ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಸ್ಟ್ರೀಟ್‌ ವ್ಯೂ'ಗೆ ಅನುಮತಿ, ಉಗ್ರರಿಗೆ ಮಾಹಿತಿ?

By Madhusoodhan
|
Google Oneindia Kannada News

ನವದೆಹಲಿ, ಜೂನ್ ,10: ಗೂಗಲ್ ನ 'ಸ್ಟ್ರೀಟ್‌ ವ್ಯೂ' ಸೇವೆಗೆ ಭಾರತದ ಗೃಹ ಸಚಿವಾಲಯ ಅಡ್ಡಗಾಲು ಹಾಕಿದೆ. ಭದ್ರತೆಯ ಕಾರಣ ನೀಡಿ ಅನುಮತಿ ನಿರಾಕರಿಸಿದ್ದು ಒಂದು ಲೆಕ್ಕದಲ್ಲಿ ಒಳ್ಳೆಯದೇ.

ಭಾರತದ ಗೃಹ ಸಚಿವಾಲಯ ಗೂಗಲ್ ಮನವಿಗೆ ಯಾಕೆ ಸ್ಪಂದಿಸಿಲ್ಲ ಎಂಬುದನ್ನು ಗಣನೆಗೆ ತೆಗೆದುಕೊಂಡಾಗ ಅನೇಕ ಅಂಶಗಳು ನಮ್ಮ ಮುಂದೆ ಎದುರಾಗುತ್ತವೆ.[ಚಿತ್ರಗಳು : ಗಲ್ಲಿಯಲ್ಲಿ ಕ್ರಿಕೆಟ್ ಆಡಿದ ಗೂಗಲ್ ಸಿಇಒ ಸುಂದರ್ ಪಿಚೈ]

26/11 ರ ಮುಂಬೈ ದಾಳಿ ಮತ್ತು ಪಠಾಣ್ ಕೋಟ್ ದಾಳಿಯನ್ನು ಗಮನದಲ್ಲಿಟ್ಟುಕೊಂಡೇ ಅನುಮತಿಯನ್ನು ನಿರಾಕರಣೆ ಮಾಡಲಾಗಿದೆ. ಗೂಗಲ್ ಮ್ಯಾಪ್ ನಲ್ಲಿ ಎಲ್ಲ ಚಿತ್ರಣಗಳನ್ನು ನೀಡಿದರೆ ಉಗ್ರಗಾಮಿಗಳಿಗೆ ನಾವೇ ಆಹ್ವಾನ ನೀಡಿದಂತೆ![ಮುಂಬೈ ದಾಳಿ ರೂವಾರಿ ಉಗ್ರ ಹೆಡ್ಲಿ ಬಾಯ್ಬಿಟ್ಟ ಸತ್ಯಗಳು]

ಪ್ರವಾಸೋದ್ಯಮ ಬೆಳವಣಿಗೆ ಎಂಬ ಕಾರಣಕ್ಕೆ ಅಪಾಯನ್ನು ಮೈ ಮೇಲೆ ಎಳೆದುಕೊಳ್ಳುವುದು ಬೇಡ ಎಂಬ ತೀರ್ಮಾನಕ್ಕೆ ಕೇಂದ್ರ ಸರ್ಕಾರ ಬಂದಂತಿದೆ. ಗೂಗಲ್ ನ 'ಸ್ಟ್ರೀಟ್‌ ವ್ಯೂ ' ಎಂದರೇನು? ಗೂಗಲ್ ಮ್ಯಾಪ್ ಗೂ ಇದಕ್ಕೂ ಏನು ವ್ಯತ್ಯಾಸ ಎಂಬುದನ್ನು ಮುಂದೆ ನೋಡಿ...

ಗೂಗಲ್ ಯಾಕೆ ಮನವಿ ಮಾಡಿತ್ತು

ಗೂಗಲ್ ಯಾಕೆ ಮನವಿ ಮಾಡಿತ್ತು

ಭಾರತದ ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ ಸ್ಟ್ರೀಟ್ ವ್ಯೂಗೆ ಅವಕಾಶ ಮಾಡಿಕೊಡಬೇಕು ಎಂದು ಗೂಗಲ್ ಮನವಿ ಮಾಡಿತ್ತು.

