ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿ ಮೋದಿ ಜೊತೆ ಯೋಗಾಸನ ಮಾಡಿದ 50,000 ಜನ

|
Google Oneindia Kannada News

ಲಕ್ನೋ(ಉತ್ತರ ಪ್ರದೇಶ), ಜೂನ್ 21: ಭಾರತ ಮಾತ್ರವಲ್ಲದೆ, ವಿಶ್ವದಾದ್ಯಂತ ಇಂದು ಅಂತಾರಾಷ್ಟ್ರೀಯ ಯೋಗ ದಿನದ ಸಂಭ್ರಮ. ಭಾರತೀಯರೇ ಪರಿಚಯಿಸಿದ ಅತ್ಯಂತ ಪ್ರಾಚೀನ ಯೋಗ ಪದ್ಧತಿಗೆ ಇಂದು ವಿಶ್ವದಾದ್ಯಂತ ಮನ್ನಣೆ ದೊರಕಿರುವುದು ನಿಜಕ್ಕೂ ಹೆಮ್ಮೆಯ ವಿಷಯ.

ಯೋಗ ದಿನ: ರಾಜ್ ಪಥ್ ಹಿಂದಿಕ್ಕಿ ಗಿನ್ನಿಸ್ ದಾಖಲೆ ಬರೆದ ಮೈಸೂರುಯೋಗ ದಿನ: ರಾಜ್ ಪಥ್ ಹಿಂದಿಕ್ಕಿ ಗಿನ್ನಿಸ್ ದಾಖಲೆ ಬರೆದ ಮೈಸೂರು

ಯೋಗದ ಮಹತ್ವದ ಅರಿವಿರುವುದರಿಂದಲೇ ಪ್ರಧಾನಿ ನರೆಂದ್ರ ಮೋದಿಯವರು ಸಹ ಖುದ್ದು ಯೋಗಾಸನ ಮಾಡಿ ಪ್ರತಿವರ್ಷ ಯೋಗದಿನಕ್ಕೆ ಶುಭಾರಂಭ ದೊರಕಿಸಿಕೊಡುತ್ತಿದ್ದಾರೆ. ಈ ಬಾರಿ ಉತ್ತರ ಪ್ರದೇಶದ ಲಕ್ನೋದ ರಾಮಬಾಯಿ ರ್ಯಾಲಿ ಮೈದಾನದಲ್ಲಿ ಯೋಗಾಸನ ಮಾಡುವ ಮೂಲಕ ಯೋಗ ದಿನ ಆಚರಿಸಿದ ನರೇಂದ್ರ ಮೋದಿ, 'ಯೋಗ ಪ್ರತಿಯೊಬ್ಬ ಭಾರತೀಯನ ಅವಿಭಾಜ್ಯ ಅಂಗವಾಗಿದೆ' ಎಂದು ಹೆಮ್ಮೆ ವ್ಯಕ್ತಪಡಿಸಿದರು.

ಕನ್ನಡ ಟೀ ಶರ್ಟ್ ಧರಿಸಿ, ಹೆಮ್ಮೆಯಿಂದ ಯೋಗ ದಿನ ಆಚರಿಸಿ!ಕನ್ನಡ ಟೀ ಶರ್ಟ್ ಧರಿಸಿ, ಹೆಮ್ಮೆಯಿಂದ ಯೋಗ ದಿನ ಆಚರಿಸಿ!

'ಕಳೆದ ಮೂರು ವರ್ಷಗಳಲ್ಲಿ ಆರಂಭವಾದ ಹಲವು ಯೋಗಸಂಸ್ಥೆಗಳು ಮತ್ತು ಯೋಗ ಶಿಕ್ಷಕರಿಗಾಗಿ ಬೇಡಿಕೆ ಹೆಚ್ಚುತ್ತಿರುವುದನ್ನು ಕಂಡು ನನಗೆ ನಿಜಕ್ಕೂ ಸಂತಸವಾಗುತ್ತಿದೆ. ಕೇವಲ ದೇಹದ ಸದೃಢತೆ, ಆರೋಗ್ಯಕ್ಕಷ್ಟೇ ಅಲ್ಲ, ಮಾನಸಿಕ ಆರೋಗ್ಯಕ್ಕೂ ಯೋಗ ಅತ್ಯಗತ್ಯ' ಎಂದು ಅವರು ಹೇಳಿದರು.

