ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯೋಗಿ ಆದಿತ್ಯನಾಥ್ ಅವರಿಗೆ ಮೋದಿ ಕೊಟ್ಟ 12 ಸಲಹೆಗಳು

ಉತ್ತರ ಪ್ರದೇಶದಲ್ಲಿ ನೂತನವಾಗಿ ಸರ್ಕಾರ ರಚನೆಗೆ ಮುಂದಾದ ಯೋಗಿ ಆದಿತ್ಯನಾಥ್ ಅವರಿಗೆ ಪ್ರಧಾನಿ 12 ಸಲಹೆಗಳನ್ನು ಕೊಟ್ಟಿದ್ದಾರೆ. ಆ ಹನ್ನೆರಡು ಸಲಹೆಗಳನ್ನೇ ಯೋಗಿ ಅವರು, ಅಧಿಕಾರ ಸ್ವೀಕರಿಸಿದ ಕ್ಷಣದಿಂದಲೇ ಜಾರಿಗೊಳಿಸಿದ್ದಾರೆ.

|
Google Oneindia Kannada News

ನವದೆಹಲಿ, ಮಾರ್ಚ್ 21: ಉತ್ತರ ಪ್ರದೇಶವೆಂದರೆ ಅದು ಕಾನೂನು ಸುವ್ಯವಸ್ಥೆ ಹದಗೆಟ್ಟ ನಾಡು, ಮಹಿಳೆಯರಿಗೆ, ಅಬಲೆಯರಿಗೆ ಸುರಕ್ಷಣೆಯಿಲ್ಲದ ನಾಡು ಎಂಬಿತ್ಯಾದಿ ಟ್ಯಾಗ್ ಗಳನ್ನು ಹಾಕಿಕೊಂಡಿರುವ ಉತ್ತರ ಪ್ರದೇಶದಲ್ಲಿ ನೂತನವಾಗಿ ಸರ್ಕಾರ ರಚನೆಗೆ ಮುಂದಾದ ಯೋಗಿ ಆದಿತ್ಯನಾಥ್ ಅವರಿಗೆ ಪ್ರಧಾನಿ 12 ಸಲಹೆಗಳನ್ನು ಕೊಟ್ಟಿದ್ದಾರೆ.

ಆ ಹನ್ನೆರಡು ಸಲಹೆಗಳನ್ನೇ ಯೋಗಿ ಅವರು, ಅಧಿಕಾರ ಸ್ವೀಕರಿಸಿದ ಕ್ಷಣದಿಂದಲೇ ಜಾರಿಗೊಳ್ಳುವಲ್ಲಿ ಆದಿತ್ಯನಾಥ್ ಅವರು ಕಾಳಜಿ ತೋರಿದ್ದು, ಇದೇ ಈಗ ಉತ್ತರ ಪ್ರದೇಶದಲ್ಲಿ ಎಲ್ಲರೂ ಹುಬ್ಬೇರಿಸುವ ರೀತಿಯಲ್ಲಿ ಕ್ಷಿಪ್ರಗತಿಯಲ್ಲಿ ಬದಲಾವಣೆಗಳಾಗುತ್ತಿವೆ.[ರಾಮಮಂದಿರ ನಿರ್ಮಾಣ: ಸಿಎಂ ಯೋಗಿ ಕೈಲಿದೆ 'ಪವರ್' ಅಸ್ತ್ರ]

ಯೋಗಿ ಅಧಿಕಾರ ಸ್ವೀಕರಿಸಿದ ಮರುದಿನವೇ ಸರ್ಕಾರಿ ಅಧಿಕಾರಿಗಳಿಗೆ ತಮ್ಮ ಆಸ್ತಿ ವಿವರ ಘೋಷಿಸುವಂತೆ ಮುಖ್ಯಮಂತ್ರಿ ಕಚೇರಿಯಿಂದ ಹುಕುಂ ಹೋಗಿದೆ. ಅನಧಿಕೃತ ಕಸಾಯಿ ಖಾನೆಗಳಿಗೆ ಬೀಗ ಬಿದ್ದಿದೆ. ಇನ್ನು, ಯುಪಿಯ ಸರ್ಕಾರಿ ಕಚೇರಿಗಳಿಂದ ಪಾನ್ ಮಸಾಲಾ, ಗುಟ್ಕಾಗಳನ್ನು ನಿಷೇಧಿಸಲಾಗಿದೆ.

