ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ-ಆಸ್ಟ್ರೇಲಿಯಾ ಪ್ರಥಮ ಟೆಸ್ಟ್ ಮುಂದೂಡಿಕೆ

By Kiran B Hegde
|
Google Oneindia Kannada News

ಮೆಲ್ಬೋರ್ನ್, ನ. 29: ಬೌನ್ಸರ್‌ಗೆ ಆಸ್ಟ್ರೇಲಿಯಾ ಆಟಗಾರ ಫಿಲ್ ಹ್ಯೂಜಸ್ ಬಲಿಯಾದ ಹಿನ್ನೆಲೆಯಲ್ಲಿ ಭಾರತ-ಆಸ್ಟ್ರೇಲಿಯಾ ಪ್ರಥಮ ಟೆಸ್ಟ್ ಮುಂದೂಡಲ್ಪಟ್ಟಿದೆ.

ಆಸ್ಟ್ರೇಲಿಯಾದ ಬ್ರಿಸ್ಬೇನ್ ನಗರದಲ್ಲಿ ಡಿಸೆಂಬರ್ 4ರಂದು ಆಸ್ಟ್ರೇಲಿಯಾ ಹಾಗೂ ಭಾರತ ಮಧ್ಯೆ ಪ್ರಥಮ ಟೆಸ್ಟ್ ಆರಂಭವಾಗಬೇಕಿತ್ತು. ಈಗ ಪಂದ್ಯವನ್ನು ಮುಂದೂಡಲಾಗಿದ್ದರೂ ಮುಂದಿನ ದಿನಾಂಕವನ್ನು ಪ್ರಕಟಿಸಿಲ್ಲ. ಈ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತವು ನಾಲ್ಕು ಪಂದ್ಯಗಳನ್ನು ಆಡಲಿತ್ತು. [ಭಾರತ-ಆಸ್ಟ್ರೇಲಿಯಾ ವೇಳಾಪಟ್ಟಿ, ಟಿವಿ ಟೈಮಿಂಗ್ಸ್]

ಈ ಸಂದರ್ಭದಲ್ಲಿ ನಿಗದಿಪಡಿಸಿದ್ದ ದಿನಾಂಕದಲ್ಲಿ ಪಂದ್ಯ ಆಡುವುದು ಕಾರ್ಯಸಾಧುವೂ ಅಲ್ಲ, ನ್ಯಾಯೋಚಿತವೂ ಅಲ್ಲ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿಕೆ ನೀಡಿದೆ.

ತಂಡದ ಸದಸ್ಯನೋರ್ವನ ಅಂತ್ಯಸಂಸ್ಕಾರದ ಮರುದಿನವೇ ಉಳಿದ ಆಟಗಾರರು ಪಂದ್ಯ ಆಡಲು ಮಾನಸಿಕವಾಗಿ ಸಿದ್ಧರಾಗುವುದು ಸಾಧ್ಯವಿಲ್ಲ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜೇಮ್ಸ್ ಸುಥರ್‌ಲ್ಯಾಂಡ್ ತಿಳಿಸಿದ್ದಾರೆ. [ಆಸ್ಟ್ರೇಲಿಯಾ ಕ್ರಿಕೆಟರ್ ಗೆ ಮಾರಕವಾದ ಬೌನ್ಸರ್]

bcci

ಬಿಬಿಸಿಐಗೆ ಧನ್ಯವಾದ ಹೇಳಿದ ಕ್ರಿಕೆಟ್ ಆಸ್ಟ್ರೇಲಿಯಾ: ಆಸ್ಟ್ರೇಲಿಯಾ ಎದುರಿಸುತ್ತಿರುವ ಸಂಧಿಗ್ಧ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಪಂದ್ಯ ಮುಂದೂಡಲು ಕೈಗೊಂಡ ತೀರ್ಮಾನಕ್ಕೆ ಬಿಸಿಸಿಐ ಬೆಂಬಲ ನೀಡಿದೆ. ಇದಕ್ಕಾಗಿ ನಾವು ಅವರಿಗೆ ಧನ್ಯವಾದ ಅರ್ಪಿಸುತ್ತೇವೆ ಎಂದು ಜೇಮ್ಸ್ ತಿಳಿಸಿದರು. [ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್, ಕನ್ನಡಿಗ ರಾಹುಲ್ ಆಯ್ಕೆ]

ಪಂದ್ಯ ಮುಂದೂಡಿದ್ದರಿಂದ ಉಂಟಾಗಿರುವ ಗೊಂದಲ ಹಾಗೂ ಆತಂಕಗಳನ್ನು ನಾವು ಕೆಲವೇ ದಿನಗಳಲ್ಲಿ ಬಗೆಹರಿಸಲಿದ್ದೇವೆಂದು ಅವರು ಭರವಸೆ ನೀಡಿದರು. [ಫಿಲ್ ಹ್ಯೂಜ್ ಚೇತರಿಕೆಗೆ ಕೊಯ್ಲಿ ಶುಭ ಹಾರೈಕೆ]

ಅಲ್ಲದೆ, ಹ್ಯೂಜಸ್ ಸಾವಿನ ಹಿನ್ನೆಲೆಯಲ್ಲಿ ಅಡೆಲೇಡ್‌ ನಗರದಲ್ಲಿ ನಡೆಯಬೇಕಿದ್ದ ಭಾರತದ ಯೋಜಿತ ಎರಡು ದಿನಗಳ ಪಂದ್ಯ ಕೂಡ ರದ್ದಾಗಿದೆ.

huges

ಡಿಸೆಂಬರ್ 3ರಂದು ಹ್ಯೂಜಸ್ ಅಂತ್ಯಸಂಸ್ಕಾರ: ಮೃತ ಹ್ಯೂಜಸ್ ಅವರ ಅಂತ್ಯ ಸಂಸ್ಕಾರ ಡಿಸೆಂಬರ್ 3ರಂದು ಬುಧವಾರ ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ. ಹ್ಯೂಜಸ್ ಕುಟುಂಬದ ವಾಸಸ್ಥಾನವಾದ ಉತ್ತರದ ನ್ಯೂ ಸೌತ್ ವೇಲ್ಸ್‌ನಲ್ಲಿರುವ ಮ್ಯಾಕ್ಸ್‌ವಿಲ್ಲೆ ನಗರದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.

English summary
The 1st India-Australia Test has been postponed due to the death of Phil Hughes, Cricket Australia (CA) announced Saturday. The first Test in Brisbane was to start on December 4 (Thursday). However, it will be played later, for which the date is yet to be announced. This is a four-Test series.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X