ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಗಳಲ್ಲಿ: ಸಸಿ ನೆಟ್ಟ ಪ್ರಧಾನಿ ಮೋದಿ, ವಿರಾಟ್ ಕೊಹ್ಲಿ

|
Google Oneindia Kannada News

ನವದೆಹಲಿ, ಜೂ. 05: ವಿಶ್ವ ಪರಿಸರ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ನವದೆಹಲಿಯ ರೇಸ್ ಕೋರ್ಸ್ ರಸ್ತೆ ಬಳಿ ಗಿಡ ನೆಟ್ಟು ಪರಿಸರ ಸಂರಕ್ಷಣೆ ಮತ್ತು ಜಾಗೃತಿಯನ್ನು ತಮ್ಮ ಕೃತಿಯ ಮೂಲಕವೇ ತೋರಿಸಿದರು. ಕ್ರಿಕೆಟಿಗ ವಿರಾಟ್ ಕೊಹ್ಲಿ ಸಹ ಗಿಡ ನೆಟ್ಟು ಪರಿಸರ ದಿನಾಚರಣೆ ಆಚರಿಸಿದರು.

ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವ ಪ್ರಕಾಶ್ ಜಾವ್ಡೇಕರ್ , ಒಲಿಂಪಿಕ್ ಪದಕ ವಿಜೇತ ಸುಶೀಲ್ ಕುಮಾರ್ ಸಹ ಗಿಡ ನೆಟ್ಟು ಪರಿಸರದ ಪ್ರಾಮುಖ್ಯ ಸಾರಿದರು. ಉಳಿದಂತೆ ಅನೇಕ ಸರ್ಕಾರಿ ಕಚೇರಿಗಳು, ಶಾಲಾ ಕಾಲೇಜುಗಳು ಮತ್ತು ಸ್ವಯಂ ಸೇವಾ ಸಂಸ್ಥೆಗಳು ಪರಿಸರ ದಿನವನ್ನು ಆಚರಿಸಿದವು.

ಪ್ರತಿದಿನ ಹೆಚ್ಚುತ್ತಿರುವ ವಾತಾವರಣದ ತಾಪಮಾನ, ಭೂಕಂಪ, ಕುಡಿಯುವ ನೀರಿನ ಸಮಸ್ಯೆ, ನಗರಗಳಲ್ಲಿ ಹೆಚ್ಚಾಗಿರುವ ವಾಯು ಮಾಲಿನ್ಯ, ಕಲುಷಿತ ವಾತಾವರಣ ಎಲ್ಲವನ್ನು ಒಂದು ಕ್ಷಣ ನೆನೆದರೆ ಭಯವಾಗುತ್ತದೆ. ಪ್ರತಿಯೊಬ್ಬರು ಪರಿಸರ ಸಂರಕ್ಷಣಗೆ ಇಂದಿನಿಂದಲೇ ಕಂಕಣ ಬದ್ಧರಾಗಬೇಕಿದೆ. ಪರಿಸರ ದಿನಾಚರಣೆಯ ಜತೆ ಮತ್ತಷ್ಟು ಸುದ್ದಿಗಳು ಚಿತ್ರಗಳಲ್ಲಿ....(ಪಿಟಿಐ ಚಿತ್ರಗಳು)

ಗಿಡ ನೆಡಿ, ಗಿಡ ನೆಡಿ

ಗಿಡ ನೆಡಿ, ಗಿಡ ನೆಡಿ

ವಿಶ್ವಪರಿಸರ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ನವದೆಹಲಿಯ ರೇಸ್ ಕೋರ್ಸ್ ರಸ್ತೆ ಬಳಿ ಗಿಡ ನೆಟ್ಟು ಪರಿಸರ ಸಂರಕ್ಷಣೆ ಮತ್ತು ಜಾಗೃತಿ ಮೂಡಿಸಿದರು. ಪ್ರಧಾನಿ ಸದ್ಯವೇ ಮತ್ತೊಂದು ಸುತ್ತಿನ ವಿದೇಶ ಪ್ರವಾಸ ಕೈಗೊಳ್ಳಲಿದ್ದಾರೆ.

ಅರಣ್ಯ ಉಳಿಸಿ, ಜೀವನ ಕಾಪಾಡಿ

ಅರಣ್ಯ ಉಳಿಸಿ, ಜೀವನ ಕಾಪಾಡಿ

ನರೇಂದ್ರ ಮೋದಿ ಕದಂಬ ಗಿಡವನ್ನು ನೆಟ್ಟು ನಂತರ ಪರಿಸರದ ಮಹತ್ವದ ಬಗ್ಗೆ ಮಾತನಾಡಿದರು. ಸದ್ಯ ದೇಶ ಎದುರಿಸುತ್ತಿರುವ ಸಮಸ್ಯಗಳಲ್ಲಿ ಪರಿಸರ ಮಾಲಿನ್ಯ ಬಹಳ ದೊಡ್ಡದು ಎಂದು ತಿಳಿಸಿಕೊಟ್ಟರು.

ಮನೆಗೊಂದು ಮರ, ಊರಿಗೊಂದು ಉದ್ಯಾನ

ಮನೆಗೊಂದು ಮರ, ಊರಿಗೊಂದು ಉದ್ಯಾನ

ಕ್ರಿಕೆಟಿಗ ವಿರಾಟ್ ಕೊಹ್ಲಿ ಪರಿಸರ ಪ್ರೇಮವನ್ನು ಮೆರೆದರು. ಬಾಂಗ್ಲಾ ವಿರುದ್ಧ ಭಾರತ ಕ್ರಿಕೆಟ್ ತಂಡ ಜೂನ್ 18 ರಿಂದ ಕ್ರಿಕೆಟ್ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಲಿದ್ದು ವಿರಾಟ್ ಭಾರತ ಟೆಸ್ಟ್ ತಂಡದ ನಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಹಸಿರೇ ಉಸಿರು

ಹಸಿರೇ ಉಸಿರು

ಒಲಿಂಪಿಕ್ ಪದಕ ವಿಜೇತ ಸುಶೀಲ್ ಕುಮಾರ್ ಗಿಡ ನೆಟ್ಟು ಪರಿಸರದ ಪ್ರಾಮುಖ್ಯ ಸಾರಿದರು. ಕೇಂದ್ರ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವ ಪ್ರಕಾಶ್ ಜಾವ್ಡೇಕರ್ ಹಾಜರಿದ್ದರು.

ಪ್ರಮಾಣ ಸ್ವೀಕರಿಸಿ

ಪ್ರಮಾಣ ಸ್ವೀಕರಿಸಿ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ಮತ್ತು ಅಧಿಕಾರಿಗಳಿಗೆ ಪರಿಸರ ಸಂರಕ್ಷಣೆ ಪ್ರಮಾಣ ಬೋಧಿಸಿದರು.

English summary
News in Pics: Prime Minister Narendra Modi planting a Kadamb sapling (Neolamarckia Cadamba), at the Race Course Road, lawns to mark the World Environment Day, in New Delhi on Friday. Test captain Virat Kohli with Minister of State for Environment, Forest and Climate Change (Independent Charge), Prakash Javadekar watering a plant as he participates in a tree plantation programme on the occasion of the World Environment Day. Here the Pics of World Environment day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X