ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುರುವಾರ ಭಾರತದಲ್ಲಿ ಏನೇನಾಯ್ತು ಗೊತ್ತಾ? ಇಲ್ಲಿ ನೋಡಿ

By Kiran B Hegde
|
Google Oneindia Kannada News

ಬೆಂಗಳೂರು, ಜ. 22: ದೇಶದಲ್ಲಿ ಮಹಿಳೆಯರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವ ಕಾರಣ ಹರ್ಯಾಣದಲ್ಲಿ 'ಬೇಟಿ ಬಚಾವೋ ಬೇಟಿ ಪಡಾವೋ' ಕಾರ್ಯಕ್ರಮ ಆಯೋಜಿಸಲಾಗಿತ್ತು. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಹೆಣ್ಣು ಭ್ರೂಣ ಹತ್ಯೆ ಮಾಡದಂತೆ ಮನವಿ ಮಾಡಿದರು.

ಖ್ಯಾತ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಸೇರಿದಂತೆ ಹಲವು ಕೇಂದ್ರ ಸಚಿವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ನರೇಂದ್ರ ಮೋದಿ ಅವರೊಂದಿಗೆ ದನಿಗೂಡಿಸಿದರು. [ಸೈನಿಕರು ತಾಲೀಮು ನೋಡಿ ಹೆಮ್ಮೆಪಡಿ]

ಹೈದರಾಬಾದ್‌ನಲ್ಲಿ ಹೆಚ್ಚುತ್ತಿರುವ ಹಂದಿ ಜ್ವರದ ಕಾರಣ ವಿದ್ಯಾರ್ಥಿಗಳು ಕೂಡ ಶಾಲೆಯಲ್ಲಿ ಮುಖ ಮುಸುಕು ಧರಿಸಿಯೇ ಪಾಠ ಕೇಳುವ ಅನಿವಾರ್ಯತೆ ಎದುರಿಸುತ್ತಿದ್ದಾರೆ.

ದೇಶದಲ್ಲಿ ಗುರುವಾರ ನಡೆದ ಹಲವು ಘಟನಾವಳಿಗಳ ಕುರಿತು ಚಿತ್ರ ಸಹಿತ ವಿವರಣೆ ನೋಡಲು ಇಲ್ಲಿ ಕ್ಲಿಕ್ ಮಾಡಿ.

ಬೇಟಿ ಬಚಾವೋ ಬೇಟಿ ಪಡಾವೋ

ಬೇಟಿ ಬಚಾವೋ ಬೇಟಿ ಪಡಾವೋ

ಹರ್ಯಾಣದ ಪಾಣಿಪತ್‌ನಲ್ಲಿ ಗುರುವಾರ ಆಯೋಜಿಸಿದ್ದ 'ಬೇಟಿ ಬಚಾವೋ ಬೇಟಿ ಪಡಾವೋ' ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು. ರಾಜ್ಯಪಾಲ ಕಪ್ತಾನ್ ಸಿಂಗ್ ಸೋಲಂಕಿ, ಖ್ಯಾತ ನಟಿ ಮಾಧುರಿ ದೀಕ್ಷಿತ್ ಹಾಗೂ ಕೇಂದ್ರ ಸಚಿವರಾದ ರವಿಶಂಕರ್ ಪ್ರಸಾದ್ ಮತ್ತು ಬೀರೆಂದರ್ ಚೌಧರಿ ಪಾಲ್ಗೊಂಡಿದ್ದರು.

ವಿದ್ಯಾರ್ಥಿನಿಗೆ ಬ್ಯಾಂಕ್ ಖಾತೆ

ವಿದ್ಯಾರ್ಥಿನಿಗೆ ಬ್ಯಾಂಕ್ ಖಾತೆ

ಹರ್ಯಾಣದ ಪಾಣಿಪತ್‌ನಲ್ಲಿ ಆಯೋಜಿಸಿದ್ದ ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಗೆ ಬ್ಯಾಂಕ್ ಖಾತೆಯ ಪಾಸ್ ಬುಕ್ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವೆ ಸ್ಮೃತಿ ಇರಾನಿ.

