ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಹುಲ್ ಬಯಸಿದ್ದರೆ ಅವರೊಂದಿಗೆ JNUಗೆ ಹೋಗುತ್ತಿದ್ದೆ: ಸ್ಮೃತಿ ಇರಾನಿ

|
Google Oneindia Kannada News

ನನ್ನ ರಾಜಕೀಯ ವೃತ್ತಿ ಜೀವನದಲ್ಲಿ ಎಂದೂ ಜಾತಿ ಧರ್ಮ ಮುಂದಿಟ್ಟುಕೊಂಡು ಕೆಲಸ ಮಾಡಿದವಳಲ್ಲ, ನನ್ನ ಇದುವರೆಗಿನ ಅಧಿಕಾರದ ಅವಧಿಯಲ್ಲಿ ಸಾವಿರಾರು ಅರ್ಜಿಯನ್ನು ವಿಲೇವಾರಿ ಮಾಡಿದ್ದೇನೆಂದು ಕೇಂದ್ರ ಮಾನವ ಸಂಪನ್ಮೂಲ ಖಾತೆಯ ಸಚಿವ ಸ್ಮೃತಿ ಇರಾನಿ ಹೇಳಿದ್ದಾರೆ.

ರಾಜ್ಯಸಭೆಯಲ್ಲಿ ಬುಧವಾರ (ಫೆ 24) ರೋಹಿತ್ ವೇಮುಲ ಮತ್ತು JNU ವಿಚಾರದಲ್ಲಿ ಪ್ರತಿಪಕ್ಷಗಳ ಪ್ರಶ್ನೆಯ ಮೇಲೆ ಪ್ರಶ್ನೆಗೆ ಉತ್ತರಿಸುತ್ತಿದ್ದ ಸ್ಮೃತಿ, ಈ ಎರಡೂ ವಿಚಾರದಲ್ಲಿ ರಾಜಕೀಯ ಲಾಭ ಪಡೆಯಲು ರಾಹುಲ್ ಗಾಂಧಿ ಮುಂದಾದರು. (ರಾಡಿ ಎಬ್ಬಿಸಿದ JNUನಲ್ಲಿನ ಕಾಂಡೋಮ್ ಹೇಳಿಕೆ)

ರಾಹುಲ್ ಗಾಂಧಿ ಬಯಸಿದ್ದರೆ ಅವರ ಜೊತೆ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯಕ್ಕೆ ಹೋಗಿ, ವಿದ್ಯಾರ್ಥಿಗಳ ಜೊತೆ ಮಾತುಕತೆಗೆ ಹೋಗಲು ನಾನು ಸಿದ್ದನಿದ್ದೆ. ಕಾಂಗ್ರೆಸ್ ಪಕ್ಷಕ್ಕೆ ಸಮಸ್ಯೆ ಪರಿಹಾರಕ್ಕಿಂತ, ಇದರಲ್ಲಿ ರಾಜಕೀಯ ಲಾಭ ಪಡೆಯುವುದೇ ಮುಖ್ಯವಾಯಿತು ಎಂದು ಕಾಂಗ್ರೆಸ್ಸಿಗರಿಗೆ ಸ್ಮೃತಿ ತಿರುಗೇಟು ನೀಡಿದ್ದಾರೆ.

ನನ್ನ ಕರ್ತವ್ಯವನ್ನೇ ಕೆಲವರು ಪ್ರಶ್ನಿಸುತ್ತಿದ್ದಾರೆ, ವಿರೋಧ ಪಕ್ಷಗಳು ನನ್ನ ಉತ್ತರವನ್ನು ಕೇಳಲು ಸಿದ್ದರಿಲ್ಲ. ರೋಹಿತ್ ವೇಮುಲ ಆತ್ಮಹತ್ಯೆ ವಿಚಾರವನ್ನು ರಾಜಕೀಯ ಮಾಡಿದವರು ನೀವು ಎಂದು ಕಾಂಗ್ರೆಸ್ ಸದಸ್ಯರತ್ತ ಬೊಟ್ಟು ಮಾಡಿ ಸ್ಮೃತಿ ಇರಾನಿ ಭಾವೋದ್ವೇಗಕ್ಕೊಳಗಾದರು. (ಹುಟ್ಟಿ ಬಾ ಹನುಮಂತಪ್ಪ ದೇಶದ ಹಣತೆಯ ಬೆಳಗಲು)

