ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇರಾಕಿ ಉಗ್ರರ ಕಣ್ಣು ದಕ್ಷಿಣ ಭಾರತದ ಮೇಲೆ ಏಕಿದೆ?

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ನ.28: ಇರಾಕಿ ಉಗ್ರ ಸಂಘಟನೆ ಐಎಸ್ಐಎಸ್ ಕಣ್ಣು ದಕ್ಷಿಣ ಭಾರತದ ಮೇಲೆ ಬಿದ್ದಿದೆ ಎಂದು ಕೇಂದ್ರ ಗೃಹ ಇಲಾಖೆ ರಾಜ್ಯ ಸಚಿವ ಕಿರಣ್ ರಿಜಿಜು ಅವರೇ ಖಚಿತಪಡಿಸಿದ್ದಾರೆ. ಇಷ್ಟಕ್ಕೂ ದಕ್ಷಿಣ ಭಾರವನ್ನು ಉಗ್ರರು ಟಾರ್ಗೆಟ್ ಮಾಡಿಕೊಂಡಿರುವುದೇಕೆ?

ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ಕೇರಳ, ತೆಲಂಗಾಣ, ಆಂಧ್ರ ಪ್ರದೇಶ, ತಮಿಳುನಾಡು ರಾಜ್ಯಗಳಲ್ಲಿ ಮುಸ್ಲಿಂ ಯುವಕರನ್ನು ಸಂಘಟನೆಯತ್ತ ಸೆಳೆಯುವಲ್ಲಿ ಐಸಿಸ್ ತಕ್ಕಮಟ್ಟಿನ ಪ್ರಯತ್ನ ಮಾಡಿದೆ. [ಉಗ್ರರಿಗೆ ತಿರುಗೇಟು, ಕರ್ನಾಟಕ ಮಸೀದಿಗಳು ಗ್ರೇಟು]

ಹೀಗಾಗಿ, ಸ್ಥಳೀಯ ಮೂಲಭೂತವಾದಿ ಸಂಘಟನೆಗಳಾದ ಸಿಮಿ, ಇಂಡಿಯನ್ ಮುಜಾಹೀದ್ದೀನ್ ನಂತರ ಈಗ ಐಎಸ್ ಐಎಸ್ ಭೀತಿ ಎದುರಾಗಿದೆ. ಅದರೆ, ಈ ಬಗ್ಗೆ ರಾಜ್ಯಗಳು ಕೇಂದ್ರಕ್ಕೆ ಸರಿಯಾದ ಸಹಕಾರ ನೀಡುತ್ತಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ.

ಇಸ್ಲಾಮಿಕ್ ಉಗ್ರರು ದೇಶದಲ್ಲಿ ಯಾವುದೇ ವೇಳೆ ದಾಳಿ ನಡೆಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಸರ್ಕಾರ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲ ರೀತಿಯ ಕ್ರಮ ಕೈಗೊಂಡಿದೆ. [ಐಎಸ್‌ಐಎಸ್‌ ಸೇರೋದ್ರಲ್ಲಿ ಕರ್ನಾಟಕದವರೇ ಫಸ್ಟ್!]

2008ರ ಮುಂಬೈ ದಾಳಿ ಬಳಿಕ ದೇಶದ ಎಲ್ಲ ಪ್ರಮುಖ ಸ್ಥಳಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಪ್ರಮುಖ ಕಟ್ಟಡಗಳು, ಧಾರ್ಮಿಕ ಶ್ರದ್ಧಾ ಕೇಂದ್ರಗಳು, ವಿಮಾನ ನಿಲ್ದಾಣ, ರಾಯಭಾರಿ ಕಚೇರಿ ಮತ್ತಿತರ ಕಡೆ ಭದ್ರತೆ ಹೆಚ್ಚಿಸಲಾಗಿದೆ ಎಂದು ಸಚಿವ ಕಿರಣ್ ಹೇಳಿದ್ದಾರೆ.

