ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೇಪಾಳ: ಬಸ್ ಅಪಘಾತ, ಭಾರತದ ಯಾತ್ರಿಗಳ ಸಾವು

By Mahesh
|
Google Oneindia Kannada News

ಕಠ್ಮಂಡು, ಏ.22: ನೇಪಾಳದ ಧಾಡಿಂಗ್ ಜಿಲ್ಲೆಯಲ್ಲಿ ಬುಧವಾರ ಸಂಭವಿಸಿದ ಬಸ್ ಅಪಘಾತದಲ್ಲಿ 12 ಮಂದಿ ಭಾರತೀಯರು ಮೃತಪಟ್ಟಿದ್ದಾರೆ. ಭಾರತದ ಯಾತ್ರಾರ್ಥಿಗಳು ಪಶುಪತಿನಾಥ ದೇಗುಲ ದರ್ಶನ ಮುಗಿಸಿಕೊಂಡು ಗೋರಖ್ ಪುರಕ್ಕೆ ಮರಳುತ್ತಿದ್ದಾಗ ಈ ದುರಂತ ಸಂಭವಿಸಿದೆ.

ಕಠ್ಮಂಡುವಿನಿಂದ ಗೋರಖ್‌ಪುರಕ್ಕೆ ಹೊರಟಿದ್ದ ಖಾಸಗಿ ಬಸ್ ಧಾಡಿಂಗ್‌ ಜಿಲ್ಲೆಯ ನೌಬಿಸೆ ಗ್ರಾಮದ ಬಳಿ ಬೆಟ್ಟದಿಂದ ಕೆಳಗುರುಳಿದಿದೆ. ನೇಪಾಳದಿಂದ ಸುಮಾರು 50-60 ಕಿ.ಮೀ ದೂರದಲ್ಲಿ ಜೈಪ್ರಿ ನದಿ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದೆ.

12 Indian pilgrims die in bus accident in Nepal
ಈ ದುರ್ಘಟನೆಯಲ್ಲಿ 12 ಜನ ಭಾರತೀಯರು ಮೃತ ಪಟ್ಟಿದ್ದು, 27 ಜನ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದು , ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಎಸ್ ಪಿ ಬಿಶ್ವೋರಾಜ್ ಪೊಖ್ರಾರೆಲ್ ಹೇಳಿದ್ದಾರೆ.

ಮೃತಪಟ್ಟವರು ಎಲ್ಲರೂ ಗುಜರಾತ್ ಮೂಲದವರು ಎಂದು ತಿಳಿದು ಬಂದಿದೆ. ಇವರೆಲ್ಲ ನೇಪಾಳ ಪ್ರವಾಸ ಕೈಗೊಂಡಿದ್ದರು. ಗಾಯಗೊಂಡವರಲ್ಲಿ 6 ಜನರ ಸ್ಥಿತಿ ಗಂಭೀರವಾಗಿದೆ. ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ನೇಪಾಳದಲ್ಲಿ ಕಳೆದ ವರ್ಷ ಡಿಸೆಂಬರ್ ನಲ್ಲಿ ಬಸ್ ನದಿಗೆ ಬಿದ್ದು , 20 ಜನ ಮೃತಪಟ್ಟಿದ್ದರು.[ವರದಿ ಇಲ್ಲಿ ಓದಿ] (ಪಿಟಿಐ)

English summary
Twelve Indian pilgrims were killed and more than 30 injured after a bus veered off the highway and rolled down 150 meters before plunging into a river in Nepal on Wednesday, police said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X