ಗೋರಖ್ ಪುರ ಹಾಗೂ ಸುತ್ತಲಿನ ಪ್ರಾಂತ್ಯಗಳಲ್ಲಿರುವ ಗೋ ಮಾಂಸ ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸಲಾಗಿದೆ. ಇದೆಲ್ಲದರ ಜತೆಗೆ, ಅತೀ ಅವಶ್ಯವಾದ ಮತ್ತೊಂದು ಕಾರ್ಯಾಚರಣೆಯೂ ಆಗಿದೆ. ಅದೇನೆಂದರೆ, ಉತ್ತರ ಪ್ರದೇಶದ ಹೆಣ್ಣು ಮಕ್ಕಳಿಗೆ ಕಂಟಕರಾಗಿದ್ದ ಬೀದಿ ಕಾಮಣ್ಣರನ್ನು ಬೆಂಡೆತ್ತುವ ಕಾರ್ಯಾಚರಣೆ.

ಹೌದು. ಮಾನವಂತ ಮನೆತನದ ಹೆಂಗಳೆಯರು, ಯುವತಿಯರು ರಸ್ತೆಯಲ್ಲಿ ಅಡ್ಡಾಡುವುದೇ ಕಷ್ಟಕರ ಎನ್ನುವಂತಿದ್ದ ಪರಿಸ್ಥಿತಿಯನ್ನು ಹತೋಟಿಗೆ ತರಲು ಈ ಕಾರ್ಯಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ.[ಇವರೇ ಕಣ್ರಿ.. ಯೋಗಿ ಹೆಸರನ್ನು ಅಮಿತ್ ಶಾ, ಮೋದಿಗೆ ಸಜೆಸ್ಟ್ ಮಾಡಿದ್ದು!]

ಈ ಎಲ್ಲವನ್ನೂ ಮುಖ್ಯಮಂತ್ರಿಯವರು ಅಧಿಕಾರ ಕೈಯ್ಯಲ್ಲಿ ಹಿಡಿಯುತ್ತಲೇ ಏಕೆ ಆರಂಭಿಸಿದರು ಎನ್ನುವುದಕ್ಕೆ ಉತ್ತರ ಇಲ್ಲಿದೆ. ಅಧಿಕಾರ ಸ್ವೀಕರಿಸಿದ ಒಂದು ತಿಂಗಳಲ್ಲೇ ಉತ್ತರ ಪ್ರದೇಶದ ಪೀಡೆಯನ್ನು ಸಾಧ್ಯವಾದಷ್ಟೂ ಗುಡಿಸಿ ಸ್ವಚ್ಛ ಮಾಡಬೇಕು ಎಂದು ಖುದ್ದು ಮೋದಿಯವರೇ ಆದಿತ್ಯನಾಥ ಅವರಿಗೆ ಹೇಳಿದ್ದಾರೆ.

ಹಾಗಾಗಿಯೇ, ಮೋದಿ ಹೇಳಿರುವ 12 ಅಂಶಗಳನ್ನೇ ಅನುಷ್ಠಾನಗೊಳಿಸಲು ಟೊಂಕ ಕಟ್ಟಿನಿಂತಿದ್ದಾರೆ ಯೋಗಿ ಆದಿತ್ಯನಾಥ. ಹಾಗಾಗಿ, ಉತ್ತರ ಪ್ರದೇಶವನ್ನು ಅವರು ಹೇಗೆ ಸ್ವಚ್ಛ ಮಾಡುತ್ತಾರೆಂದು ಇಡೀ ಭಾರತವೇ ಅವರತ್ತ ಕುತೂಹಲದಿಂದ ನೋಡುವಂತಾಗಿದೆ.

ಈಗಾಗಾಗಲೇ, ಉತ್ತರ ಪ್ರದೇಶದ ಜಿಲ್ಲಾ ಮಟ್ಟದಲ್ಲಿರುವ ಎಲ್ಲಾ ಪೊಲೀಸ್ ಕಚೇರಿಗಳಿಗೂ ಫ್ಯಾಕ್ಸ್ ಮೂಲಕ ಮೋದಿ ತಿಳಿಸಿದ 12 ಅಂಶಗಳ ಗುರಿಯನ್ನೇ ಸಾಧಿಸಿ ತೋರುವಂತೆ ತಾಕೀತು ಮಾಡಲಾಗಿದೆ.

