ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿರಿಯ ಮಗಳಿಗೆ ಮನೆ ಯಜಮಾನಿಕೆ ಕಾನೂನು ಬದ್ಧ

|
Google Oneindia Kannada News

ನವದೆಹಲಿ, ಫೆಬ್ರವರಿ, 03: ಮನೆಯ ಹಿರಿಯ ಮಗಳು ಮನೆಯ ಯಜಮಾನಿಕೆ ಪಡೆಯಲು ಅರ್ಹಳು ಎಂದು ದೆಹಲಿ ಹೈ ಕೋರ್ಟ್ ಮಹತ್ವದ ಆದೇಶ ನೀಡಿದೆ. ಮನೆ ಯಜಮಾನನ ಅನುಪಸ್ಥಿತಿಯಲ್ಲಿ ಹಿರಿಯ ಮಕ್ಕಳು ಜವಾಬ್ದಾರಿ ವಹಿಸಿಕೊಳ್ಳುತ್ತಾರೆ. ಇದರಲ್ಲಿ ಮಗ ಅಥವಾ ಮಗಳು ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹೇಳಿದೆ.

ಹಿಂದು ಅವಿಭಜಿತ ಕುಟುಂಬಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ನಾಜ್ಮಿ ವಜೀರಿ ಆದೇಶ ನೀಡಿದ್ದಾರೆ. ತಂದೆ ಹಾಗೂ ಮೂವರು ಚಿಕ್ಕಪ್ಪಂದಿರ ಮರಣದ ಬಳಿಕ ಕುಟುಂಬದ ಹಿರಿಯ ಹೆಣ್ಣುಮಗಳಾಗಿದ್ದರೂ ತನಗೆ ಕುಟುಂಬದ ಯಜಮಾನಿಯಾಗುವ ಅವಕಾಶ ನಿರಾಕರಿಸಲಾಗಿದೆ ಎಂದು ಮಹಿಳೆಯೊಬ್ಬಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಈ ತೀರ್ಮಾನ ನೀಡಿದೆ.[ಬಾಡಿಗೆ ತಾಯಿಂದ ಮಗು ಪಡೆದರೂ 6 ತಿಂಗಳ ಹೆರಿಗೆ ರಜೆ]

Women can be supervise family assets: Delhi High Court

2005ರಲ್ಲಿ ಹಿಂದು ಉತ್ತರಾಧಿಕಾರ ಕಾಯ್ದೆ ಅನ್ವಯ ತಂದೆಯ ಆಸ್ತಿಯಲ್ಲಿ ಹೆಣ್ಣುಮಕ್ಕಳಿಗೂ ಸಮಾನ ಪಾಲಿನ ಅಧಿಕಾರ ನೀಡಲಾಗಿತ್ತು. ಇದೀಗ ಕೋರ್ಟ್ ತೀರ್ಪಿನಿಂದಾಗಿ ಕೌಟುಂಬಿಕ ವಿಷಯಗಳಲ್ಲೂ ಮಹಿಳೆಯರಿಗೆ ವಿಶೆಷ ಅಧಿಕಾರ ಲಭ್ಯವಾಗಲಿದೆ.[ಭ್ರೂಣ ಲಿಂಗ ಪತ್ತೆ ಪರೀಕ್ಷೆ ಮೇಲಿನ ನಿಷೇಧ ತೆರವು]

6 ತಿಂಗಳ ತಾಯ್ತನದ ರಜಾ
ಸಂತಾನ ಭಾಗ್ಯವಿಲ್ಲದ ಸಂದರ್ಭ ಬಾಡಿಗೆ ತಾಯಿಂದ ಮಕ್ಕಳ ಪಡೆದುಕೊಂಡರು ಲಾಲನೆ ಪಾಲನೆಗೆಂದು 6 ತಿಂಗಳ ತಾಯ್ತನ ರಜೆಗೆ ಮಹಿಳೆ ಅರ್ಹಳು ಎಂದು ಬಾಂಬೆ ಹೈಕೋರ್ಟ್ ತೀರ್ಪು ನೀಡಿತ್ತು. ಇದೀಗ ಕೌಟಂಬಿಕ ವಿಚಾರಗಳಲ್ಲೂ ನ್ಯಾಯಾಲಯವೇ ಮಹಿಳೆಯರಿಗೆ ವಿಶೇಷ ಹಕ್ಕು ಕಲ್ಪಿಸಿದೆ.

English summary
In a landmark judgement passed by the Delhi High Court, the eldest female member of a family can be its ‘Karta’ – in all respects. Going by the definition of the word according to ancient Hindu customs and texts, it is someone who acts as the manager of a joint family.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X