ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ನು 5 ವರ್ಷದಲ್ಲಿ 30 ರುಪಾಯಿಗೂ ಕಡಿಮೆ ಆಗಲಿದೆ ಲೀಟರ್ ಪೆಟ್ರೋಲ್ ಬೆಲೆ

By ವಿಕಾಸ್
|
Google Oneindia Kannada News

ಮುಂದಿನ ಐದು ವರ್ಷಗಳಲ್ಲಿ ಲೀಟರ್ ಪೆಟ್ರೋಲ್ ಗೆ ಮೂವತ್ತು ರುಪಾಯಿಗಿಂತ ಕಡಿಮೆ ಆಗುವ ಸಾಧ್ಯತೆ ಇದೆ ಎಂಬ ಭವಿಷ್ಯ ನುಡಿದಿದ್ದಾರೆ ಅಮೆರಿಕದ ತಜ್ಞ ಟೋನಿ ಸೆಬಾ. ಭವಿಷ್ಯದ ತಂತ್ರಜ್ಞಾನಗಳಿಂದ ಇಡೀ ಜಗತ್ತಿನ ಪೆಟ್ರೋಲ್ ಅವಲಂಬನೆ ಕಡಿಮೆ ಆಗುತ್ತದೆ. ಆ ಕಾರಣಕ್ಕೆ ಪೆಟ್ರೋಲ್ ಬೆಲೆ ಕಡಿಮೆಯಾಗುತ್ತದೆ ಎಂದು ಹೇಳಿದ್ದಾರೆ.

ಸೌರಶಕ್ತಿ ಬಳಕೆ ಉತ್ಕರ್ಷಕ್ಕೆ ಬರುತ್ತದೆ ಎಂಬ ಸಂಗತಿಯನ್ನು ಇಂದಿಗಿಂತ ಹತ್ತು ಪಟ್ಟು ಹೆಚ್ಚು ಬೆಲೆ ಸೌರಶಕ್ತಿಗೆ ಇರುವಾಗಲೇ ಆತ ಭವಿಷ್ಯ ನುಡಿದಿದ್ದರು. ಸ್ವಂತ ಚಾಲನೆ ಆಗುವ ಕಾರುಗಳು ಕಾರಣಕ್ಕೆ ಬ್ಯಾರೆಲ್ ಪೆಟ್ರೋಲ್ ಬೆಲೆ ಇಪ್ಪತ್ತೈದು ಡಾಲರ್ ಗೆ ಕುಸಿಯಲಿದೆ. "ತೈಲ ಬೇಡಿಕೆಯು 2021-2020ರಲ್ಲಿ ಇದ್ದದ್ದು 100 ಮಿಲಿಯನ್ ಬ್ಯಾರಲ್ ಗೆ ಇಳಿಕೆಯಾಗಿ, ಮುಂದಿನ 10 ವರ್ಷಗಳಲ್ಲಿ 70 ಮಿಲಿಯನ್ ಬ್ಯಾರಲ್ ಗೆ ಇಳಿಯಲಿದೆ.[ಮೇ 1ರಿಂದ ಆಯ್ದ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಆಯಾ ದಿನವೇ ನಿಗದಿ]

You may pay below Rs 30 for petrol in 5 years

"ಇದರರ್ಥ ಏನೆಂದರೆ ಬೆಲೆಯು 25 ಅಮೆರಿಕನ್ ಡಾಲರ್ ಗೆ ಕುಸಿಯಲಿದೆ" ಎಂದು ಸೆಬಾ ಹೇಳಿದ್ದಾರೆ. ಜನರು ಹಳೆ ಕಾರುಗಳ ಬಳಕೆ ನಿಲ್ಲಿಸುವುದಿಲ್ಲ. ಆದರೆ ಸೆಲ್ಫ್ ಡ್ರೈವ್ ಕಾರುಗಳ ಬಳಕೆ ಹೆಚ್ಚಾಗಲಿದೆ. ಎಲೆಕ್ಟ್ರಿಕ್ ವಾಹನಗಳ ಬೆಲೆ ಕೂಡ ಕಡಿಮೆ ಆಗಲಿದೆ ಎಂದು ಅವರು ಹೇಳಿದ್ದಾರೆ.

2030ರ ವೇಳೆಗೆ ಶೇ 95ರಷ್ಟು ಮಂದಿ ಖಾಸಗಿ ವಾಹನಗಳನ್ನು ಇಟ್ಟುಕೊಂಡಿರುವುದಿಲ್ಲ. ಇದರಿಂದ ಆಟೋಮೊಬೈಲ್ ಕೈಗಾರಿಕೆ ನಶಿಸಿಹೋಗುತ್ತದೆ. ಇನ್ನು ಎಲೆಕ್ಟ್ರಿಕ್ ಕಾರುಗಳಿಂದ ಜಾಗತಿಕ ತೈಲ ಮಾರುಕಟ್ಟೆಯೇ ನಾಶವಾಗಿರುತ್ತದೆ ಎಂದು ಸೆಬಾ ಭವಿಷ್ಯ ನುಡಿದಿದ್ದಾರೆ.[ಇನ್ಮುಂದೆ ಪೆಟ್ರೋಲ್ ಕೂಡ ಹೋಮ್ ಡಿಲಿವರಿ ಪಡೆಯಬಹುದು!]

2030ರ ವೇಳೆಗೆ ಭಾರತದಲ್ಲಿ ಎಲೆಕ್ಟ್ರಿಕಲ್ ಕಾರುಗಳನ್ನಷ್ಟೇ ಕಾಣುತ್ತೀರಿ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಕೂಡ ಹೇಳಿಕೆ ನೀಡಿದ್ದು, ಈ ಸಂದರ್ಭದಲ್ಲೇ ಈ ಎಲ್ಲ ಹೇಳಿಕೆ ಬಂದಿರುವುದು ಕುತೂಹಲಕರವಾಗಿದೆ. ಕಾಫಿ ಹೀರುತ್ತಾ ಅರವತ್ತು ಕಿಲೋಮೀಟರ ಪ್ರಯಾಣ ಮಾಡಿದ ನಂತರ, ಆ ಪ್ರಯಾಣ ಪುಕ್ಕಟೆ ಹಾಗೂ ಕಾಫಿಗಷ್ಟೇ ದುಡ್ಡು ಕೊಡುವುದಾಗಿರುತ್ತದೆ ಎಂಬುದನ್ನು ಊಹಿಸಿಕೊಳ್ಳಿ ಎಂದಿದ್ದಾರೆ ಸೆಬಾ.

English summary
You may pay less than Rs 30 for petrol in the next five years. Tony Seba, an American futurist says emerging technology is going to reduce the world's dependence on petrol so much that prices will plummet. Seba is famous for predicting a boom in solar power when the prices used to be forbiddingly high, 10 times the prices today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X