ಕರ್ನಾಟಕದ ಭಟ್ಕಳ ಮೇಲೆ ಎಲ್ಲರ ಕಣ್ಣು

ಕರ್ನಾಟಕದ ಭಟ್ಕಳ ಮೇಲೆ ಎಲ್ಲರ ಕಣ್ಣು

ಕಳೆದ ಎರಡು ದಶಕಗಳಲ್ಲಿ ಕೋಮು ಗಲಭೆಯ ಹೆಸರು ಕೇಳಿ ತಿಳಿಯದ ಭಟ್ಕಳ ಈಗ ಉಗ್ರರ ಅಡಗುತಾಣ ಎಂಬಂತೆ ಕಾಣಲಾಗುತ್ತಿದೆ. ಇಂಡಿಯನ್ ಮುಜಾಹಿದ್ದೀನ್ ಸ್ಥಾಪಕರಲ್ಲಿ ಪ್ರಮುಖ ಇದೇ ಪ್ರದೇಶದವರಾಗಿರುವುದು ಇದಕ್ಕೆ ಕಾರಣ. ಇದರ ಜೊತೆಗೆ ಐಎಸ್ ಐಎಸ್ ನೇಮಕಾತ್ ವಿಂಗ್ ನ ಮುಖ್ಯಸ್ಥ ಅನ್ಸರ್ ಅಲ್ ತಾವ್ಹಿದ್ ಕೂಡಾ ಭಟ್ಕಳ ಮೂಲದವನಾಗಿದ್ದಾನೆ.

ಹೆಚ್ಚುತ್ತಿರುವ ಕೋಮುಗಲಭೆಯಿಂದ ಉಂಟಾಗುವ ವಿಷಯ ಪರಿಸ್ಥಿತಿಯ ಲಾಭವನ್ನು ಉಗ್ರ ಸಂಘಟನೆಗಳು ಪಡೆದುಕೊಳ್ಳುತ್ತಿವೆ. ಕೇರಳದ ಪಕ್ಕದಲ್ಲೇ ಈ ಪ್ರದೇಶವಿರುವುದರಿಂದ ಉಗ್ರರ ಚಟುವಟಿಕೆಗಳಿಗೆ ಹೆಚ್ಚಿನ ಬಲ ಸಿಕ್ಕಿದೆ.

ತೆಲಂಗಾಣ ಹಾಗೂ ಹೈದರಾಬಾದ್

ತೆಲಂಗಾಣ ಹಾಗೂ ಹೈದರಾಬಾದ್

ತೆಲಂಗಾಣ ಹಾಗೂ ಹೈದರಾಬಾದಿನ ಕೋಮು ಗಲಭೆ, ಅಂತರಾಜ್ಯ ಗಲಭೆ, ಮುಷ್ಕರಗಳ ಲಾಭವನ್ನು ಹರ್ತಕ್ ಉಲ್ ಜಿಹಾದಿ ಇಸ್ಲಾಮಿ ಪಡೆದುಕೊಳ್ಳುತ್ತಿದೆ. ಪೊಲೀಸರ ತನಿಖೆ ವಿಳಂಬದ ಲಾಭದಿಂದ ಈ ಭಾಗದಿಂದ ಯುವಕರನ್ನು ಸೆಳೆಯುವಲ್ಲಿ ಉಗ್ರ ಸಂಘಟನೆಗಳು ಯಶಸ್ವಿಯಾಗುತ್ತಿವೆ. ಐಎಸ್ ಐಎಸ್ ನೇಮಕಾತಿ ವಿಭಾಗ ಈ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ನೇಮಕಾತಿ ಮಾಡಿಕೊಳ್ಳುತ್ತಿದೆ. ಈ ಬಗ್ಗೆ ರಾಜ್ಯ ಸರ್ಕಾರದಿಂದ ಹೆಚ್ಚಿನ ತನಿಖೆಯಾಗಲಿ, ಕೇಂದ್ರಕ್ಕೆ ಮಾಹಿತಿಯಾಗಲಿ ಸರಿಯಾಗಿ ಸಿಗುತ್ತಿಲ್ಲ ಎಂದು ಗುಪ್ತಚರ ಇಲಾಖೆ ಹೇಳುತ್ತಿದೆ.

