ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ನಮ್ಮ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದ್ದಕ್ಕೆ, ನಿಮ್ಮ ಸೈನಿಕರನ್ನು ಕೊಂದ್ವಿ'

ಮಾವೋವಾದಿ ಕಮ್ಯೂನಿಸ್ಟ್ ಪಕ್ಷದ ದಂಡಕಾರಣ್ಯ ವಿಶೇಷ ಸಮಿತಿ ಸುಕ್ಮಾ ದಾಳಿಗೆ ಪ್ರತಿಕ್ರಿಯೆ ನೀಡಿದ್ದು ಸುಕ್ಮಾ ದಾಳಿ, ಬುಡಕಟ್ಟು ಮಹಿಳೆಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯಕ್ಕೆ ಪ್ರತೀಕಾರ ಎಂದು ಪ್ರತಿಪಾದಿಸಿದೆ.

By ವಿಕಾಸ್ ನಂಜಪ್ಪ
|
Google Oneindia Kannada News

ಛತ್ತೀಸ್ ಗಢ, ಏಪ್ರಿಲ್ 28: ಸುಕ್ಮಾ ದಾಳಿಯಲ್ಲಿ 25 ಸಿಆರ್‌ಪಿಎಫ್ ಜವಾನರು ಅಸುನೀಗಿದ ನಂತರ ಮಾವೋವಾದಿಗಳ ವಕ್ತಾರ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಮಾವೋವಾದಿ ಕಮ್ಯೂನಿಸ್ಟ್ ಪಕ್ಷದ ದಂಡಕಾರಣ್ಯ ವಿಶೇಷ ಸಮಿತಿ ಈ ಕುರಿತು ಪ್ರತಿಕ್ರಿಯೆ ನೀಡಿದ್ದು ಸುಕ್ಮಾ ದಾಳಿ, ಬುಡಕಟ್ಟು ಮಹಿಳೆಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯಕ್ಕೆ ಪ್ರತೀಕಾರ ಎಂದು ಪ್ರತಿಪಾದಿಸಿದೆ.[ಸಿಆರ್‌ಪಿಎಫ್ ನೂತನ ಮುಖ್ಯಸ್ಥರಾಗಿ ರಾಜೀವ್ ರೈ]

ಈ ಕುರಿತು ಆಡಿಯೋ ಟೇಪ್ ಒಂದನ್ನು ಬಿಡುಗಡೆ ಮಾಡಲಾಗಿದ್ದು ಇದರಲ್ಲಿ ಮಾವೋವಾದಿಗಳ ವಕ್ತಾರ ವಿಕಲ್ಪ್ ಸಿಆರ್‌ಪಿಎಫ್ ಜವಾನರ ಮೇಲೆ ಯಾವುದೇ ರೀತಿಯಲ್ಲಿ ಹಿಂಸೆ ನಡೆಸಿಲ್ಲ. ಗಾಯಗೊಂಡಿರುವ ದೇಹಗಳನ್ನು ತೋರಿಸಿ ಕಾರ್ಪೋರೇಟ್ ಮಾಧ್ಯಮಗಳು ಸುಳ್ಳು ಸುದ್ದಿ ಹರಡುತ್ತಿವೆ ಎಂದು ದೂರಿದ್ದಾರೆ.

You sexually abused our women, we killed your jawans: Maoist leader on Sukhma attack

ಈ ದಾಳಿ ಸರಕಾರ ಮತ್ತು ಭದ್ರತಾ ಪಡೆಗಳಿಗೆ ನಾವು ನೀಡಿದ ಉತ್ತರವಾಗಿದೆ.ಇಲ್ಲಿನ ಬುಟಕಟ್ಟು ಜನರ ಮೇಲೆ ಭದ್ರತಾ ಪಡೆಗಳು ನಿರಂತರ ಲೈಂಗಿಕ ದೌರ್ಜನ್ಯ ನಡೆಸಿವೆ. ಈ ದೌರ್ಜನ್ಯಗಳಿಗೆ ಇಂಥಹದ್ದೊಂದು ಉತ್ತರ ನೀಡಿದ್ದಕ್ಕಾಗಿ ನಕ್ಸಲರ ಶಸಸ್ತ್ರ ವಿಭಾಗಕ್ಕೆ ಅಭಿನಂದನೆಗಳನ್ನು ಸಲ್ಲಿಸುವುದಾಗಿಯೂ ಅವರು ಆಡಿಯೋದಲ್ಲಿ ಹೇಳಿದ್ದಾರೆ. ಈ ದಾಳಿ ಮೂಲಕ ನಾವು ಜನಪರ ಹೋರಾಟವನ್ನು ಮುಂದಕ್ಕೆ ಕೊಂಡೊಯ್ಯುತ್ತೇವೆ ಎಂದು ಅವರು ತಿಳಿಸಿದ್ದಾರೆ.[ಅಪನಗದೀಕರಣದಿಂದ ನಕ್ಸಲರಿಗೆ ಸಮಸ್ಯೆಯಾಗಿದೆಯಾ? ಖಂಡಿತಾ ಹಾಗನಿಸಲ್ಲ]

ಬುಡಕಟ್ಟು ಮಹಿಳೆಯರ ಗೌರವ ಕಾಪಾಡಲು ನಾವು ಈ ದಾಳಿ ನಡೆಸಿದ್ದೇವೆ ಎಂದಿರುವ ವಕ್ತಾರ, ಬುಟಕಟ್ಟು ಜನರ ಅಶ್ಲೀಲ ಚಿತ್ರಗಳನ್ನೂ ಭದ್ರತಾ ಪಡೆಗಳು ತೆಗೆದಿವೆ ಎಂದೂ ಆರೋಪ ಹೊರಿಸಿದ್ದಾರೆ.

