ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧ್ಯಪ್ರದೇಶದಲ್ಲಿ ರೈತರ ಆಕ್ರೋಶ ಭುಗಿಲೆದ್ದಿರುವುದೇಕೆ?

|
Google Oneindia Kannada News

ಮಂಡಸೌರ್ (ಮಧ್ಯಪ್ರದೇಶ), ಜೂನ್ 7: ಮಧ್ಯಪ್ರದೇಶದ ಮಂಡಸೌರ್ ಎಂಬಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ ಪರಿಣಾಮ ಐವರು ಮೃತಪಟ್ಟ ಘಟನೆ ಕೇಳಿ ಒಮ್ಮೆ ಹೃದಯ ಕಸಿವಿಸಿಗೊಂಡಿರಬಹುದು.

ಅನ್ನದಾತೋ ಸುಖೀಭವ ಎನ್ನುವ ನಮ್ಮ ದೇಶದಲ್ಲಿ, ಅನ್ನ ನೀಡುವ ರೈತನನ್ನೇ ಗುಂಡಿಕ್ಕಿ ಕೊಲ್ಲುವುದು ಎಂದರೆ ಅತ್ಯಂತ ಅಮಾನವೀಯವೇ ಸರಿ. ದೇಶದ ಬೆನ್ನೆಲುಬು ಎಂದೇ ಕರೆಸಿಕೊಳ್ಳುವ ರೈತರ ಸಮಸ್ಯೆಗಳಿಗೆ ಕಿವಿಯಾಗಿ, ಅದರ ಪರಿಹಾರಕ್ಕೆ ಸನ್ನದ್ಧವಾಗಬೇಕಾದ ಸರ್ಕಾರವೇ ಅವರ ಸಾವಿಗೆ ಕಾರಣವಾದರೆ ಅದು ನಿಜಕ್ಕೂ ಶೋಚನೀಯ ಸಂಗತಿ.[ಮಧ್ಯಪ್ರದೇಶದಲ್ಲಿ ರೈತರ ಮೇಲೆ ಗೋಲಿಬಾರ್, ಸಾವಿನ ಸಂಖ್ಯೆ 5ಕ್ಕೆ ಏರಿಕೆ]

ಭೂಪಾಲ್ ನಿಂದ 325 ಕಿ.ಮೀ.ದೂರದಲ್ಲಿರುವ ಮಂಡಸೌರ್ ನಲ್ಲಿ ಇದ್ದಕ್ಕಿದ್ದಂತೆಯೇ ಹೋರಾಟದ ಕಿಚ್ಚು ಹತ್ತಿಕೊಂಡಿತ್ತು. ಜೂನ್ 1 ರಿಂದಲೇ ಆರಂಭವಾಗಿರುವ ಈ ಹೋರಾಟ ದಿನೇ ದಿನೇ ಉಗ್ರರೂಪ ತಾಳುತ್ತಿದೆಯೇ ವಿನಃ, ತಹಬಂದಿಗೆ ಬರುವ ಲಕ್ಷಣಗಳು ಮಾತ್ರ ಗೋಚರವಾಗುತ್ತಿಲ್ಲ.

ಅಷ್ಟಕ್ಕೂ ಮಧ್ಯಪ್ರದೇಶದಲ್ಲಿ ರೈತರ ಆಕ್ರೋಶ ಭುಗಿಲೆದ್ದಿದ್ದೇಕೆ? ನೇಗಿಲ ಯೋಗಿ ಇದ್ದಕ್ಕಿದ್ದಂತೆ ಬೀದಿಗಳಿದು ಹೋರಾಟಕ್ಕಿಳಿಯುವುದಕ್ಕೆ ಕಾರಣವೇನು? ಸಾತ್ವಿಕ ಹೋರಾಟ ಹಿಂಸೆಯ ರೂಪ ಪಡೆದು, ಕೊನೆಗೆ ಐವರು ಅಮಾಯಕ ರೈತರ ಸಾವಿಗೆ ಕಾರಣವಾಗಿದ್ದೇಕೆ? ಅನ್ನದಾತನ ಹೋರಾಟಕ್ಕೆ ಸರ್ಕಾರ ಏನೆನ್ನುತ್ತದೆ? ಇಲ್ಲಿದೆ ಮಾಹಿತಿ.[ನಾನು ಸಾಲ ಮನ್ನಾ ಮಾಡುತ್ತೇನೆಂದು ಎಲ್ಲಿಯೂ ಹೇಳಿಲ್ಲ- ಸಿದ್ಧರಾಮಯ್ಯ]

ಹೋರಾಟ ಏಕೆ ?