ಯೋಗಿಯವರಿಗೆ ಮೋದಿ ನೀಡಿರುವ ಹನ್ನೆರಡು ಸೂತ್ರಗಳ ಪಟ್ಟಿ ಇಲ್ಲಿದೆ:

ಗೂಂಡಾ ಕಾಯ್ದೆ ಹೇರಿಕೆ

ಗೂಂಡಾ ಕಾಯ್ದೆ ಹೇರಿಕೆ

- ಕಿಡ್ನಾಪ್, ಕಳ್ಳತನ, ಕೊಲೆ, ದರೋಡೆ ಮುಂತಾದ ಕೃತ್ಯಗಳಲ್ಲಿ ಭಾಗಿಯಾಗಿರುತ್ತಾರೋ, ಅವರೆಲ್ಲರ ಮೇಲೆ ಮುಲಾಜಿಲ್ಲದೆ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು.
- ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುವ ವ್ಯಕ್ತಿಗಳ ಮೇಲೂ ಗೂಂಡಾ ಕಾಯ್ದೆ ಹೇರಿಕೆ.

ಯೋಜನೆಗಳ ಅನುಷ್ಠಾನಕ್ಕೆ ಕ್ರಮ

ಯೋಜನೆಗಳ ಅನುಷ್ಠಾನಕ್ಕೆ ಕ್ರಮ

- ಕಸಾಯಿ ಖಾನೆಗಳಿಗೆ ಬೀಗ ಜಡಿಯುವುದು. ಅದರಲ್ಲೂ ಗೋ ಮಾಂಸ ಮಾರಾಟಕ್ಕೆ ಸಂಪೂರ್ಣ ನಿಷೇಧ.
- ಸ್ವಚ್ಛ ಭಾರತ, ಪ್ರಜ್ವಲ್ ಸೇರಿದಂತೆ ಮೋದಿಯವರು ಜಾರಿಗೊಳಿಸಿರುವ ಎಲ್ಲಾ ಯೋಜನೆ, ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನಕ್ಕೆ ಕ್ರಮ[ಉ.ಪ್ರ: ಗೋಮಾಂಸ ಮಾರಾಟ ಅಂಗಡಿಗಳ ಮೇಲೆ ಪೊಲೀಸರ ದಾಳಿ]

ರೈತರಿಗೆ ವಿಮೆ

ರೈತರಿಗೆ ವಿಮೆ

- ಉನ್ನತ ಹುದ್ದೆಗಳಿಗೆ ನಿಷ್ಠಾವಂತ ಹಾಗೂ ದಕ್ಷ ಅಧಿಕಾರಿಗಳನ್ನು ನೇಮಿಸುವುದು.
- ರೈತರಿಗಾಗಿ ವಿಶೇಷ ಬೆಳೆ ವಿಮೆ ಯೋಜನೆ; ಕಳೆದ ವರ್ಷ ಅಧಿಕಾರದಲ್ಲಿದ್ದ ಸಮಾಜವಾದಿ ಪಕ್ಷವು ರೈತರ ವಿಮೆ ಯೋಜನೆಗೆ ಬ್ರೇಕ್ ಹಾಕಿತ್ತು. ಈಗ, ಪುನಃ ಅದು ಅನುಷ್ಠಾನಕ್ಕೆ.