ಮಾಧುರಿ ಮಾಧುರ್ಯ

ಮಾಧುರಿ ಮಾಧುರ್ಯ

ಪಾಣಿಪತ್‌ನಲ್ಲಿ ಆಯೋಜಿಸಿರುವ ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮದಲ್ಲಿ ನಟಿ ಮಾಧುರಿ ದೀಕ್ಷಿತ್ ಅವರು ಪ್ರದಾನಿ ನರೇಂದ್ರ ಮೋದಿ ಅವರತ್ತ ನಗೆ ಬೀರಿದ್ದು ಹೀಗೆ.

ಗೌರವ ವಂದನೆ

ಗೌರವ ವಂದನೆ

ನವದೆಹಲಿಯಲ್ಲಿ ಭಾರತೀಯ ಸೈನಿಕರಿಂದ ಗೌರವ ವಂದನೆ ಸ್ವೀಕರಿಸಿದ ರಷ್ಯಾ ರಕ್ಷಣಾ ಸಚಿವ ಸರ್ಜೀ ಕೆ. ಶೋಯ್ಗು.

ಹಿಂಸಾವಾದಿಗಳು?

ಹಿಂಸಾವಾದಿಗಳು?

ಮುಜಾಫರ್‌ಪುರದಲ್ಲಿ ನಡೆದ ಗಲಭೆಯಲ್ಲಿ ಹಿಂಸಾಚಾರ ನಡೆಸಿದ ಆರೋಪದ ಮೇಲೆ ಪೊಲೀಸರು ಬಂಧಿಸಿರುವ ಆರೋಪಿಗಳು.

ಸುಂದರ ಸೋನಾಕ್ಷಿ

ಸುಂದರ ಸೋನಾಕ್ಷಿ

ಮುಂಬೈನಲ್ಲಿ ಆಯೋಜಿಸಿದ್ದ 'ಬೇಬಿ' ಸಿನಿಮಾದ ವಿಶೇಷ ಸ್ಕ್ರೀನಿಂಗ್‌ನಲ್ಲಿ ನಟಿ ಸೋನಾಕ್ಷಿ ಸಿನ್ಹಾ ಕಾಣಿಸಿಕೊಂಡಿದ್ದು ಹೀಗೆ.

ಹಿಮದಲ್ಲಿ ಚಲಿಸಲಾಗದೆ ನಿಂತ ಟ್ರಕ್

ಹಿಮದಲ್ಲಿ ಚಲಿಸಲಾಗದೆ ನಿಂತ ಟ್ರಕ್

ಕಾಶ್ಮೀರದಲ್ಲಿ ಭಾರೀ ಪ್ರಮಾಣದಲ್ಲಿ ಹಿಮ ಮಳೆಯಾಗುತ್ತಿರುವ ಕಾರಣ ಖಾಜಿಗುಂಡ್‌ನ ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಮುಂದೆ ಚಲಿಸಲಾಗದೆ ನಿಂತಿರುವ ಟ್ರಕ್‌ಗಳು.

ಹಿಮದಲ್ಲಿ ಹೆದ್ದಾರಿ ಕಳೆದೋಯ್ತು

ಹಿಮದಲ್ಲಿ ಹೆದ್ದಾರಿ ಕಳೆದೋಯ್ತು

ಖಾಜಿಗುಂಡ್‌ನಲ್ಲಿ ಬಿದ್ದಿರುವ ಭಾರೀ ಹಿಮದಿಂದ ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯು ಮುಚ್ಚಿರುವುದು.

ಹಿಮ ಕೊರೆಯುವ ಯಂತ್ರ

ಹಿಮ ಕೊರೆಯುವ ಯಂತ್ರ

ದಕ್ಷಿಣ ಕಾಶ್ಮೀರದ ಖಾಜಿಗುಂಡ್‌ನ ರಸ್ತೆಯ ಮೇಲೆ ಬಿದ್ದಿರುವ ಹಿಮಗಳನ್ನು ಕತ್ತರಿಸುತ್ತಿರುವ ಯಂತ್ರ.

ವಿಜಯ ಚೌಕದಲ್ಲಿ ಮಳೆ

ವಿಜಯ ಚೌಕದಲ್ಲಿ ಮಳೆ

ನವದೆಹಲಿಯ ವಿಜಯ ಚೌಕದಲ್ಲಿ ಬೀಳುತ್ತಿರುವ ಮಳೆಯಿಂದ ರಕ್ಷಿಸಿಕೊಳ್ಳಲು ಛತ್ರಿ ಹಿಡಿದು ಹೊರಟಾಗ ಕಂಡ ಜನರು.

