ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್ ಭಯೋತ್ಪಾದಕ ರಾಷ್ಟ್ರ ಅಂತ ಘೋಷಿಸೋಕಾಗಲ್ಲ, ಏಕೆ?

ಹಲವಾರು ಅಂತಾರಾಷ್ಟ್ರೀಯ ಸಂಬಂಧಗಳು ಹಾಳಾಗುವ ಭೀತಿ ಹಾಗೂ ವಾಣಿಜ್ಯ ಪರಿಸ್ಥಿತಿಗಳ ಮೇಲೆ ಆಗುವ ಪರಿಣಾಮ, ಜಿನಿವಾ ಒಪ್ಪಂದಕ್ಕೆ ಸಹಿ ಹಾಕಿರುವುದು ಮುಂತಾದ ವಿಚಾರಗಳೇ ಭಾರತವನ್ನಿಂದು ಕಟ್ಟಿಹಾಕಿವೆ.

|
Google Oneindia Kannada News

ದಶಕಗಳೇ ಸಂದವೆ. ಪಾಕಿಸ್ತಾನದ ಪುಂಡಾಟಿಕೆಯನ್ನು ನೋಡಿ, ನೋಡಿ ಭಾರತೀಯರ ಮನಸ್ಸುಗಳು ಜರ್ಝರಿತಗೊಂಡಿವೆ. ಎಲ್ಲೆಡೆಯೂ ಆಕ್ರೋಶ ವ್ಯಕ್ತವಾಗುತ್ತಿದೆ.

ಈ ದೇಶದ ಸೈನಿಕರನ್ನು, ನಾಗರೀಕರನ್ನು ರಕ್ಷಿಸಲು ಭಾರತ ಸರ್ಕಾರಕ್ಕೆ ಸಾಧ್ಯವಿಲ್ಲವಾ? ಪ್ರತಿಯೊಂದು ಬಾರಿ ಉಗ್ರರ ದಾಳಿ ನಡೆದಾಗಲೂ ನಮ್ಮ ರಾಜಕೀಯ ನೇತಾರರ ದಿಟ್ಟ ಉತ್ತರ ಕೊಡುತ್ತೇವೆ ಅಂತ ಹೇಳುತ್ತಾರೆ ಹಾಗೂ ಹೇಳುತ್ತಲೇ ಇರುತ್ತಾರೆ. ಆದರೆ, ದಿಟ್ಟ ಉತ್ತರವನ್ನಂತೂ ಕೊಟ್ಟಿಲ್ಲ.

ಮುಳ್ಳನ್ನು ಮುಳ್ಳಿನಿಂದಲೇ ತಗೆಯಬೇಕು ಎಂಬಂತೆ ಭಾರತ ಸರ್ಕಾರ ಇತ್ತೀಚೆಗೆ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದೇನೋ ಸರಿ. ಆದರೆ, ಅದರಿಂದ ಪಾಪಿ ಪಾಕಿಸ್ತಾನ ಪಾಠ ಕಲಿತಿಲ್ಲ. ಇನ್ನೂ ಎಷ್ಟು ದಿನಗಳ ವರೆಗೆ ಭಾರತೀಯರ ರಕ್ತ ಕುದಿಯುತ್ತಲೇ ಇರಬೇಕು.

ಪಾಕಿಸ್ತಾನವನ್ನು ನಾವು ಭಯೋತ್ಪಾಕ ರಾಷ್ಟ್ರ ಎಂದು ಘೋಷಿಸಿ, ಅದನ್ನು ಸದೆಬಡಿಯುವ ತಂತ್ರಗಾರಿಕೆ ಅಳವಡಿಸಿಕೊಳ್ಳಲಾರೆವೇ ? ಪಾಕಿಸ್ತಾನದ ಹುಟ್ಟಡಗಿಸಲು ಸಾಧ್ಯವೇ ಇಲ್ಲವೇ? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ರಾಜೀವ್ ಚಂದ್ರ ಶೇಖರ್ ಅವರದ್ದೂ ಆಗ್ರಹವಿದೆ

ರಾಜೀವ್ ಚಂದ್ರ ಶೇಖರ್ ಅವರದ್ದೂ ಆಗ್ರಹವಿದೆ

ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರವೆಂದು ಘೋಷಿಸಬೇಕೆಂಬ ಕೇವಲ ಇಂದು ನೆನ್ನೆಯದ್ದಲ್ಲ. ಹಲವಾರು ವರ್ಷಗಳಿಂದ ಕೇಳಿಬರುತ್ತಿರುವ ಕೂಗು ಇದು. ಇತ್ತೀಚೆಗೆ, ಬಿಜೆಪಿ ಸಂಸದ ರಾಜೀವ್ ಚಂದ್ರಶೇಖರ್, ಸಂಸತ್ತಿನಲ್ಲಿ ಖಾಸಗಿ ಮಸೂದೆಯನ್ನು ಮಂಡಿಸಿ, ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರವೆಂದು ಘೋಷಿಸುವಂತೆ ಆಗ್ರಹಿಸಿದ್ದರು.