ರಾಜ್ಯಸಭೆಯಲ್ಲಿ ರೋಹಿತ್ ವೇಮುಲ ಆತ್ಮಹತ್ಯೆ ಪ್ರಕರಣ ಹಾಗೂ ಲೋಕಸಭೆಯಲ್ಲಿ ಜೆಎನ್‌ಯು ವಿವಾದ ನಿರೀಕ್ಷೆಯಂತೆ ಪ್ರತಿಧ್ವನಿಸಿದ್ದರಿಂದ, ಬುಧವಾರ ಸಂಸತ್ತಿನ ಅಧಿವೇಶನವನ್ನು ಹಲವು ಬಾರಿ ಮುಂದೂಡುವಂತಾಯಿತು.

ರಾಜ್ಯಸಭೆಯಲ್ಲಿ ಸ್ಮೃತಿ ಇರಾನಿ ಅಬ್ಬರದ ಭಾಷಣ, ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ರಾಜ್ಯಸಭೆಯಲ್ಲಿ ಮಾಯಾವತಿ

ರಾಜ್ಯಸಭೆಯಲ್ಲಿ ಮಾಯಾವತಿ

ಅಂಬೇಡ್ಕರ್ ವಿರೋಧಿ, ದಲಿತ ವಿರೋಧಿ ಈ ಸರ್ಕಾರ ಎಂದು ಬಿಎಸ್ಪಿ ನಾಯಕರ ಘೋಷಣೆಯ ನಡುವೆ, ಬಿಜೆಪಿ ಸರಕಾರ ಆರ್ ಎಸ್ ಎಸ್ ಓಲೈಸುವ ಕೆಲಸವನ್ನು ಮಾಡುತ್ತಿದೆಯೇ ಹೊರತು, ಜನಪರ ಕಾಳಜಿ ಮೋದಿ ಸರಕಾರಕ್ಕಿಲ್ಲ ಎಂದು ಪಕ್ಷದ ನಾಯಕಿ ಮಾಯವತಿ ಹೇಳಿಕೆ ನೀಡಿದರು.

ರೋಹಿತ್ ವೇಮುಲ

ರೋಹಿತ್ ವೇಮುಲ

ರೋಹಿತ್ ವೇಮುಲ ವಿಚಾರದಲ್ಲಿ ಸಭಾಪತಿಗಳು ಭಾಷಣ ನಿಲ್ಲಿಸುವಂತೆ ಮನವಿ ಮಾಡಿದರೂ ಮಾತು ಮುಂದುವರಿಸಿದ ಮಾಯಾವತಿ ಪ್ರಶ್ನೆಗೆ ಉತ್ತರಿಸುತ್ತಿದ್ದ ಸ್ಮೃತಿ, ನಿಮ್ಮ ಪ್ರಶ್ನೆಗೆ ನಾನು ಉತ್ತರಿಸುತ್ತೇನೆ. ನನಗೆ ಮಾತಾಡಲು ಬಿಡಿ, ನನ್ನ ಪ್ರಶ್ನೆಯಿಂದ ನೀವು ಮತ್ತು ನಿಮ್ಮ ಪಕ್ಷದವರು ಸಂತುಷ್ಟರಾಗದಿದ್ದರೆ, ನಾನು ಮತ್ತು ನನ್ನ ಸರಕಾರ ನಿಮ್ಮ ಚರಣಕ್ಕೆ ಬೀಳಲು ಸಿದ್ದ ಎಂದು ಇರಾನಿ ಹೇಳಿದರೂ, ಚರ್ಚೆ 'ಬ್ಯಾಂಕ್ ಗ್ರೌಂಡ್ ಮ್ಯೂಸಿಕ್' ವಿಪರೀತ ಎನಿಸುವ ಚಿತ್ರದಂತಾಗಿದ್ದು ವಿಪರ್ಯಾಸ.

