲ್ಲಿ ನೆಲೆಸಿರುವ ಸಾವಿರಾರು ಭಾರತೀಯರಿಗೆ ಸಂಕಷ್ಟ

ವೀಸಾ ಅವಧಿ ಮುಗಿದರೂ ಅಕ್ರಮವಾಗಿ ಸೌದಿ ಅರೇಬಿಯಾದಲ್ಲಿ ನಲೆಸಿರುವ ಸಾವಿರಾರು ಭಾರತೀಯರಿಗೆ ಸಂಕಷ್ಟ ಎದುರಾಗಿದೆ. ದೇಶ ಬಿಟ್ಟು ತೆರುಳುವಂತೆ ಅಲ್ಲಿನ ಸರ್ಕಾರ 90 ದಿನಗಳ ಗಡವು ನೀಡಿದೆ.

|
Google Oneindia Kannada News

ರಿಯಾದ್, ಮೇ 03 : ಅಕ್ರಮವಾಗಿ ವಲಸೆ ಹೋಗಿ ಸೌದಿ ಅರೇಬಿಯಾದಲ್ಲಿ ನೆಲೆಸಿರುವ ಸಾವಿರಾರು ಭಾರತೀಯರಿಗೆ ಇದೀಗ ಸಂಕಷ್ಟ ಎದುರಾಗಿದೆ.

ಭಾರತದದಿಂದ ಅಕ್ರಮವಾಗಿ ಸೌದಿ ಅರೇಬಿಯಾಗೆ ವಲಸೆ ಹೋಗಿ ನೆಲೆಸಿರುವ ಸುಮಾರು 20,000ಕ್ಕೂ ಅಧಿಕ ಜನರಿಗೆ ಅಲ್ಲಿನ ಸರ್ಕಾರ 90 ದಿನಗಳ ಕ್ಷಮಾದಾನ ಗಡುವು ನೀಡಿದೆ. ಇದರಿಂದ ಸಧ್ಯದಲ್ಲಿಯೇ ಅಕ್ರಮ ವಲಸಿಗರು ಭಾರತಕ್ಕೆ ವಾಪಸ್ಸಾಗಲಿದ್ದಾರೆ.

20,000 Indians to return from Saudi Arabia via amnesty scheme

ಈ ಬಗ್ಗೆ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿ ಅನಿಲ್ ನೌತಿಯಾಲ್ ಖಾಸಗಿ ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದು, 20,321 ಭಾರತೀಯರು ದೇಶಕ್ಕೆ ವಾಪಾಸ್ಸಾಗಲು ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿಸಿದ್ದಾರೆ.

ಈ ಪೈಕಿ 1,500 ಬ್ಲೂ ಕಾಲರ್ ಕೆಲಸಗಾರರು ತಮಿಳುನಾಡಿನ ಮೂಲದವರಾಗಿದ್ದು, ಕ್ಷಮಾದಾನದ ಯೋಜನೆಯಡಿ ವಾಪಸ್ಸಾಗುತ್ತಿರುವವರ ಪೈಕಿ ಉತ್ತರ ಪ್ರದೇಶ ಹಾಗೂ ಬಿಹಾರ ಮೂಲದವರು ಹೆಚ್ಚಿನವರಾಗಿದ್ದಾರೆ ಎಂದು ಅನಿಲ್ ನೌತಿಯಾಲ್ ಹೇಳಿದ್ದಾರೆ.

ಸೌದಿಯನ್ನು ತೊರೆಯುತ್ತಿರುವ ಭಾರತೀಯ ನಾಗರಿಕರಿಗಾಗಿಯೇ ಅಲ್ಲಿನ ಸರ್ಕಾರ ಪ್ರತ್ಯೇಕ ಕೇಂದ್ರಗಳನ್ನು ತೆರೆದಿದ್ದು, ಅಕ್ರಮವಾಗಿ ವಾಸಿಸುತ್ತಿರುವವರಿಗೆ ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳುವಂತೆ ಕರೆ ನೀಡಿರುವುದಾಗಿ ಅನಿಲ್ ತಿಳಿಸಿದ್ದಾರೆ.

English summary
Thousands of Indian workers stranded in Saudi Arabia after travelling there illegally and those who overstayed their visas, including a large number from Tamil Nadu, are ready to return to India under a 90 day amnesty period that the kingdom's government has offered them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X