ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಸದನಾಗಿ ಯೋಗಿ ಮಾಡಿದ ಕೊನೆಯ ಹೃದಯಂಗಮ ಭಾಷಣ

ಉತ್ತರ ಪ್ರದೇಶದಲ್ಲಿ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ನಂತರ, ಮಂಗಳವಾರ, ಲೋಕಸಭೆಗೆ ಆಗಮಿಸಿದ ಯೋಗಿ, ಸಂಸದನಾಗಿ ತಮ್ಮ ಕೊನೆಯ ಭಾಷಣ ಮಾಡಿದರು.

|
Google Oneindia Kannada News

ನವದೆಹಲಿ, ಮಾರ್ಚ್ 21: ''ಉತ್ತರ ಪ್ರದೇಶ ಈವರೆಗೆ ಹೇಗಿತ್ತು ಎನ್ನುವುದನ್ನು ನಾವೆಲ್ಲರೂ ನೋಡಿದ್ದೇವೆ. ಆದರೆ, ಇನ್ನು ಆ ರಾಜ್ಯ ವಿಕಾಸದೆಡೆಗೆ ಮುಖ ಮಾಡಿ ನಿಲ್ಲಲಿದೆ. ಉತ್ತರ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಯೇ ನನ್ನ ಧ್ಯೇಯ'' - ಇವು ಉತ್ತರ ಪ್ರದೇಶದ ನೂತನ ಸಿಎಂ ಯೋಗಿ ಆದಿತ್ಯನಾಥ ಅವರು ಸಂಸತ್ ನಲ್ಲಿ ಮಾಡಿದ ಕೊನೆಯ ಭಾಷಣದ ಹೈಲೈಟ್.

ಉತ್ತರ ಪ್ರದೇಶದಲ್ಲಿ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ನಂತರ, ನಿಯಮಗಳನುಸಾರ ಯೋಗಿ, ತಾವು ಹೊಂದಿರುವ ಸಂಸತ್ ಸದಸ್ಯತ್ವಕ್ಕೆ ರಾಜಿನಾಮೆ ಸಲ್ಲಿಸಬೇಕು. ಆದರೆ, ಅದಕ್ಕೂ ಮುನ್ನವೇ ಅವರು ಸದನವನ್ನು ಉದ್ದೇಶಿಸಿ ಮಾತನಾಡಿದರು.[ರಾಮಾಯಣ ಮ್ಯೂಸಿಯಂಗೆ ಇದ್ದ ಅಡಚಣೆ ನಿವಾರಿಸಿದ ಯೋಗಿ]

ಹಾಗೆ ಅವರು ಮಾತನಾಡಲು ಆರಂಭಿಸುವ ಮುನ್ನವೇ, ಲೋಕಸಭೆಯ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು, ಸದನದ ಪರವಾಗಿ ಯೋಗಿಯವರಿಗೆ ಅಭಿನಂದನೆ ಸಲ್ಲಿಸಿದರು.

ವಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೂಡ ಅಭಿನಂದನೆ ಸಲ್ಲಿಸಿದರಲ್ಲದೆ, ಸಿಎಂ ಕುರ್ಚಿಯ ಘನತೆಗೆ ಧಕ್ಕೆ ಬಾರದಂತೆ ನಡೆದುಕೊಳ್ಳಬೇಕೆಂದು ಮನವಿ ಮಾಡಿದರು. ಇದಕ್ಕೆ ಯೋಗಿ, ನಗುತ್ತಲೇ, 'ಸರಿ' ಎಂದು ಉತ್ತರಿಸಿದರು.[ಫೈರ್ ಬ್ರಾಂಡ್ ಇಮೇಜ್ ಉಳ್ಳ ಯೋಗಿ ಅಂದು ಸಂಸತ್ತಿನಲ್ಲಿ ಅತ್ತಿದ್ಯಾಕೆ?]

