ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ರೇಪ್ ಮಾಡುವ ಮುನ್ನ ಈಕೆಯ ವಿಡಿಯೋ ನೋಡಿ'

|
Google Oneindia Kannada News

ಬೆಂಗಳೂರು, ಫೆ. 3: 'ಬನ್ನಿ ನನ್ನನ್ನು ರೇಪ್ ಮಾಡಿ, ಕಡಿಮೆ ಬಟ್ಟೆ ಹಾಕಿದ್ದೇನೆ ನನ್ನನ್ನು ರೇಪ್ ಮಾಡಿ, ನಿಮಗೆ ರಸ್ತೆಯಾದರೇನು? ದೇವಾಲಯವಾದರೇನು ? ಶಾಲೆಗೆ ಹೊರಟಿದ್ದೇನೆ ರೇಪ್ ಮಾಡಿ!

ಹೌದು...ಮಾಧುರಿ ದೇಸಾಯಿ ಎಂಬ ಹುಡುಗಿ ಇಂಥದ್ದೇ ಬಹಿರಂಗ ಆಹ್ವಾನ ನೀಡಿದ್ದಾಳೆ. ಅತ್ಯಾಚಾರಿಗಳನ್ನು ವಿಡಂಬನಾತ್ಮಕವಾಗಿ ಚಿತ್ರಿಸಿರುವ ಮನೀಶ್ ಗುಪ್ತಾ ಭಾರತದ ಮಹಿಳೆಯರು ಎದುರಿಸುತ್ತಿರವ ಸಮಸ್ಯೆಗಳನ್ನು ಎರಡೂವರೆ ನಿಮಿಷದ ವಿಡಿಯೋದಲ್ಲಿ ಬಿಚ್ಚಿಟ್ಟಿದ್ದು ಯೂಟ್ಯೂಬ್ ನಲ್ಲಿ ಹರಿದಾಡುತ್ತಿದೆ.[ವಿಡಿಯೋ ವಿಡಂಬನೆ : ಅತ್ಯಾಚಾರಕ್ಕೆ ಕಾರಣ ಯಾರು?}

ದೇಶಾದ್ಯಂತ ಪ್ರತಿದಿನ ಮಹಿಳೆಯರ ಮೇಲೆ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ವಿಡಿಯೋ ತಯಾರಿಸಲಾಗಿದೆ. ಇಲ್ಲಿ ಪ್ರತಿಯೊಂದು ಶಬ್ದಗಳು ವಿಡಂಬನಾತ್ಮಕವಾಗಿಯೇ ಇದ್ದು ವಿಡಿಯೋ ಇಡೀ ದೇಶದ ಚಿತ್ರಣವನ್ನು ಕಟ್ಟಿಕೊಡುತ್ತದೆ.

ಹೆದರಿಕೊಂಡೇ ಬಂದಿದ್ದೇನೆ

ಹೆದರಿಕೊಂಡೇ ಬಂದಿದ್ದೇನೆ

ಅನೇಕ ವರ್ಷದಿಂದ ನಿಮಗೆ ಹೆದರಿಕೊಂಡೆ ಬಂದಿದ್ದೇನೆ. ಶಾಲಾ ಕೋಣೆಯಲ್ಲಿ ರೇಪ್ ಮಾಡಿ, ಮಾರುಕಟ್ಟೆಯಲ್ಲಿ ರೇಪ್ ಮಾಡಿ ನನಗೇನು ತೊಂದರೆಯಲ್ಲ. ಅತಿ ಕಡಿಮೆ ಬಟ್ಟೆ ಧರಿಸಿರುವ ನಾನು ನಿಮ್ಮನ್ನು ಕರೆಯುತ್ತಿದ್ದೇನೆ. ಬನ್ನಿ ರೇಪ್ ಮಾಡಿ ಎಂದು ಯುವತಿಯೊಬ್ಬಳು ಕರೆಯುತ್ತಾಳೆ.

ತಾಯಿಯದೇ ತಪ್ಪು!