ಆದರೆ, ಮಸೂದೆಗೆ ಸರ್ಕಾರದ ನಕಾರ

ಆದರೆ, ಮಸೂದೆಗೆ ಸರ್ಕಾರದ ನಕಾರ

ಪಾಕಿಸ್ತಾನವನ್ನು ಕೇವಲ ಭಯೋತ್ಪಾದಕ ರಾಷ್ಟ್ರವೆಂದು ಘೋಷಿಸುವುದಷ್ಟೇ ಅಲ್ಲ, ಭಯೋತ್ಪಾದನೆಯನ್ನು ಬೆಂಬಲಿಸುವ ರಾಷ್ಟ್ರಗಳದ್ದೊಂದು ಪಟ್ಟಿ ಮಾಡಿ, ಭಾರತಕ್ಕೆ ಭೇಟಿ ನೀಡುವ ಆ ದೇಶಗಳ ನಾಗರಿಕರ ಮೇಲೆ ಆರ್ಥಿಕವಾಗಿ, ಕಾನೂನಾತ್ಮಕವಾಗಿ ಹಾಗೂ ಪ್ರವಾಸದ ದೃಷ್ಟಿಕೋನಗಳಲ್ಲಿ ಹಲವಾರು ನಿರ್ಬಂಧಗಳನ್ನು ಹೇರಬೇಕೆಂದೂ ರಾಜೀವ್ ಚಂದ್ರಶೇಖರ್ ಆಗ್ರಹಿಸಿದ್ದರು.
ಆದರೆ, ಭಾರತ ಸರ್ಕಾರ ಈ ಮಸೂದೆಯನ್ನು ತಿರಸ್ಕರಿಸಿತು. ಹಾಗಾಗಿ, ಚಂದ್ರಶೇಖರ್ ಅವರು ಆ ಮಸೂದೆ ಹಿಂಪಡೆದುಕೊಂಡರು.

ವಾಣಿಜ್ಯ ಕ್ಷೇತ್ರಕ್ಕೆ ಹೊಡೆತ

ವಾಣಿಜ್ಯ ಕ್ಷೇತ್ರಕ್ಕೆ ಹೊಡೆತ

ಭಾರತವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವಾರು ದೇಶಗಳೊಂದಿಗೆ ಮಧುರವಾದ ಸ್ನೇಹ ಸಂಬಂಧವನ್ನಿಟ್ಟುಕೊಂಡಿದೆ. ಈ ಸ್ನೇಹ ಸಂಬಂಧಗಳು ಭಾರತದ ವಾಣಿಜ್ಯ, ವ್ಯವಹಾರಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸರಾಗವಾಗಿ ಹಾಗೂ ಮಜಬೂತಾಗಿ ನಡೆಯುವಂತೆ ನೋಡಿಕೊಳ್ಳುತ್ತಿವೆ. ಹಾಗೊಮ್ಮೆ ಯಾವುದಾದರೊಂದು ರಾಷ್ಟ್ರವನ್ನು ಭಾರತವು ಭಯೋತ್ಪಾದಕ ರಾಷ್ಟ್ರವನ್ನಾಗಿ ಘೋಷಣೆ ಮಾಡಿತೆಂದರೆ, ಸಾಕು ಅದು ಈ ಮಧುರ ಮೈತ್ರಿಗೆ ಧಕ್ಕೆ ತರುವುದಲ್ಲದೆ, ಭಾರತದ ಆರ್ಥಿಕತೆಗೂ ದೊಡ್ಡ ಹೊಡೆತ ನೀಡುತ್ತದೆ.