ಹೋರಾಟ ಏಕೆ ?

[ಅನ್ನದಾತನ ಕೈಹಿಡಿದಿರುವ ಮಹತ್ವಾಕಾಂಕ್ಷಿ ಯೋಜನೆಗಳು][ಅನ್ನದಾತನ ಕೈಹಿಡಿದಿರುವ ಮಹತ್ವಾಕಾಂಕ್ಷಿ ಯೋಜನೆಗಳು]

ಬೆಂಬಲ ಹಿಂಪಡೆದ ಬಿಕೆಎಸ್

ಬೆಂಬಲ ಹಿಂಪಡೆದ ಬಿಕೆಎಸ್

[ಸಾಲಾ ಮನ್ನಾಕ್ಕೆ ಆಗ್ರಹಿಸಿ ದೆಹಲಿಯಲ್ಲಿ ರಾಜ್ಯ ರೈತರಿಂದ ಪ್ರತಿಭಟನೆ][ಸಾಲಾ ಮನ್ನಾಕ್ಕೆ ಆಗ್ರಹಿಸಿ ದೆಹಲಿಯಲ್ಲಿ ರಾಜ್ಯ ರೈತರಿಂದ ಪ್ರತಿಭಟನೆ]

ಎಗ್ಗಿಲ್ಲದೆ ನಡೆಯುತ್ತಿದೆ ರೈತರ ಆತ್ಮಹತ್ಯೆ

ಎಗ್ಗಿಲ್ಲದೆ ನಡೆಯುತ್ತಿದೆ ರೈತರ ಆತ್ಮಹತ್ಯೆ

ಮಧ್ಯಪ್ರದೇಶದಲ್ಲಿ ಕಳೆದ 16 ವರ್ಷಗಳಲ್ಲಿ 21000 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬುದು ಸಮೀಕ್ಷೆಯೊಂದರ ವರದಿ. ಹಾಗೆಯೇ 2016-17 ನೇ ಸಾಲಿನಲ್ಲಿ ಆತ್ಮಹತ್ಯೆಗೆ ಶರಣಾದ ರೈತರ ಸಂಖ್ಯೆ ಬರೋಬ್ಬರಿ 1982. ಇಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ರೈತರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ಕೂಗೂ ಕೇಳಿಬರುತ್ತಿದೆ.

ಮುಖ್ಯಮಂತ್ರಿ ಏನಂತಾರೆ?

ಮುಖ್ಯಮಂತ್ರಿ ಏನಂತಾರೆ?

ರೈತರ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಸದಾ ಸಿದ್ಧವಿದೆ. ರೈತರ ಹಲವು ಬೇಡಿಕೆಗಳನ್ನು ಈಡೇರಿಸುವಲ್ಲಿಯೂ ಸರ್ಕಾರ ಬದ್ಧವಾಗಿದೆ. ನಮ್ಮದು ಎಂದಿಗೂ ರೈತ ಪರ ಸರ್ಕಾರ. ರೈತರ ಹೋರಾಟ ಹಿಂಸೆಯ ರೂಪ ತಾಳಿರುವಲ್ಲಿ ವಿರೋಧ ಪಕ್ಷದ ಕೈವಾಡವಿದೆ ಎಂಬುದು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ನುಡಿ.

ಮುಂದುವರಿದ ಗಲಭೆ

ಮುಂದುವರಿದ ಗಲಭೆ

ಶಾಂತ ರೀತಿಯಲ್ಲಿ ಸಾಗುತ್ತಿದ್ದ ರೈತರ ಹೋರಾಟ ಇದ್ದಕ್ಕಿದ್ದಂತೆಯೇ ಹಿಂಸೆಯ ರೂಪ ತಾಳಿದ ಹಿನ್ನೆಲೆಯಲ್ಲಿ ಪೊಲೀಸರು ಗುಂಡಿನ ದಾಳಿ ನಡೆಸಬೇಕಾಯಿತು. ಇದರಿಂದಾಗಿ ಇದುವರೆಗೂ ಐವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಹಲವೆಡೆ ಕರ್ಫೂ ಸಹ ಜಾರಿಗೊಳಿಸಲಾಗಿದೆ.

English summary
On Tuesday 5 farmers were killed in police firing at Mandasaur in Madhya Pradesh. The protests turned violent as a result of which the police opened fire. There were horrific scenes reported from Mandasaur which is around 325 kilometres away from the capital, Bhopal. Here are the resons for the protest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X