ಶಿಷ್ಟಾಚಾರ ಮರೆಯಲಾರೆ ಎಂದ ಯೋಗಿ

ಶಿಷ್ಟಾಚಾರ ಮರೆಯಲಾರೆ ಎಂದ ಯೋಗಿ

ಸದನವನ್ನು ಉದ್ದೇಶಿಸಿ ಮಾತನಾಡಿದ ಅವರು, ''ಉತ್ತರ ಪ್ರದೇಶ ಸಿಎಂ ಗಾದಿಗೆ ನನ್ನನ್ನು ಆರಿಸಿದ ಬಿಜೆಪಿ ಪಕ್ಷಕ್ಕೆ ಹಾಗೂ ಪ್ರಧಾನಿ ನರೇಂದ್ರ ಮೋದಿಯವರಿಗೆ ನಾನು ಆಭಾರಿ'' ಎಂದರು. ಲೋಕಸಭೆಯಲ್ಲಿ ನಾನು ಕಲಿತ ಶಿಷ್ಟಾಚಾರವನ್ನು ಎಂದಿಗೂ ಮರೆಯಲಾರೆ. 1999ರಲ್ಲಿ ಮೊದಲ ಬಾರಿಗೆ ನನ್ನ 26ನೇ ವಯಸ್ಸಿಗೇ ಸಂಸತ್ ಪ್ರವೇಶಿಸಿದ ನಾನು ಇಲ್ಲಿ ಹಲವಾರು ವಿಚಾರಗಳನ್ನು ಕಲಿತೆ. ಸ್ಪೀಕರ್ ಸೇರಿದಂತೆ ಸಕಲ ಸಂಸದರೂ ನನಗೆ ಸ್ನೇಹ ಕೊಟ್ಟಿದ್ದಾರೆ. ನಿಮ್ಮ (ಸಂಸದರು) ಪ್ರೀತಿ, ಆದರಣೆಯನ್ನು ನಾನೆಂದಿಗೂ ಮರೆಯಲಾರೆ ಎಂದರು.

ಹಲವು ಜನಪರ ಯೋಜನೆಗಳು

ಹಲವು ಜನಪರ ಯೋಜನೆಗಳು

ಆನಂತರ, ಮೋದಿ ಸರ್ಕಾರವನ್ನು ಕೊಂಡಾಡಿದ ಅವರು, ಇಡೀ ವಿಶ್ವದೆಲ್ಲೆಡೆ ಭಾರತದ ಗೌರವ ಹೆಚ್ಚುತ್ತಿದೆ. ದೇಶದ ಬಡವರು, ರೈತರಿಗಾಗಿ ಮೋದಿ ಸರ್ಕಾರ ಸಮರ್ಪಿತವಾಗಿದೆ.
ಹಲವು ಜನರಯೋಜನೆಗಳನ್ನು ಮೋದಿ ಸರ್ಕಾರ ಜಾರಿಗೆ ತಂದಿದ್ದಾರೆ. ಕೇಂದ್ರದ ಜನಧನ್ ಯೋಜನೆಗಳು, ಉಜ್ವಲಾ ಯೋಜನೆಯಿಂದ ಬಡವರಿಗೆ ಎಲ್ ಪಿಜಿ ಸೌಕರ್ಯ ಸಿಕ್ಕಿದೆ.
ಮೋದಿಯವರ ನೀತಿಯಿಂದ ಜಿಡಿಪಿ 7.9 ವರೆಗೆ ಏರಿದೆ. ಇಡೀ ವಿಶ್ವವೇ ಭಾರತದ ಅಭಿವೃದ್ಧಿಯತ್ತ ದೃಷ್ಟಿ ನೆಟ್ಟಿದೆ. ವಿಶ್ವ ಮಟ್ಟದಲ್ಲಿ ಭಾರತದ ಗೌರವ ಹೆಚ್ಚಾಗಿದೆ ಎಂದು ಮೋದಿ ಸರ್ಕಾರವನ್ನು ಕೊಂಡಾಡಿದರು.

ಸರ್ವಾಂಗೀಣ ಅಭಿವೃದ್ಧಿಗೇ ಒತ್ತು

ಸರ್ವಾಂಗೀಣ ಅಭಿವೃದ್ಧಿಗೇ ಒತ್ತು

ಉತ್ತರ ಪ್ರದೇಶದ ಅಭಿವೃದ್ಧಿಯ ಬಗ್ಗೆ ಮಾತನಾಡಿದ ಅವರು, ಗೋರಖ್ ಪುರದಲ್ಲಿ ಮುಚ್ಚಿದ ಕಾರ್ಖಾನೆಗಳನ್ನು ತೆರೆಯಲಾಗಿದೆ. ಯುಪಿಗೆ ಈ ಹಿಂದೆ ಬಿಡುಗಡೆಯಾದ ಅನುದಾನ ಸರಿಯಾಗಿ ಬಳಕೆಯಾಗಿಲ್ಲ. ಆದರೆ, ಇನ್ನು ಮುಂದೆ ಹಾಗಾಗದು. ಉತ್ತರ ಪ್ರದೇಶ ಸರ್ವಾಂಗೀಣ ವಿಕಾಸಕ್ಕಾಗಿ ಕೆಲಸ ಮಾಡುವೆ ಎಂದರು.