ತಾಯಿಯದೇ ತಪ್ಪು!

ನಿಮ್ಮ ತಾಯಿ ಮನೆಗೆಲಸ ಮಾಡುತ್ತಿರುತ್ತಿರುವ ಸಂರರ್ಭ ಆಕೆಯ ಸೆರಗು ಜಾರುತ್ತದೆ. ಅದನ್ನು ಪಕ್ಕದ ಮನೆಯವನು ನೋಡುತ್ತಾನೆ. ನಿಮಗೆ ಪಕ್ಕದ ಮನೆಯಾತನ ಮೇಲೆ ಸಿಟ್ಟು ಬರುವುದಿಲ್ಲ. ನಿಮ್ಮ ತಾಯಿಯನ್ನು ಬೈದುಕೊಳ್ಳುತ್ತೀರಿ.

ಸಮಾಜ ಸೇವೆಗೆ ಯಾಕೆ ಹಿಂಜರಿತ?

ಸಮಾಜ ಸೇವೆಗೆ ಯಾಕೆ ಹಿಂಜರಿತ?

ನಿಮ್ಮ ಟ್ಯಾಕ್ಸಿಯಲ್ಲಿ ಕುಳಿತಿದ್ದೇನೆ. ನಿನ್ನ ಬಳೀ ಸಂಗೀತ ಕಲಿಯಲೂ ಬಂದಿದ್ದೇನೆ, ಆಶ್ರಮಕ್ಕೆ ತಾಯಿ ಜತೆ ಆಗಮಿಸಿದ್ದೇನೆ, ನನ್ನನ್ನು ಮಾತ್ರ ಅಲ್ಲ ನನ್ನ ತಾಯಿಯನ್ನು ರೇಪ್ ಮಾಡಿ. ಭಾರತ ಮಾತೆಯ 'ಪುತ್ರರೇ' ಇದೊಂದು ಸಣ್ಣ ಸಮಾಜ ಸೇವೆ ಮಾಡಲು ಯಾಕೆ ಹಿಂಜರಿಯುತ್ತಿದ್ದೀರಿ ಬೇಗ ಬನ್ನಿ ನನ್ನನ್ನು ರೇಪ್ ಮಾಡಿ....

ಅತ್ಯಾಚಾರಿಗಳ ವಿಡಂಬನೆ

ಅತ್ಯಾಚಾರಿಗಳ ವಿಡಂಬನೆ

ಅಪ್ರಾಪ್ತ ಹುಡುಗಿಯರೇ ಅತ್ಯಾಚಾರಿಗಳ ಕೃತ್ಯಕ್ಕೆ ಬಲಿಯಾಗುತ್ತಿದ್ದಾರೆ. ದೇಶದಲ್ಲಿ ನಡೆಯುವ ಶೇ.90 ರೇಪ್ ಗಳು ಬೆಳಕಿಗೆ ಬರುವುದಿಲ್ಲ ಎಂಬ ಅನೇಕ ಅಂಶಗಳನ್ನು ವಿಡಿಯೋ ಪ್ರತಿಬಿಂಬಿಸುತ್ತದೆ.

ವಿಡಿಯೋ ನೋಡಿ

ಜನ ಜಾಗೃತಿ, ಕಾನೂನುಗಳ ಮೂಲಕ ಮಾಡಲು ಸಾಧ್ಯವಾಗದ್ದನ್ನು ಈಗ ಇಂಥ ವಿಡಂಬನಾತ್ಮಕ ವಿಡಿಯೋಗಳ ಮೂಲಕ ಮಾಡಲು ಕೆಲವರು ಮುಂದಾಗಿದ್ದಾರೆ. ಸಾಮಾಜಿಕ ಜಾಲತಾಣ ಮತ್ತು ಯೂಟ್ಯೂಬ್ ನಲ್ಲಿ ಭರ್ಜರಿ ಯಶಸ್ಸು ಸಿಕ್ಕಿದೆ.

English summary
A satirical video posted on Youtube in which a girl named Madhuri Desai is inviting men to rape her has gone viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X