ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಸ್ಪೋರ್ಟ್: ಮಹತ್ವದ ನಿರ್ಧಾರ ಪ್ರಕಟಿಸಿದ ಪ್ರಧಾನಿ ಮೋದಿ

ಮಹಿಳಾ ಸಬಲೀಕರಣದ ಬಗ್ಗೆ ಹೆಚ್ಚು ಒತ್ತು ನೀಡುತ್ತಿರುವ ಮೋದಿ ಸರಕಾರ, ಮಹಿಳೆಯರಿಗೆ ಅನುಕೂಲವಾಗುವ ಮತ್ತೊಂದು ಮಹತ್ವದ ನಿರ್ಧಾರವನ್ನು ಪ್ರಕಟಿಸಿದೆ. ಮಹಿಳೆಯರಿಗೆ ಪಾಸ್ಪೋರ್ಟ್ ನಿಯಮದಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ.

|
Google Oneindia Kannada News

ಮುಂಬೈ, ಏ 15 (ಪಿಟಿಐ): ಮಹಿಳಾ ಸಬಲೀಕರಣದ ಬಗ್ಗೆ ಹೆಚ್ಚು ಒತ್ತು ನೀಡುತ್ತಿರುವ ಮೋದಿ ಸರಕಾರ, ಮಹಿಳೆಯರಿಗೆ ಅನುಕೂಲವಾಗುವ ಮತ್ತೊಂದು ಮಹತ್ವದ ನಿರ್ಧಾರವನ್ನು ಪ್ರಕಟಿಸಿದೆ.

ಇಂಡಿಯನ್ ಮರ್ಚೆಂಟ್ ಚೇಂಬರ್ಸಿನ ಮಹಿಳಾ ಘಟಕವನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡುತ್ತಿದ್ದ ಪ್ರಧಾನಿ ಮೋದಿ, ಮಹಿಳೆಯರಿಗೆ ಅನುಕೂಲವಾಗುವಂತೆ ಪಾಸ್ಪೋರ್ಟ್ ನಿಯಮದಲ್ಲಿ ಕೆಲವೊಂದು ಮಹತ್ವದ ಬದಲಾವಣೆಯನ್ನು ಮಾಡಲಾಗಿದೆ ಎಂದಿದ್ದಾರೆ. (ಅಂಚೆ ಕಚೇರಿಯಲ್ಲಿ ಪಾಸ್ಪೋರ್ಟ್)

 Women can retain their maiden names in passports: PM Narendra Modi

ಮಹಿಳೆಯರಿಗೆ ಪಾಸ್ಪೋರ್ಟ್ ನಿಯಮದಲ್ಲಿ ಮತ್ತು ಮಹಿಳಾ ಸಬಲೀಕರಣದ ಬಗ್ಗೆ ಮೋದಿ ಸರಕಾರ ಪ್ರಕಟಿಸಿರುವ ನಿರ್ಧಾರಗಳು ಇಂತಿವೆ:

> ಮದುವೆ ಮತ್ತು ಡೈವೋರ್ಸ್ ನಂತರ ಪಾಸ್ಪೋರ್ಟಿನಲ್ಲಿ ಹೆಸರು ಬದಲಾಯಿಸಿಕೊಳ್ಳುವುದು ಕಡ್ದಾಯವಲ್ಲ.
> ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಮುದ್ರಾ ಸಾಲದಲ್ಲಿ ಮಹಿಳೆಯರಿಗೆ ಪ್ರಮುಖ ಆದ್ಯತೆ ನೀಡಲಾಗಿದೆ.
> ಇದುವರೆಗೆ ಬಿಡುಗಡೆ ಮಾಡಲಾಗಿರುವ ಮುದ್ರಾ ಸಾಲದಲ್ಲಿ ಶೇ. 70ರಷ್ಟು ಮಹಿಳೆಯರು ಇದರ ಲಾಭವನ್ನು ಪಡೆದುಕೊಂಡಿದ್ದಾರೆ.
> ಪಾಸ್ಪೋರ್ಟಿಗಾಗಿ ಮಹಿಳೆಯರು ವಿವಾಹ ಪ್ರಮಾಣಪತ್ರ ನೀಡಬೇಕಾಗಿಲ್ಲ.
> ಮದುವೆಯಾದ ನಂತರವೂ ಪಾಸ್ಪೋರ್ಟಿನಲ್ಲಿ ತಂದೆತಾಯಿಯ ಹೆಸರನ್ನೇ ಮುಂದುವರಿಸಿಕೊಳ್ಳಬಹುದು.
> ಉಜ್ವಲ ಯೋಜನೆಯಡಿ ಎರಡು ಕೋಟಿ ಅಡುಗೆ ಅನಿಲ ಸಂಪರ್ಕ ಒದಗಿಸಲಾಗಿದೆ.
> ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ, ಮಹಿಳೆಯರ ಹೆಸರಿನಲ್ಲಿ ಆಸ್ತಿ ನೊಂದಾಣಿ ಮಾಡಲು ಇದ್ದ ತೊಡಕನ್ನು ನಿವಾರಿಸಲಾಗಿದೆ.

English summary
PM Narendra Modi announced that women are free to retain their maiden names in their passports now after the marriage. Modi said government is working in different ways to empower womens through various schemes like Mudra and Ujjwala.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X