ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನದಲ್ಲಿ ಅವಳಿ ಬಾಂಬ್ ಸ್ಫೋಟಕ್ಕೆ 18 ಸಾವು

ಪಾಕಿಸ್ತಾನದ ಪರಾಚಿನಾರ್ ಪ್ರಾಂತ್ಯದ ಮಾರುಕಟ್ಟೆಯಲ್ಲಿ ಬಾಂಬ್ ಸ್ಫೋಟ. ಕನಿಷ್ಠ 18 ಸಾವು. ಇಫ್ತಾರ್ ಹಾಗೂ ರಂಜಾನ್ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಸಾಕಷ್ಟು ಜನರು ನೆರೆದಿದ್ದಾಗ ನಡೆದ ಸ್ಫೋಟ.

|
Google Oneindia Kannada News

ಪೆಶಾವರ್, ಜೂನ್ 23: ಪಾಕಿಸ್ತಾನ- ಆಫ್ಘಾನಿಸ್ತಾನ ಗಡಿ ಪ್ರದೇಶದಲ್ಲಿರುವ ಕುರಮ್ ಗುಡ್ಡಗಾಡು ಪ್ರಾಂತ್ಯದ ಪರಾಚಿನಾರ್ ಪ್ರಾಂತ್ಯದಲ್ಲಿರುವ ಜನನಿಬಿಡ ಮಾರುಕಟ್ಟೆಯೊಂದರಲ್ಲಿ ನಡೆದ ಅವಳಿ ಬಾಂಬ್ ಸ್ಫೋಟದಲ್ಲಿ ಕನಿಷ್ಠ 18 ಜನರು ಮೃತಪಟ್ಟಿದ್ದಾರೆ.

ಇಫ್ತಾರ್ ಹಾಗೂ ರಂಜಾನ್ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಸಾಕಷ್ಟು ಜನರು ನೆರೆದಿದ್ದರು. ಈ ಸಂದರ್ಭದಲ್ಲೇ ಮೊದಲೊಂದು ಸ್ಫೋಟ ಸಂಭವಿಸಿತು.

18 killed, 100 injured in twin blasts in Pak's tribal area

ಈ ಸ್ಫೋಟಕ್ಕೆ ಇಡೀ ಮಾರುಕಟ್ಟೆಯೇ ಅಲ್ಲೋಲ ಕಲ್ಲೋಲವಾಗಿ ಜನರು ದಿಕ್ಕಾಪಾಲಾಗಿ ಓಡಿದರು. ಅಷ್ಟರಲ್ಲಿ ಆಸ್ಪತ್ರೆಯಿಂದ ಆ್ಯಂಬುಲೆನ್ಸ್ ಗಳಲ್ಲಿ ವೈದ್ಯಕೀಯ ಸಿಬ್ಬಂದಿ ಬಂದರು. ಗಾಯಾಳುಗಳನ್ನು ಅವರು ಸಾಗಿಸಲು ಮುಂದಾದರು.

ಇದೇ ವೇಳೆ, ಪೊಲೀಸರೂ ಆಗಮಿಸಿ ಅವರಿಗೆ ಸಹಾಯ ಮಾಡಲು ಮುಂದಾದರು. ಇತರ ಜನರೂ ಅವರಿಗೆ ಸಹಾಯ ಮಾಡಲು ಬಂದರು. ಆದರೆ, ಆಗಲೇ ಮತ್ತೊಂದು ಸ್ಫೋಟ ಉಂಟಾಯಿತು.

ಒಟ್ಟಾರೆಯಾಗಿ, ಈ ಎರಡೂ ಸ್ಫೋಟಗಳಲ್ಲಿ ಒಟ್ಟು 18 ಜನರು ಮೃತಪಟ್ಟಿದ್ದಾರೆಂದು ಪಾಕಿಸ್ತಾನ ಸೇನೆ ಹೇಳಿದೆ.

English summary
At least 18 people were killed and more than 100 others injured on Friday in powerful twin blasts at a crowded market in Parachinar area of Pakistan's Kurram tribal district, bordering Afghanistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X