ಕೈ ಕಟ್ಟಿ ಹಾಕಿರುವ ಒಪ್ಪಂದ

ಕೈ ಕಟ್ಟಿ ಹಾಕಿರುವ ಒಪ್ಪಂದ

ಪಾಕಿಸ್ತಾನದ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೊಡೆ ತಟ್ಟಲು ಭಾರತಕ್ಕೆ ಸಾಧ್ಯವಾಗದಿರಲು ಮುಖ್ಯವಾದ ಕಾರಣ 1949ರಲ್ಲಿ ಏರ್ಪಟ್ಟ ಜಿನಿವಾ ಒಪ್ಪಂದ. ಎರಡನೇ ಮಹಾಯುದ್ಧದ ನಂತರ ನಡೆದ ಈ ಒಪ್ಪಂದಕ್ಕೆ ಭಾರತ ಸೇರಿದಂತೆ 199 ರಾಷ್ಟ್ರಗಳು ಸಹಿ ಹಾಕಿವೆ. ಇದರಲ್ಲಿ, ಯುದ್ಧ ಮತ್ತಿತರ ಸಂದರ್ಭಗಳಲ್ಲಿ ಗಡಿ ಸಮಸ್ಯೆಗಳನ್ನು ಸೌಹಾರ್ದ ರೀತಿಯಲ್ಲಿ ಬಗೆಹರಿಸಿಕೊಳ್ಳುವುದು, ಯುದ್ಧ ಕೈದಿಗಳನ್ನು ಮಾನವೀಯ ದೃಷ್ಟಿಕೋನದಿಂದ ನೋಡಿಕೊಳ್ಳುವುದು ಸೇರಿದಂತೆ ಹಲವಾರು ಅಂಶಗಳಿವೆ. ಇದಕ್ಕೆ ಸಹಿ ಹಾಕಿರುವುದರಿಂದ ಭಾರತ ಆ ಒಪ್ಪಂದದಲ್ಲಿನ ಅಂಶಗಳಿಗೆ ಬದ್ಧವಾಗಿದೆ.

ಕೇಂದ್ರದಿಂದ ಸ್ಪಷ್ಟನೆ

ಕೇಂದ್ರದಿಂದ ಸ್ಪಷ್ಟನೆ

ಜಿನಿವಾ ಒಪ್ಪಂದಕ್ಕೆ ಸಹಿ ಹಾಕಿದ್ದೇವೆಂದ ಮಾತ್ರಕ್ಕೇ ಪಾಕಿಸ್ತಾನದ ಪುಂಡಾಟಿಕೆಯನ್ನೆಲ್ಲಾ ಸಹಿಸಿಕೊಳ್ಳಬೇಕೆಂದೇನಿಲ್ಲ ಎಂಬುದು ಭಾರತಕ್ಕೆ ಅರಿವಾಗಿದೆ. ಇದನ್ನೇ ರಾಜೀವ್ ಚಂದ್ರಶೇಖರ್ ಮಸೂದೆಯ ಬಗ್ಗೆ ಚರ್ಚೆಯಾದಾಗ ವಿದೇಶಾಂಗ ಇಲಾಖೆಯ ರಾಜ್ಯ ಸಚಿವರಾದ ಹನ್ಸ್ ರಾಜ್ ಗಂಗಾರಾಮ್ ಅವರು ವಿವರಣೆ ನೀಡಿದ್ದರು. ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರವೆಂದು ಘೋಷಿಸಿದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಲವಾರು ರಾಜತಾಂತ್ರಿಕ ಹಾಗೂ ವಾಣಿಜ್ಯ ಸಂಬಂಧಿ ಸಮಸ್ಯೆಗಳನ್ನು ಭಾರತ ಎದುರಿಸಬೇಕಾಗುತ್ತದೆ ನಿಜ. ಆದರೆ, ಹಾಗೆಂದು ಕೈಕಟ್ಟಿ ಕುಳಿತುಕೊಳ್ಳಲಾಗದು. ಕಾರ್ಗಿಲ್ ಯುದ್ಧದ ವೇಳೆ ಇದನ್ನಾಗಲೇ ನಾವು ಸಾಬೀತು ಮಾಡಿದ್ದೇವೆ. ಆದರೆ, ನೆರೆ ರಾಷ್ಟ್ರವನ್ನು ಶತ್ರುರಾಷ್ಟ್ರ, ಭಯೋತ್ಪಾದಕ ರಾಷ್ಟ್ರವೆಂದು ಘೋಷಿಸುವ ಮುನ್ನ ಈ ಬಗ್ಗೆ ಸಾಕಷ್ಟು ಅಧ್ಯಯನದ ಅಗತ್ಯವಿದೆ ಎಂದಿದ್ದರು.

English summary
The nation is outraged and questions are being asked why Pakistan cannot be declared a terror state. But, India's hands have been tied due various norms and pact those have been engulfed the Nation in a diplomatic way.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X