ತಮಿಳುನಾಡು ಭಾಗಶಃ ಸಮಸ್ಯೆಯ ಸುಳಿಯಲ್ಲಿದೆ

ತಮಿಳುನಾಡು ಭಾಗಶಃ ಸಮಸ್ಯೆಯ ಸುಳಿಯಲ್ಲಿದೆ

ತಮಿಳುನಾಡಿನಲ್ಲಿ ಸೇಲಂ ಹಾಗೂ ಮತ್ತಿತ್ತರ ಪ್ರದೇಶಗಳಲ್ಲಿ ಕೆಲವು ಸಂಘಟನೆಗಳು ಗಲಭೆ, ಅಶಾಂತಿ ಸೃಷ್ಟಿಸುವಲ್ಲಿ ನಿರತವಾಗಿರುವ ಸುದ್ದಿಯಿದೆ. ಅಲ್ ಉಮ್ಮಾ ಸಂಘಟನೆ ರಾಜಕೀಯ ಪ್ರೇರಿತ ಸಂಚು, ಹತ್ಯೆ, ಹಿಂದೂ ಸಂಘಟನೆ ಮುಖ್ಯಸ್ಥ ಕೊಲೆ, ಉಗ್ರ ಸಂಘಟನೆಗೆ ನೆರವಾಗುವುದು ಮುಂತಾದವುಗಳಲ್ಲಿ ನಿರತವಾಗಿದೆ. ಎಲ್ ಕೆ ಅಡ್ವಾಣಿ ರಥಯಾತ್ರೆ ಸಂದರ್ಭದಲ್ಲಿ ಬಾಂಬ್ ಸಿಡಿಸಿದ್ದು ಇದೇ ಅಲ್ ಉಮ್ಮಾ ಸಂಘಟನೆ. ಇದರ ಲಿಂಕ್ ಬೆಂಗಳೂರಿನ ಮಲ್ಲೇಶ್ವರದ ಬಿಜೆಪಿ ಕಚೇರಿ ಬಳಿ ಬಾಂಬ್ ಸ್ಫೋಟ ಪ್ರಕರಣದ ತನಕ ಇದೆ.ಎಲ್ ಟಿಟಿಐ ಶಕ್ತಿ ಗುಂದಿದ ಮೇಲೆ ಐಎಸ್ಐಎಸ್ ಪ್ರಭಾವ ಹೆಚ್ಚಾಗಲು ಶುರುವಾಗಿದೆ.

ಕೇರಳದಲ್ಲಿ ಹೆಚ್ಚಿನ ಉಗ್ರವಾದ

ಕೇರಳದಲ್ಲಿ ಹೆಚ್ಚಿನ ಉಗ್ರವಾದ

ಗುಪ್ತಚರ ಇಲಾಖೆ ವರದಿಯಂತೆ ಗಲ್ಫ್ ರಾಷ್ಟ್ರಗಳಲ್ಲಿರುವ ಕೇರಳಿಗರನ್ನು ಇರಾಕಿ ಉಗ್ರರು ಗುರಿಯನ್ನಾಗಿಸಿಕೊಂಡಿದ್ದಾರೆ. ಹವಾಲ ಹಣ ರವಾನೆಗೆ ಮೂಲವಾಗಿದೆ. ಮಲಬಾರ್ ಪ್ರಾಂತ್ಯದಲ್ಲಿ ಕೋಮು ಗಲಭೆ ಬೆಳೆಸಲು ಕೆಲ ಸಂಘಟನೆಗಳ ಜೊತೆ ಕೈಜೋಡಿಸಲಾಗಿದೆ. ಸೌದಿ ಅರೇಬಿಯಾದಿಂದ ಕೇರಳಕ್ಕೆ ಅಪಾರ ಪ್ರಮಾಣದಲ್ಲಿ ಹಣ ರವಾನೆಯಾಗುತ್ತಿದ್ದು ಉಗ್ರರ ಆರ್ಥಿಕ ನೆರವು ಹಾಗೂ ನೇಮಕಾತಿಗೆ ಕೇರಳ ಉತ್ತಮ ತಾಣವಾಗಿದೆ. ಈ ಬಗ್ಗೆ ಕೇಂದ್ರದಿಂದ ಎಚ್ಚರಿಕೆ ಇದ್ದರೂ ಸರಿಯಾದ ಕ್ರಮ ಅನುಸರಿಸಿಲ್ಲ.

English summary
The statements by union home minster for state, Kirren Rijiju that the ISIS is targetting South India and is looking for lone wolf attacks has been written about several times in the past.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X