ಎಲ್ಲರೂ ಗಮನಿಸಿ ಎಂದು ಸವಾಲು

ಎಲ್ಲರೂ ಗಮನಿಸಿ ಎಂದು ಸವಾಲು

ಎಲ್ಲಾ ಸಂಸದರಿಗೂ ಉತ್ತರ ಪ್ರದೇಶಕ್ಕೆ ಸ್ವಾಗತ. ನೀವು ಉತ್ತರ ಪ್ರದೇಶಕ್ಕೆ ಬರುತ್ತೀರಿ ಎಂದರೆ ನಿಮ್ಮನ್ನು ಸ್ವಾಗತಿಸಲು ನೀವು ಗಮನಿಸುತ್ತಿರಿ ಉತ್ತರ ಪ್ರದೇಶ ಇನ್ನು ಹೇಗೆ ಅಭಿವೃದ್ಧಿಯಾಗುತ್ತೆ ಅಂತ.

ಭರವಸೆ ನೀಡಿದ ಯೋಗಿ

ಭರವಸೆ ನೀಡಿದ ಯೋಗಿ

ಇದೇ ವೇಳೆ, ಮಲ್ಲಿಕಾರ್ಜುನ ಖರ್ಗೆಯುವರು ಯೋಗಿಯವರನ್ನು ಉದ್ದೇಶಿಸಿ, ''ನೀವು ರಾಹುಲ್ ಗಾಂಧಿಯವರಿಗಿಂತ ಒಂದು ವರ್ಷ ಚಿಕ್ಕವರು. ಅಖಿಲೇಶ್ ಯಾದವ್ ಗಿಂದ ಒಂದು ವರ್ಷ ದೊಡ್ಡವರು. ಈ ವಯಸ್ಸು ಹಾಗೂ ಅನುಭವದ ಕೊರತೆಯ ನಡುವೆಯೂ ಉತ್ತರ ಪ್ರದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬಲ್ಲಿರಾ'' ಎಂಬರ್ಥದಲ್ಲಿ ಚುಡಾಯಿಸಿದರು. ಇದಕ್ಕೆ ಉತ್ತರಿಸಿದ ಯೋಗಿ, ಹೌದು, ನಾನು ರಾಹುಲ್ ಗಿಂತ ಚಿಕ್ಕವನು, ಅಖಿಲೇಶ್ ಗಿಂತ ದೊಡ್ಡವನು. ನಮ್ಮ ಮೂವರಿಗೂ ಕೇವಲ ಒಂದೊಂದು ವರ್ಷ ವ್ಯತ್ಯಾಸವಿದೆ. ಆದರೆ, ಇದು ನನ್ನ ಆಡಳಿತಕ್ಕೆ ಅಡ್ಡಿಯಾಗದು ಎಂದು ನಗುತ್ತಲೇ ಉತ್ತರಿಸಿದರು ಯೋಗಿ.
ಆಗ, ಮಧ್ಯೆ ಮಾತನಾಡಿದ ಸ್ಪೀಕರ್ ಸುಮಿತ್ರಾ ಮಹಾಜನ್, ಮಲ್ಲಿಕಾರ್ಜುನ ಖರ್ಗೆಯವರು ಹಿರಿಯರಾಗಿ ನಿಮ್ಮನ್ನು ಚುಡಾಯಿಸುವ ಮೂಲಕ ನಿಮಗೆ ಆಶೀರ್ವಾದ ಮಾಡಿದ್ದಾರೆ ಎಂದರು. ಅದಕ್ಕೆ ನಗುತ್ತಾ ಉತ್ತರಿಸಿದ ಯೋಗಿ, ''ಅವರ ಆಶೀರ್ವಾದಕ್ಕೆ ನಾನು ಆಭಾರಿ'' ಎಂದು ತಿಳಿಸಿದರು.

English summary
Yodi Adityanath delivers a heart touching last speech in Parliament on Tuesday, before he submits his resignation to his Member of Parliament post, as he has taken charge of CM of UP recently.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X