ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನವರಿ ಅಂತ್ಯಕ್ಕೆ ಭಾರತ-ಪಾಕ್ ಶಾಂತಿ ಮಾತುಕತೆ?

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಜನವರಿ 18 : ಭಾರತ ಮತ್ತು ಪಾಕಿಸ್ತಾನ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಮಾತುಕತೆ ಜನವರಿ ಅಂತ್ಯಕ್ಕೆ ನಡೆಯಲಿದೆ. ಮಾತುಕತೆ ಆರಂಭಕ್ಕೂ ಮುನ್ನ ಪಠಾಣ್ ಕೋಟ್ ದಾಳಿಯ ಸಂಚು ರೂಪಿಸಿದವರ ವಿರುದ್ಧ ಕೈಗೊಂಡ ಕ್ರಮಗಳ ದಾಖಲೆ ನೀಡುವಂತೆ ಭಾರತ ಪಾಕ್‌ಗೆ ಸೂಚಿಸಿದೆ.

ಜನವರಿ 15ರಂದು ನಿಗದಿಯಾಗಿದ್ದ ವಿದೇಶಾಂಗ ಕಾರ್ಯದರ್ಶಿಗಳ ನಡುವಿನ ಮಾತುಕತೆಯನ್ನು ಪಠಾಣ್ ಕೋಟ್ ವಾಯುನೆಲೆ ಮೇಲಿನ ದಾಳಿಯ ನಂತರ ಮುಂದೂಡಲಾಗಿದೆ. ಮಾತುಕತೆಗೆ ಭಾರತ ಸಿದ್ಧವಿದೆ. ಆದರೆ, ಪಾಕ್ ದಾಳಿಯ ಸಂಚು ರೂಪಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಈಗಾಗಲೇ ಸ್ಪಷ್ಟ ಸಂದೇಶ ರವಾನಿಸಲಾಗಿದೆ. [ಪ್ರಧಾನಿ ಕಚೇರಿಯಿಂದ ಪಾಕಿಸ್ತಾನಕ್ಕೆ ಪತ್ರ]

pakistan

ಪಾಕ್ ಜೊತೆ ಶಾಂತಿ ಮಾತುಕತೆ ಮುಂದುವರೆಸುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ವಾಯುನೆಲೆ ಮೇಲಿನ ದಾಳಿಯ ಸಂಚು ರೂಪಿಸಿದವರ ವಿರುದ್ಧ ಪಾಕ್ ನಡೆಸುತ್ತಿರುವ ತನಿಖೆಯ ಬಗ್ಗೆ ಪ್ರಗತಿ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿರುವಂತೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೋವಲ್ ಅವರಿಗೆ ಸೂಚನೆ ನೀಡಿದ್ದಾರೆ. ["ಭಾರತದ ಸೇನೆ ವೈರಿಗಳ ಸದೆ ಬಡಿಯಲು ಸಿದ್ಧ"]

ದಾಖಲೆಗಳನ್ನು ಕೊಡಿ : ವಾಯುನೆಲೆ ಮೇಲೆ ದಾಳಿ ಮಾಡಿರುವವರ ವಿರುದ್ಧ ಕ್ರಮ ಕೈಗೊಂಡ ಬಗ್ಗೆ ಮಾಧ್ಯಮಗಳಲ್ಲಿ ಬಂದ ವರದಿಗಳು ಬೇಡ. ನಮಗೆ ಅಗತ್ಯ ದಾಖಲೆಗಳನ್ನು ನೀಡಿ ಎಂದು ಭಾರತ ಪಾಕ್‌ ಮುಂದೆ ಬೇಡಿಕೆ ಇಟ್ಟಿದೆ. [ಪಾಕಿಸ್ತಾನ ಜೊತೆಗೆ ಶಾಂತಿ ಮಾತುಕತೆ ನಡೆಯಲಿದೆಯೇ?]

ಪಠಾಣ್ ಕೋಟ್ ದಾಳಿಯ ಸಂಚು ರೂಪಿಸಿದವರ ವಿರುದ್ಧ ದಾಖಲಾದ ಚಾರ್ಜ್ ಶೀಟ್‌ ನೀಡುವಂತೆ ಭಾರತ ಬೇಡಿಕೆ ಇಟ್ಟಿದೆ. ಅವರ ವಿರುದ್ಧ ಹೊರಿಸಿರುವ ಆರೋಪಗಳ ಕುರಿತು ಭಾರತ ಮಾಹಿತಿ ಕೇಳಿದೆ. ಪಾಕ್‌ನಿಂದ ಬರುವ ತನಿಖಾ ವರದಿ ಆಧರಿಸಿ ಮುಂದಿನ ನಿರ್ಧಾರಗಳನ್ನು ಭಾರತ ಕೈಗೊಳ್ಳಲಿದೆ.

English summary
The foreign secretary level talks between India and Pakistan which were postponed following the Pathankot attack is likely to be held in the last week of January or early February 2016.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X