ಪಠಾಣ್ ಕೋಟ್ ತನಿಖೆ

ಪಠಾಣ್ ಕೋಟ್ ತನಿಖೆ

ಸೇನಾ ನೆಲೆಗಳ ಮೇಲೆ ಉಗ್ರರು ದಾಳಿ ಮಾಡುವ ಮುನ್ನ ಗೂಗಲ್ ಮ್ಯಾಪ್ ಬಳಸಿಕೊಂಡೆಯೇ ಮಾಹಿತಿ ಕಲೆ ಹಾಕಿದ್ದರು ಎಂಬ ಅಂಶ ತನಿಖೆ ವೇಳೆ ಗೊತ್ತಾಗಿರುವುದರಿಂದ ಗೃಹ ಸಚಿವಾಲಯ ಮನವಿಯನ್ನು ತಿರಸ್ಕಾರ ಮಾಡಿತು.

ಪ್ರವಾಸಿ ತಾಣಗಳ ಮೇಲೆ ದಾಳಿ

ಪ್ರವಾಸಿ ತಾಣಗಳ ಮೇಲೆ ದಾಳಿ

ಪ್ರವಾಸಿ ತಾಣಗಳನ್ನು ಚಿತ್ರಿಕರೀಸಿ ನೀಡಿದರೆ ಅಲ್ಲಿಗೆ ಭೇಟಿ ನೀಡುವವರ ಮೇಲೆ ಉಗ್ರರು ದಾಳಿ ನಡೆಸುವ ಸಂಭವ ಹೆಚ್ಚಿರುತ್ತದೆ. ಒಂದು ಕಡೆಯಿಂದ ಲಾಭ ಎಂದುಕೊಂಡರೆ ಮತ್ತೊಂದು ಕಡೆ ನಷ್ಟವಾಗುವ ಸಂಭವವೇ ಹೆಚ್ಚು.

ಮ್ಯಾಪ್ ಗೂ, ಸ್ಟ್ರೀಟ್‌ವ್ಯೂ ನಡುವಿನ ವ್ಯತ್ಯಾಸ

ಮ್ಯಾಪ್ ಗೂ, ಸ್ಟ್ರೀಟ್‌ವ್ಯೂ ನಡುವಿನ ವ್ಯತ್ಯಾಸ

ಗೂಗಲ್ ಮ್ಯಾಪ್ ಅಂದರೆ ಕೇವಲ ಮೇಲ್ಮೈ ಅಥವಾ ಹೊರ ಚಿತ್ರಣವನ್ನು ನೋಡಲು ಸಾಧ್ಯ. ಅದೇ ಸ್ಟ್ರೀಟ್‌ವ್ಯೂ ಗೆ ಅವಕಾಶ ನೀಡಿದರೆ 360 ಡಿಗ್ರಿ ಕೋನದಲ್ಲಿ ಪ್ರವಾಸಿ ಸ್ಥಳ, ನದಿ, ಪರ್ವತ, ನಗರಗಳ ವೀಕ್ಷಣೆ ಸಾಧ್ಯ. ಸೇರಿಸಿರುವ ತಾಣಗಳ ಸಂಪೂರ್ಣ ವಿವರವನ್ನು ನಿಖರವಾಗಿ ನೋಡಬಹುದು. ಇಲ್ಲಿ ತ್ರಿಡಿ ತಂತ್ರಜ್ಞಾನ ಬಳಸಿದ್ದು, ಒಂದು ಸ್ಥಳದಲ್ಲಿ ನಿಂತು ಎಲ್ಲ ಭಾಗಗಳನ್ನು ನೋಡಿದ ಅನುಭವ ದೊರೆಯುತ್ತದೆ.

