ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಣ್ಣು ಮಕ್ಕಳೆ ಹುಟ್ಟದಿರಲಿ ಎಂದ ಮಹಿಳಾ ಐಎಎಸ್ ಅಧಿಕಾರಿ

|
Google Oneindia Kannada News

ನವದೆಹಲಿ, ಆ. 04: ದೇಶದಲ್ಲಿ ಹೆಚ್ಚುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯದಿಂದ ರೋಸಿಹೋದ ಮಹಿಳಾ ಐಎಎಸ್ ಅಧಿಕಾರಿಯೊಬ್ಬರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ದೇಶದ ವ್ಯವಸ್ಥೆಯ ಬಗ್ಗೆ ತಮ್ಮ ಅಸಹನೆ, ಅನುಕಂಪ ಎಲ್ಲವನ್ನು ತೋಡಿಕೊಂಡಿದ್ದಾರೆ. ಐಎಎಸ್ ಅಧಿಕಾರಿ ರಿಜು ಬಫ್ನ 'ಈ ದೇಶದಲ್ಲಿ ಹೆಣ್ಣು ಮಕ್ಕಳೇ ಹುಟ್ಟದಿರಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ' ಎಂದು ಬರೆದುಕೊಂಡಿದ್ದರು.

ನಂತರ ಇದಕ್ಕೆ ಸ್ಪಷ್ಟನೆಯೊಂದನ್ನು ಹಾಕಿ ಕೆಲ ವಾಕ್ಯಗಳನ್ನು ಎಡಿಟ್ ಮಾಡಿದ್ದಾರೆ. ಅಲ್ಲದೇ ಇದನ್ನು ಷೇರ್ ಮಾಡಿದವರಿಗೆ, ಮಾಧ್ಯಮಗಳಿಗೂ ವಂದನೆ ಸಲ್ಲಿಕೆ ಮಾಡಿದ್ದಾರೆ. ಅಧಿಕಾರಿಯ ಪೋಸ್ಟ್ ಗೆ ಸಾವಿರಾರು ಜನ ಬೆಂಬಲವನ್ನು ನೀಡಿದ್ದಾರೆ.[ಗಂಡನ ಕಳೆದುಕೊಂಡ ಮಹಿಳೆಯ ನೋವಿನ ಪತ್ರ]

ಮಹಿಳಾ ಐಎಎಸ್ ಅಧಿಕಾರಿಯ ಫೇಸ್ ಬುಕ್ ಖಾತೆ

ias

ಮಧ್ಯಪ್ರದೇಶದ ಮಾನವ ಹಕ್ಕು ಆಯೋಗದ ಸದಸ್ಯನೊಬ್ಬ ನನಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದ. ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಿಸಿದ್ದೆ. ಇದಕ್ಕೆ ಸಂಬಂಧಿಸಿದಂತೆ ಅಶ್ಲೀಲ ಸಂದೇಶ ಕಳುಹಿಸಿದ್ದ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಂಡ ಆಯೋಗ ಆತನನ್ನು ಅಮಾನತು ಮಾಡಿತ್ತು.

ಆದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕೋರ್ಟ್ ಗೆ ಹಾಜರಾದೆ. ಅಲ್ಲಿ ಆರೋಪಿ ಕಡೆಯ ವಕೀಲರು ನಡೆದುಕೊಂಡ ರೀತಿ ನನಗೆ ವ್ಯವಸ್ಥೆ ಮೇಲೆ ಅಸಹ್ಯ ಹುಟ್ಟುಹಾಕಿತು. ನನ್ನಂಥ ಹುದ್ದೆಯಲ್ಲಿರುವರನ್ನೇ ಇಷ್ಟು ತುಚ್ಛವಾಗಿ ಕಾಣುವ ಜನರು ಇನ್ನು ಸಾಮಾನ್ಯ ಮಹಿಳೆಯರನ್ನು ಹೇಗೆ ಕಾಣಬಹುದು ಎಂಬುದನ್ನು ಊಹಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಬರೆದುಕೊಂಡಿದ್ದರು.[ಆಟೋ ನೆಚ್ಚಿಕೊಂಡ ಬೆಂಗ್ಳೂರು ಮಹಿಳೆಯರೇ ಹುಷಾರ್!]

ಇಂದು ಮತ್ತೆ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಲವಾರು ವಿಚಾರಗಳನ್ನು ಬರೆದುಕೊಂಡಿರುವ ರಿಜು, ಇನ್ನು ಮುಂದೆಯಾದರೂ ದೇಶದಲ್ಲಿ ಬದಲಾವಣೆಯಾಗುತ್ತದೆಯೇ? ಎಂದು ಪ್ರಶ್ನೆ ಮಾಡಿದ್ದಾರೆ. ಮಹಿಳೆಯರನ್ನು ಗೌರವದಿಂದ ನಡೆಸಿಕೊಳ್ಳುವ ನ್ಯಾಯಾಲಯಗಳು ನಿರ್ಮಾಣವಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

English summary
A young woman IAS officer, who was being sexually harassed by a man, has described her bad experience at a Judicial Magistrate's court when she went to record her statement. Riju Bafna filed an FIR against Santosh Chaubey, the Ayog Mitra of Madhya Pradesh's Human Rights Commission in Seoni district. The FB post is viral and Thousands of people reacted.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X