ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಫ್ಘಾನಿಸ್ತಾನ ಸುಪ್ರಿಂ ಕೋರ್ಟ್ ಮೇಲೆ ಆತ್ಮಾಹುತಿ ದಾಳಿ; 19 ಕ್ಕೂ ಹೆಚ್ಚು ಸಾವು

ಅಫ್ಘಾನಿಸ್ತಾನದ ಸುಪ್ರಿಂ ಕೋರ್ಟ್ ಸಮೀಪ ಆತ್ಮಾಹುತಿ ಬಾಂಬ್ ಸ್ಪೋಟಿಸಿದ ಪರಿಣಾಮ 19 ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಸುಪ್ರಿಂ ಕೊರ್ಟ್ ಆವರಣದ ಕಾರ್ ಪಾರ್ಕಿಂಗ್ ನಲ್ಲಿ ಈ ಭೀಕರ ಬಾಂಬ್ ಸ್ಪೋಟಿಸಿದೆ.

By Sachchidananada
|
Google Oneindia Kannada News

ಅಫ್ಘಾನಿಸ್ತಾನದ ಸುಪ್ರಿಂ ಕೋರ್ಟ್ ಸಮೀಪ ಆತ್ಮಾಹುತಿ ಬಾಂಬ್ ಸ್ಪೋಟಿಸಿದ ಪರಿಣಾಮ 19 ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಸುಪ್ರಿಂ ಕೊರ್ಟ್ ಆವರಣದ ಕಾರ್ ಪಾರ್ಕಿಂಗ್ ನಲ್ಲಿ ಈ ಭೀಕರ ಬಾಂಬ್ ಸ್ಪೋಟಿಸಿದೆ.

ಘಟನೆಯಲ್ಲಿ 41ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸಾವನ್ನಪ್ಪಿದವರಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಕೋರ್ಟ್ ಸಿಬ್ಬಂದಿಗಳ ಬಂಧುಗಳು ದೊಡ್ಡ ಸಂಖ್ಯೆಯಲ್ಲಿ ಬರುತ್ತಿದ್ದು ರಸ್ತೆಗಳನ್ನು ಪೊಲೀಸರು ಬಂದ್ ಮಾಡಿದ್ದಾರೆ. ಸ್ಥಳದಲ್ಲಿ ಆಂಬುಲೆನ್ಸ್ ಮತ್ತು ಅಗ್ನಿಶಾಮಕ ದಳದ ವಾಹನಗಳು ಜಮಾಯಿಸಿವೆ. [ಅಫ್ಘಾನಿಸ್ತಾನದಲ್ಲಿ ಭೀಕರ ಹಿಮ ಕುಸಿತ; 100ಕ್ಕೂ ಹೆಚ್ಚು ಸಾವು]

19 more died in Suicide blast strikes near Kabul Supreme Court

ಸಿಬ್ಬಂದಿಗಳು ಮನೆಗೆ ಹೊರಡಲು ಬಸ್ ಹತ್ತುತ್ತಿದ್ದ ವೇಳೆ ಬಾಂಬ್ ಸ್ಪೋಟ ಸಂಭವಿಸಿದ್ದು ಹೆಚ್ಚಿನ ಸಾವು ನೋವಿಗೆ ಕಾರಣ ಎನ್ನಲಾಗಿದೆ. ಇಲ್ಲೀವರೆಗೆ ಯಾವುದೇ ಸಂಘಟನೆ ಘಟನೆಯ ಹೊಣೆ ಹೊತ್ತುಕೊಂಡಿಲ್ಲ. [ಹಫೀಜ್ ನಿಂದ ಹೊಸ ಸಂಘಟನೆ ತೆಹ್ರೀಕ್ ಆಜಾದಿ ಜಮ್ಮು ಅಂಡ್ ಕಾಶ್ಮೀರ್]

English summary
A suspected suicide bomber targeted the Supreme Court building in the Afghan capital, Kabul, killing at least 19 people and injured more than 41 people, officials said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X