ರೈತರಿಗೆ ಮತ್ತಷ್ಟು ಅನುಕೂಲ

ರೈತರಿಗೆ ಮತ್ತಷ್ಟು ಅನುಕೂಲ

- ಕೇಂದ್ರದಿಂದ ಬಿಡುಗಡೆಯಾಗುವ ಎಲ್ಲಾ ನಿಧಿಗಳೂ ಆಯಾ ಇಲಾಖೆಗೆ ನಿರ್ದಿಷ್ಟವಾಗಿ ಬಳಕೆ.
- ರೈತರಿಗೆ ಅನುಕೂಲಕವಾದ ವಾತಾವರಣ, ಕೃಷಿ ಸಾಲ ಮನ್ನಾ ಸೇರಿದಂತೆ ಹಲವಾರು ಸೌಲಭ್ಯಗಳು[ಸಂಸದನಾಗಿ ಯೋಗಿ ಮಾಡಿದ ಕೊನೆಯ ಹೃದಯಂಗಮ ಭಾಷಣ]

ಮಾಧ್ಯಮಗಳ ಸಹಭಾಗಿತ್ವಕ್ಕೆ ಒತ್ತು

ಮಾಧ್ಯಮಗಳ ಸಹಭಾಗಿತ್ವಕ್ಕೆ ಒತ್ತು

- ಮಾಲಿನ್ಯ ಮಕ್ತ ನಗರಗಳು ಹಾಗೂ ಗ್ರಾಮಗಳಿಗೆ ಆದ್ಯತೆ.
- ಸರ್ಕಾರದ ಎಲ್ಲಾ ಯೋಜನೆಗಳಲ್ಲಿ, ಕಾರ್ಯಕ್ರಮಗಳಲ್ಲಿ ಮಾಧ್ಯಮಗಳನ್ನು ಒಗ್ಗೂಡಿಸಿಕೊಳ್ಳುವಿಕೆ.

ಬಯಲು ಶೌಚ ಮುಕ್ತತೆಗಾಗಿ ಆಂದೋಲನ

ಬಯಲು ಶೌಚ ಮುಕ್ತತೆಗಾಗಿ ಆಂದೋಲನ

- ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕ ಮಾಹಿತಿ ವ್ಯವಸ್ಥೆ; ಪ್ರತಿ ಇಲಾಖೆಗಳೂ ಸಾರ್ವಜನಿಕರೊಂದಿಗೆ ನೇರ ಸಂಪರ್ಕ ಉಂಟಾಗುವ ವ್ಯವಸ್ಥೆ
- ಬಯಲು ಶೌಚಾಲಯ ಉತ್ತರ ಪ್ರದೇಶದ ಗ್ರಾಮೀಣ ಭಾಗಗಳಲ್ಲಿರುವ ಪ್ರಮುಖ ಸಮಸ್ಯೆ; ಇದನ್ನು ನಿವಾರಿಸಲು ಈವರೆಗೆ ಕೈಗೊಂಡಿರುವ ಕ್ರಮಗಳು ಫಲ ಕೊಟ್ಟಿಲ್ಲ. ಶಾಮ್ಲಿ ಎಂಬ ಗ್ರಾಮವೊಂದದೇ ಬಯಲು ಶೌಚಾಲಯ ಮುಕ್ತ ಗ್ರಾಮ ಎಂದು ಹೆಸರಾಗಿದೆಯಷ್ಟೇ. ಯೋಗಿಯವರ ಸ್ವಕ್ಷೇತ್ರ ಗೋರಖ್ ಪುರ ಮಾತ್ರ ಉತ್ತರ ಪ್ರದೇಶದಲ್ಲೇ ಅತಿ ಹೆಚ್ಚು ಶೌಚಾಲಯಗಳನ್ನು ಹೊಂದಿರುವ ಜಿಲ್ಲೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅದೇ ರೀತಿ ಯುಪಿಯ ಎಲ್ಲಡೆಯೂ ಶೌಚಾಲಯಗಳನ್ನು ನಿರ್ಮಿಸಲು ಯೋಜಿಸಿದ್ದು, ಇದೇ ವರ್ಷ ಡಿಸೆಂಬರ್ ವೇಳೆಗೆ ಎಲ್ಲಾ ಜಿಲ್ಲೆಗಳನ್ನು ಬಯಲು ಶೌಚ ಮುಕ್ತವನ್ನಾಗಿಸಲು ಪಣ.[ಯುಪಿ ಸಿಎಂ ಆದಿತ್ಯನಾಥ್ ಪರಮಾಪ್ತ ಈ ಮುಸ್ಲಿಂ ಯುವಕ]

English summary
To take rapid action in Uttar Pradesh, Prime minister Narendra Modi had given 12 suggestions to New Chief Minister of Uttar Pradesh Yogi Adityanath. Here are the brief information about those suggestions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X