"ಆದಿವಾಸಿಗಳು ರಸ್ತೆ ನಿರ್ಮಾಣವನ್ನು ವಿರೋಧಿಸಿದರು. ಕಾರಣ ರಸ್ತೆ ನಿರ್ಮಾಣ ಮಾಡಿ ಕಾಡಿನಲ್ಲಿರುವ ನೈಸರ್ಗಿಕ ಸಂಪನ್ಮೂಲಗಳನ್ನು ಲೂಟಿ ಮಾಡಲಾಗುತ್ತದೆ," ಎಂದು ತಮ್ಮ ಹೇಳಿಕೆಯಲ್ಲಿ ವಿಕಲ್ಪ್ ರಸ್ತೆ ನಿರ್ಮಾಣಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕಾರ್ಪೊರೇಟ್ ಮಾಧ್ಯಮದಿಂದ ಸುಳ್ಳು ಸುದ್ದಿ

ಸಾವಿಗೀಡಾದ ಯೋಧರ ದೇಹಗಳ ಮೇಲೆ ದೌರ್ಜನ್ಯ ನಡೆಸಲಾಗಿದೆ ಎಂದು ಕಾರ್ಪೊರೇಟ್ ಮಾಧ್ಯಮಗಳು ಸುಳ್ಳು ಸುದ್ದಿಯನ್ನು ಹರಡುತ್ತಿವೆ. ಮಾವೋವಾದಿಗಳ ಮೇಲೆ ಸೈನಿಕರು ನಿರಂತರ ದೌರ್ಜನ್ಯ ನಡೆಸುತ್ತಿದ್ದಾರೆ. ನಾವು ಯಾವತ್ತೂ ಸೈನಿಕರ ಮೇಲೆ ದೌರ್ಜನ್ಯ ನಡೆಸಿಲ್ಲ ಎಂದು ಈ ಹೇಳಿಕೆಯಲ್ಲಿ ದೂರಿದ್ದಾರೆ.[ಛತ್ತೀಸ್ ಗಢ ನಕ್ಸಲರ ದಾಳಿ, ಗುರುತೇ ಸಿಗದಂತಾಗಿದ್ದ ಯೋಧರ ದೇಹ]

ಅಷ್ಟೇ ಅಲ್ಲ ಭದ್ರತಾ ಪಡೆಗಳು ನಕ್ಸಲರ ಮೃತ ದೇಹವನ್ನೂ ಮನೆಯವರಿಗೆ ಹಸ್ತಾಂತರಿಸುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿವೆ. ದಲಿತರು, ಬುಟಕಟ್ಟು ಜನರು, ಅಲ್ಪಸಂಖ್ಯಾತರ ಸಂಸ್ಕೃತಿ, ಆರ್ಥಿಕತೆಗಳ ಮೇಲೆ ಬ್ರಾಹ್ಮಣರು. ಹಿಂದೂತ್ವವಾದಿಗಳು, ಜಾತಿ ವಾದಿಗಳೂ, ಸಂಘಿಗಳು, ಬಿಜೆಪಿ ಸರಕಾರಗಳು ದೌರ್ಜನ್ಯ ನಡೆಸುತ್ತಿವೆ. ಇದಕ್ಕೆ ಪೊಲೀಸರು ಮತ್ತು ಭದ್ರತಾ ಪಡೆಗಳೇ ರಕ್ಷಣೆ ನೀಡಿವೆ ಎಂದು ದೂರಿದ್ದಾರೆ.

ಯೋಧರು ನಮ್ಮ ಶತ್ರುಗಳಲ್ಲ

ಯೋಧರು ನಮ್ಮ ವಿರೋಧಿಗಳಲ್ಲ. ಆದರೆ ಸರಕಾರದ ಜನ ವಿರೋಧಿ ಧೋರಣೆಯ ಭಾಗವಾಗಿ ಅವರೆಲ್ಲಾ ಹೋರಾಡಲು ಬರುತ್ತಿದ್ದಾರೆ. ಸರಕಾರ, ಗುತ್ತಿಗೆದಾರರು, ಕಾರ್ಪೊರೇಟ್ ಮಾಫಿಯಾಗಳ ಪರವಾಗಿ ಹೋರಾಡಲು ಬರಬೇಡಿ ಎಂದು ಸೈನಿಕರಿಗೆ ಮನವಿ ಮಾಡಿಕೊಳ್ಳುವುದಾಗಿಯೂ ವಿಕಲ್ಪ್ ಇದೇ ಆಡಿಯೋದಲ್ಲಿ ಹೇಳಿದ್ದಾರೆ.

ಈ ರೀತಿಯ ಜನರ ಪರವಾಗಿ ಹೋರಾಡಿ ನಿಮ್ಮ ಜೀವ ಕಳೆದುಕೊಳ್ಳಬೇಡಿ. ಸರಕಾರದ ಹುದ್ದೆ ತೊರೆದು ಜನರ ಉದ್ಧಾರಕ್ಕೆ ಹೋರಾಡಲು ಬನ್ನಿ ಎಂದು ವಿಕಲ್ಪ್ ಸೈನಿಕರಿಗೆ ಕರೆ ನೀಡಿದ್ದಾರೆ.

English summary
The Dand Karanya Special Zonal Committee (DKSZC) of the Communist Party of India (Maoist) said that the attack on the CRPF team in Chhattisgarh was in retaliation to sexual violence against women. In an audio clip that was released, the spokesperson of the DKSZC, Vikalp also denied mutilating the bodies of the 25 jawans who were killed in the attack on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X