ರಾಹುಲ್ ಗಾಂಧಿ ವಿರುದ್ದ ಕಿಡಿಕಾರಿದ ಸ್ಮೃತಿ

ರಾಹುಲ್ ಗಾಂಧಿ ವಿರುದ್ದ ಕಿಡಿಕಾರಿದ ಸ್ಮೃತಿ

ಶಿಕ್ಷಣ ವ್ಯವಸ್ಥೆಯನ್ನು ರಾಜಕೀಯದ ಮೈದಾನ ಮಾಡಬಾರದು. ಮಕ್ಕಳನ್ನು ಮುಂದಿನ ವೋಟ್ ಬ್ಯಾಂಕ್ ಎಂದು ನಾವು ಪರಿಗಣಿಸಿದರೆ ದೇಶ ಹೇಗೆ ಮುಂದುವರಿಯಲು ಸಾಧ್ಯ. ರೋಹಿತ್ ವೇಮುಲ ಮತ್ತು JNU ವಿಚಾರದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷರು ಮಾಡಿದ್ದು ಅದನ್ನೇ ಎಂದು ಸ್ಮೃತಿ ಇರಾನಿ, ರಾಹುಲ್ ಗಾಂಧಿ ವಿರುದ್ದ ಹರಿಹಾಯ್ದಿದ್ದಾರೆ.

ರಾಹುಲ್ ಕರೆದಿದ್ದರೆ ವಿವಿಗೆ ಹೋಗುತ್ತಿದ್ದೆ

ರಾಹುಲ್ ಕರೆದಿದ್ದರೆ ವಿವಿಗೆ ಹೋಗುತ್ತಿದ್ದೆ

JNU ವಿಚಾರದಲ್ಲಿ ಅಬ್ಬರಿಸುವ ರಾಹುಲ್ ಗಾಂಧಿಗೆ ನಿಜವಾಗಲೂ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು, ಇಬ್ಬರೂ ಜೊತೆಯಾಗಿ ವಿವಿಗೆ ಹೋಗಿ ವಿದ್ಯಾರ್ಥಿ ಸಮುದಾಯವನ್ನು ಉದ್ದೇಶಿಸಿ ಮಾತನಾಡೋಣ ಎಂದು ಅನಿಸಬೇಕಾಗಿತ್ತು, ಅವರು ಕರೆದಿದ್ದರೆ ನಾನು ಸಂತೋಷದಿಂದ ಹೋಗುತ್ತಿದ್ದೆ, ಆದರೆ ಅವರು ಅದನ್ನು ಮಾಡಲಿಲ್ಲ. ವಿದ್ಯಾರ್ಥಿ ಸಮುದಾಯದ ನಡುವೆ ದಯವಿಟ್ಟು ಕಂದಕ ಸೃಷ್ಟಿಸಬೇಡಿ ಎನ್ನುವುದು ರಾಹುಲ್ ಅವರಲ್ಲಿ ನನ್ನ ಮನವಿ ಎಂದು ಇರಾನಿ ಹೇಳಿದಾಗ, ಬಿಜೆಪಿ ಸದಸ್ಯರು ಮೇಜುತಟ್ಟಿ ಸ್ವಾಗತಿಸಿದರು.

ತೆಲಂಗಾಣ ವಿಚಾರ ಎತ್ತಿದ ಸ್ಮೃತಿ ಇರಾನಿ

ತೆಲಂಗಾಣ ವಿಚಾರ ಎತ್ತಿದ ಸ್ಮೃತಿ ಇರಾನಿ

ತೆಲಂಗಾಣ ಪ್ರತ್ಯೇಕ ರಾಜ್ಯ ವಿಚಾರದಲ್ಲಿ ನಡೆದ ಹೋರಾಟದಲ್ಲಿ ಸಾವಿರಾರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದರು, ಆಗ ರಾಹುಲ್ ಗಾಂಧಿ ಭೇಟಿ ನೀಡಿರಲಿಲ್ಲ. ಯಾಕೆಂದರೆ ಆಗ ಅವರ ಸರಕಾರ ಅಧಿಕಾರದಲ್ಲಿತ್ತು. ರೋಹಿತ್ ಆತ್ಮಹತ್ಯೆ ಪ್ರಕರಣದಲ್ಲಿ, JNU ವಿಚಾರದಲ್ಲಿ ಕ್ಯಾಂಪಸ್ಸಿಗೆ ಭೇಟಿ ನೀಡಿದರು. ನಿಮ್ಮ ಈ ನಾಟಕ ಜನರ ಮುಂದೆ ಜಗಜ್ಜಾಹೀರಾಗುವ ದಿನ ದೂರವಿಲ್ಲ ಎಂದು ರಾಹುಲ್ ವಿರುದ್ದ ಸ್ಮೃತಿ ವಾಗ್ದಾಳಿ ನಡೆಸಿದ್ದಾರೆ.

English summary
Had AICC VP Rahul Gandhi requested me to accompany him to JNU and jointly appealed to the students to remember what nationalism is I would have happily gone, Union HRD Minister Smriti Irani.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X