ಡೇವಿಡ್ ಹೆಡ್ಲಿ ಕೊಟ್ಟ ಮ್ಯಾಪ್

ಡೇವಿಡ್ ಹೆಡ್ಲಿ ಕೊಟ್ಟ ಮ್ಯಾಪ್

2008ರಲ್ಲಿ ಮುಂಬೈ ಮೇಲೆ ನಡೆದ ದಾಳಿ ಮಾದರಿಯ ಭಯೋತ್ಪಾದಕ ದಾಳಿಗಳಿಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಭದ್ರತಾ ಸಂಸ್ಥೆಗಳು ಸರ್ಕಾರವನ್ನು ಎಚ್ಚರಿಸಿದ್ದವು. ಪಾಕಿಸ್ತಾನ ಮೂಲದ ಅಮೆರಿಕ ಉಗ್ರ ಡೇವಿಡ್‌ ಹೆಡ್ಲಿ ಒದಗಿಸಿದ್ದ ಛಾಯಾಚಿತ್ರಗಳ ನೆರವಿನಿಂದ ಉಗ್ರರು 2008 ರಲ್ಲಿ ಮುಂಬೈ ಮೇಲೆ ದಾಳಿ ನಡೆಸಿದ್ದರು ಎಂಬುದಕ್ಕೆ ದಾಖಲೆ ಲಭ್ಯವಾಗಿದೆ.

ಸೇವೆ ಜಾರಿಯಾಗಿತ್ತೆ?

ಸೇವೆ ಜಾರಿಯಾಗಿತ್ತೆ?

ಈ ಸೌಲಭ್ಯವನ್ನು ಪ್ರಾಯೋಗಿಕವಾಗಿ ಜಾರಿ ಮಾಡಲಾಗಿತ್ತು. ಆರಂಭದಲ್ಲಿ ಅಮೆರಿಕದ ನಗರಗಳನ್ನು ಇದರಲ್ಲಿ ಸೇರಿಸಿತ್ತು. ಆ ಬಳಿಕ ಈ ಸೇವೆಯನ್ನು ಇತರ ದೇಶಗಳಿಗೂ ವಿಸ್ತರಿಸಿತ್ತು. ಅಮೆರಿಕ, ಕೆನಡಾ ಮತ್ತು ಯೂರೋಪಿನ ಹಲವಾರು ದೇಶಗಳಲ್ಲಿ 'ಸ್ಟ್ರೀಟ್‌ವ್ಯೂ' ಈಗಲೂ ಜನಮನ್ನಣೆ ಗಳಿಸಿಕೊಂಡಿದೆ.

 ಭಾರತದಲ್ಲಿ ಎಲ್ಲಿ?

ಭಾರತದಲ್ಲಿ ಎಲ್ಲಿ?

2011 ರಲ್ಲಿ ಗೂಗಲ್‌ ಭಾರತದಲ್ಲೂ ಇದನ್ನು ಪ್ರಾಯೋಗಿಕವಾಗಿ ಪರಿಚಯಿಸಿ ಮೈಸೂರು ಅರಮನೆ, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ, ತಂಜಾವೂರು ದೇವಾಲಯ, ವಾರಾಣಸಿ ನದಿ ದಂಡೆ, ತಾಜ್‌ಮಹಲ್‌, ಕೆಂಪು ಕೋಟೆ ಮತ್ತು ಕುತುಬ್‌ ಮಿನಾರ್‌ ಗಳನ್ನು ಸೇರಿಸಲಾಗಿತ್ತು. ಈಗ ಗೂಗಲ್ ಮನವಿ ಮಾಡಿ ಹೆಚ್ಚಿನ ಪ್ರವಾಸಿ ತಾಣಗಳ ಸೇರ್ಪಡೆ ಬೇಡಿಕೆ ಮುಂದೆ ಇಟ್ಟಿತ್ತು.

English summary
India declined to give security clearance to Google's Street View. The Defence Ministry and the Intelligence Bureau objected to the proposal by Google which had planned on giving a 360 degree image of a place. It is very hard to regulate it said a Home Ministry official to OneIndia while also adding that the Defence Ministry too had raised concerns about this project.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X