ಹಂದಿ ಜ್ವರದ ಭೀತಿ

ಹಂದಿ ಜ್ವರದ ಭೀತಿ

ಹೈದರಾಬಾದ್‌ನಲ್ಲಿ ಹೆಚ್ಚುತ್ತಿರುವ ಹಂದಿ ಜ್ವರದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಶಾಲೆಯಲ್ಲಿ ಮಾಸ್ಕ್ ಧರಿಸಿ ಪಾಠ ಕೇಳಿದರು.

ಆಡು ಆಟ ಆಡು

ಆಡು ಆಟ ಆಡು

ಲಕ್ನೋದಲ್ಲಿ ನಡೆಯುತ್ತಿರುವ ಸೈಯದ್ ಮೋದಿ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಜ್ವಾಲಾ ಗುಟ್ಟಾ ಹಾಗೂ ಅಶ್ವಿನಿ ಪೊನ್ನಪ್ಪ ಅವರ ಆಟದ ಭಂಗಿ.

ಶೂರ ಮಕ್ಕಳು

ಶೂರ ಮಕ್ಕಳು

ರಾಷ್ಟ್ರೀಯ ಶೌರ್ಯ ಪ್ರಶಸ್ತಿ-2014 ಪ್ರಶಸ್ತಿ ಗೆದ್ದ ಮಕ್ಕಳೊಂದಿಗೆ ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ.

ನ್ಯಾಯಾಲಯಕ್ಕೆ ಹಾಜರು

ನ್ಯಾಯಾಲಯಕ್ಕೆ ಹಾಜರು

ಸನ್ ಟಿವಿ ನೆಟ್‌ವರ್ಕ್ ಮುಖ್ಯ ತಾಂತ್ರಿಕ ಅಧಿಕಾರಿ ಎಸ್. ಕಣ್ಣನ್ ಮತ್ತು ಕೇಂದ್ರ ಸಚಿವ ದಯಾನಿಧಿ ಮಾರನ್ ಅವರ ಮಾಜಿ ಕಾರ್ಯದರ್ಶಿ ವಿ. ಗೌತಮ್ ಅವರನ್ನು ಗುರುವಾರ ಚೆನ್ನೈನಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರಾದರು.

ಪ್ರೇಮ ಸೌಧಕ್ಕೆ ಕಾವಲು

ಪ್ರೇಮ ಸೌಧಕ್ಕೆ ಕಾವಲು

ಆಗ್ರಾದ ತಾಜ್ ಮಹಲ್‌ನಲ್ಲಿ ಗುರುವಾರ ಕಂಡುಬಂದ ಬಿಗಿ ಭದ್ರತೆ. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

ಕಾಶ್ಮೀರದ ಚೆಲುವೆಯರು

ಕಾಶ್ಮೀರದ ಚೆಲುವೆಯರು

ನವದೆಹಲಿಯ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಲಿರುವ ಜಮ್ಮು ಕಾಶ್ಮೀರದ ಕಲಾವಿದೆಯರು ಅಭ್ಯಾಸದ ನಂತರ ಕಂಡುಬಂದಿದ್ದು ಹೀಗೆ.

ಅಭ್ಯಾಸ ಪ್ರದರ್ಶನ

ಅಭ್ಯಾಸ ಪ್ರದರ್ಶನ

ನವದೆಹಲಿಯ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಲಿರುವ ತೆಲಂಗಾಣದ ನೃತ್ಯ ಕಲಾವಿದರು ಅಭ್ಯಾಸ ಪ್ರದರ್ಶನ ನೀಡಿದರು.

ಮೀನಿನೊಂದಿಗೆ ಮಹಿಳೆ

ಮೀನಿನೊಂದಿಗೆ ಮಹಿಳೆ

ನವದೆಹಲಿಯ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಲಿರುವ ಗೋವಾದ ಕಲಾವಿದರು ಅಭ್ಯಾಸ ಪ್ರದರ್ಶನ ನೀಡಿದರು.

English summary
Here are the pictures with news happened on Thursday in all over India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X