ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರವಿಶಂಕರ್ ಗುರೂಜಿ, ರಾಮದೇವ್ ಪದ್ಮ ಪ್ರಶಸ್ತಿ ಒಲ್ಲೆ ಎಂದಿದ್ದೇಕೆ?

By Mahesh
|
Google Oneindia Kannada News

ನವದೆಹಲಿ, ಜ.25: ಯೋಗಗುರು ರಾಮ್‌ದೇವ್ ಮತ್ತು ರವಿಶಂಕರ್ ಗುರೂಜಿಗೆ 'ಪದ್ಮ' ಪ್ರಶಸ್ತಿ ಬೇಡ ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿರುವ ಸುದ್ದಿ ಎಲ್ಲರಿಗೂ ತಿಳಿದಿದೆ. ಸರ್ಕಾರ ಪ್ರಶಸ್ತಿ ವಿಜೇತ ಪಟ್ಟಿ ಅಧಿಕೃತವಾಗಿ ಹೊರ ಬೀಳುವ ಮುನ್ನವೇ ಸುದ್ದಿ ಸೋರಿಕೆಯಾಗಿ ಗೊಂದಲ ಮೂಡಿಸಿತ್ತು. ಬಾಬಾ ರಾಮದೇವ್ ಅವರಿಗೆ ಪ್ರಶಸ್ತಿ ಏಕೆ ಎಂಬ ಮಾತುಗಳು ಕೇಳಿ ಬಂದಿತ್ತು.

'ನಾನೊಬ್ಬ ವಿರಾಗಿಯಾಗಿರುವ ಕಾರಣ ಅಂತಹ ಯಾವುದೇ ಗೌರವ, ಪ್ರಶಸ್ತಿಯನ್ನು ಪಡೆಯಲು ಇಚ್ಛಿಸುವುದಿಲ್ಲ.' ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಬಾಬಾ ರಾಮದೇವ್ ಅವರು ಪತ್ರ ಬರೆದಿದ್ದಾರೆ. [ಪದ್ಮ ಪ್ರಶಸ್ತಿಗಳ ಪಟ್ಟಿಗೆ ಇನ್ನಷ್ಟು ಹೆಸರು]

Why Ramdev, Sri Sri Ravi Shankar decline Padma award

ರವಿಶಂಕರ್‌ ಗುರೂಜಿ ಶನಿವಾರ ಟ್ವೀಟ್‌ ಮಾಡಿ, ನನ್ನನ್ನು ಪದ್ಮಭೂಷಣ ಪ್ರಶಸ್ತಿಗೆ ಆಯ್ಕೆ ಮಾಡಿರುವ ವಿಷಯ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಂದ ತಿಳಿಯಿತು. ಸರ್ಕಾರ ನೀಡುತ್ತಿರುವ ಗೌರವಕ್ಕೆ ನಾವು ತಲೆ ಬಾಗುತ್ತೇವೆ. ಅದರೆ, ನನಗಿಂತ ಅರ್ಹರಾದ ಅನೇಕ ಜನ ನಮ್ಮ ದೇಶದಲ್ಲಿದ್ದಾರೆ. ನನ್ನ ಬದಲು ಬೇರೊಬ್ಬರಿಗೆ ಪುರಸ್ಕಾರ ಲಭಿಸಲಿದೆ ಎಂದಿದ್ದಾರೆ. [ಎಸ್.ಎಲ್ ಭೈರಪ್ಪ, ಶ್ರೀ ಶ್ರೀ ರವಿಶಂಕರ್ ಗೆ ಪದ್ಮ ಪ್ರಶಸ್ತಿ?]

ನಾನು ಬೇರೆ ಪ್ರಶಸ್ತಿಗಳನ್ನು ಏಕೆ ತಿರಸ್ಕರಿಸಿಲ್ಲ. ದೇಶದ ಗೌರವ ಪಡೆಯಲು ಇಷ್ಟವಿಲ್ಲವೇ ಎಂಬ ಪ್ರಶ್ನೆಗಳು ಕೇಳಿ ಬರುತ್ತಿವೆ. ಪದ್ಮಪ್ರಶಸ್ತಿ ಸ್ವೀಕಾರಕ್ಕೆ ಅರ್ಹತೆಯ ಪ್ರಶ್ನೆ ಎದುರಾದಾಗ ನನಗಿಂತ ಅರ್ಹರು ನಮ್ಮ ದೇಶದಲ್ಲಿದ್ದಾರೆ ಎಂದು ರಾಜನಾಥ್ ಸಿಂಗ್ ಅವರಿಗೆ ತಿಳಿಸಿದ್ದೇನೆ ಎಂದ ರವಿಶಂಕರ್ ಗುರೂಜಿ.

ಅಮರನಾಥ್ ಯಾತ್ರೆ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲು ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ತೆರಳಿರುವ ರವಿಶಂಕರ್ ಗುರೂಜಿ


ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಅಂಕಿತ ಪಡೆದುಕೊಂಡು ಎನ್ ಡಿಎ ಸರ್ಕಾರ ಪದ್ಮ ಪ್ರಶಸ್ತಿ, ಪುರಸ್ಕಾರಕ್ಕೆ ಆಯ್ಕೆಯಾದವರ ಅಧಿಕೃತ ಪಟ್ಟಿಯನ್ನು ಭಾನುವಾರ ಸಂಜೆ ಪ್ರಕಟಿಸುವ ಸಾಧ್ಯತೆಯಿದೆ. ಜ.26ರ ಗಣರಾಜ್ಯೋತ್ಸವ ಸಮಾರಂಭದಲ್ಲಿ ಈ ಪ್ರತಿಷ್ಠಿತ ಗೌರವವನ್ನು ಸಾಧಕರಿಗೆ ನೀಡಲಾಗುತ್ತದೆ.[ವಾಜಪೇಯಿ, ಮಾಳವೀಯರಿಗೆ 'ಭಾರತರತ್ನ']

English summary
Yoga guru Ramdev and spiritual leader Sri Sri Ravi Shankar have declined any Padma award for them reportedly being considered by central government on the occasion of the 66th Republic Day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X