ಸಮಾಜದ ಸ್ವಾಸ್ಥ್ಯಕ್ಕೆ ಯೋಗ

ಕೇವಲ ದೇಹದ ಆರೋಗ್ಯಕ್ಕೆ ಮಾತ್ರವಲ್ಲ, ಸಮಾಜದ ಸ್ವಾಸ್ಥ್ಯಕ್ಕಾಗಿ ಯೋಗ ಮಾಡಿ. ಪ್ರತಿದಿನ ಯೋಗ ಮಾಡುವ ಮೂಲಕ ದೇಹ ಮತ್ತು ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಂಡರೆ, ಸಾಮಾಜಿಕ ಸ್ವಾಸ್ತ್ಯವನ್ನೂ ಕಾಪಾಡುವುದಕ್ಕೆ ಸಾಧ್ಯ ಎಂದು ಮೋದಿ ಹೇಳಿದರು. ಯೋಗ ಭಾರತದಲ್ಲಷ್ಟೇ ಅಲ್ಲದೆ, ದೇಶದ ಆಚೆಗೂ ಪ್ರಸಿದ್ಧಿ ಪಡೆಯುತ್ತಿರುವ ಕುರಿತು ಸಂತಸ ವ್ಯಕ್ತಪಡಿಸಿದರು.

ಯೋಗಿ ಸಾಥ್

ಯೋಗಿ ಸಾಥ್

ಪ್ರಧಾನಿ ಮೋದಿಯವರಿಗೆ ಸಾಥ್ ನೀಡಿದ ಉತ್ತರ ಪ್ರದೇಶ ಮುಖ್ಯಮಂಗತ್ರಿ ಯೋಗಿ ಆದಿತ್ಯನಾಥ್, ಯೋಗ ಎಂಬುದು ಒಂದು ಜೀವನ ಕಲೆ, ಇದು ಒಗ್ಗಟ್ಟನ್ನು ಕಲಿಸುತ್ತದೆ. ಯೋಗ ನಮ್ಮ ಸಂಪ್ರದಾಯ, ನಮ್ಮಲ್ಲಿ ಸಮಗ್ರತೆ ಮೂಡಿಸುವ ಸಾಧನ ಯೋಗ' ಎಂದರು.

ಮಳೆಯನ್ನೂ ಲೆಕ್ಕಿಸದೆ ಯೋಗ ಮಾಡಿದ ಜನರು

ಮಳೆಯನ್ನೂ ಲೆಕ್ಕಿಸದೆ ಯೋಗ ಮಾಡಿದ ಜನರು

80 ನಿಮಿಷಗಳ ಕಾಲ ನಡೆದ ಯೋಗ ಕಾರ್ಯಕ್ರಮದಲ್ಲಿ, ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೆ ಜನರು ಅತ್ಯುತ್ಸಾಹದಿಂದ ಯೋಗಾಸನ ಮಾಡಿದರು. ಜನರ ಆಸಕ್ತಿಯನ್ನು ಕಂಡು ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಇಬ್ಬರೂ ಹರ್ಷ ವ್ಯಕ್ತಪಡಿಸಿದರು.

50000 ಜನ ಭಾಗಿ

ಪ್ರಧಾನಿ ಮೋದಿಯವರೊಂದಿಗೆ ಲಕ್ನೋದಲ್ಲಿ 50000 ಜನ ಯೋಗ ಮಾಡುವ ಮೂಲಕ ಯೋಗಾಸನ ದ ಕುರಿತ ತಮ್ಮ ಉತ್ಸಾಹವನ್ನು ಪ್ರದರ್ಶಿಸಿದರು. ಪ್ರಧಾನಿ ಭೇಟಿ ಕಾರಣ ಲಕ್ನೋದಾದ್ಯಂತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

English summary
"Today, Yoga has become a part of so many lives. Yoga’s popularity outside India is high and has connected the world with India", Prime minister Narendra modi told today (June 21st). He had performed Yoga with 50,000 participants and was addressing people in Ramabai rally ground, Lucknow, Uttar Pradesh during international Yoga day on June 21st.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X