ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಪಿಯಲ್ಲಿ ಯಾರಿಗೆ ಒಲಿಯಲಿದೆ ಮುಖ್ಯಮಂತ್ರಿ ಪಟ್ಟ?

By Prasad
|
Google Oneindia Kannada News

ಲಕ್ನೋ, ಮಾರ್ಚ್ 11 : 2014ರ ಲೋಕಸಭೆ ಚುನಾವಣೆ ಸಮಯದಲ್ಲಿ ಉತ್ತರಪ್ರದೇಶದಲ್ಲಿ ಉಂಟಾಗಿದ್ದ ಪರಿಸ್ಥಿತಿಯೇ ವಿಧಾನಸಭೆ ಚುನಾವಣೆಯಲ್ಲಿಯೂ ಕಂಡುಬಂದಿದೆ. ಮೋದಿಯ ಸುನಾಮಿ ಹೊಡೆತಕ್ಕೆ ಸೈಕಲ್ ಪಂಚರ್ ಆಗಿದ್ದು, ಆನೆ ಮಕಾಡೆ ಮಲಗಿದೆ.

ನರೇಂದ್ರ ಮೋದಿಯ ಸುನಾಮಿ ಅಲೆ, ಅಮಿತ್ ಶಾ ಅವರ ಮಾಸ್ಟರ್ ಸ್ಟ್ರಾಟಜಿ, ಉಲ್ಟಾ ಹೊಡೆದ ರಾಹುಲ್-ಅಖಿಲೇಶ್ ಮೈತ್ರಿಯಿಂದಾಗಿ ಭಾರತೀಯ ಜನತಾ ಪಕ್ಷ ದಶಕಗಳ ನಂತರ ಉತ್ತರಪ್ರದೇಶದಲ್ಲಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವಂತಾಗಿದೆ. [ಯುಪಿ ಸಿಎಂ ಸ್ಥಾನಕ್ಕೆ ಕೇಳಿ ಬಂತು ಅಚ್ಚರಿಯ ಹೆಸರು!]

ಗೋವಾ</a> | <a title=ಮಣಿಪುರ | ಪಂಜಾಬ್ | ಉತ್ತರಾಖಂಡ್" title="ಗೋವಾ | ಮಣಿಪುರ | ಪಂಜಾಬ್ | ಉತ್ತರಾಖಂಡ್" />ಗೋವಾ | ಮಣಿಪುರ | ಪಂಜಾಬ್ | ಉತ್ತರಾಖಂಡ್

ರಾಹುಲ್ ಗಾಂಧಿ ಮತ್ತು ಅಖಿಲೇಶ್ ಲೆಕ್ಕಾಚಾರ ತಲೆಕೆಳಗಾಗಿದ್ದು, ನರೇಂದ್ರ ಮೋದಿ ಅಲೆ ಮತ್ತೊಮ್ಮೆ ಬಲವಾಗಿ ಬೀಸಿದೆ. ಅಪನಗದೀಕರಣ ಉತ್ತರಪ್ರದೇಶದಲ್ಲಿ ಬಿಜೆಪಿಗೆ ವರವಾಗಿ ಪರಿಣಮಿಸಿದೆ. ಎಲ್ಲಕ್ಕಿಂತ ಹೆಚ್ಚಾಗಿ ಸಮಾಜವಾದಿ ಪಕ್ಷದ ಆಡಳಿತ ನೋಡಿ ಜನ ರೋಸಿಹೋಗಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. [ಬಿಹಾರದಲ್ಲಿ ಕೂಡ ಸಮೀಕ್ಷೆ ಸುಳ್ಳಾಗಿತ್ತು : ರಾಹುಲ್ ಗಾಂಧಿ]

ಉತ್ತರಪ್ರದೇಶದಲ್ಲಿ ಕೇಸರು ರಂಗು ಎಲ್ಲೆಲ್ಲೂ ಚೆಲ್ಲಾಡುತ್ತಿದ್ದು, ಶನಿವಾರವೇ ಹೋಳಿ ಆಚರಣೆ ಭರ್ಜರಿಯಾಗಿ ನಡೆಯಲಿದೆ. ಈ ನಡುವೆ, ಉತ್ತರಪ್ರದೇಶಕ್ಕೆ ಯಾರು ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಹಲವಾರು ಘಟಾನುಘಟಿಗಳ ಹೆಸರುಗಳು ತೇಲಾಡುತ್ತಿವೆ. ಯಾರು ಮುಖ್ಯಮಂತ್ರಿಯಾಗಲಿದ್ದಾರೆ ಎಂಬುದು ಭಾನುವಾರ ತಿಳಿದುಬರಲಿದೆ. [ಉತ್ತರಪ್ರದೇಶ LIVE : ಮೋದಿಗೆ ಜೈ, ರಾಹುಲ್ ಗಾಂಧಿಗೆ ಗುಡ್ ಬೈ]

ರಾಜನಾಥ್ ಸಿಂಗ್

ರಾಜನಾಥ್ ಸಿಂಗ್

ಕೇಂದ್ರ ಗೃಹಸಚಿವರಾಗಿರುವ ರಾಜನಾಥ್ ಸಿಂಗ್ ಉತ್ತರಪ್ರದೇಶದಲ್ಲಿ ಪ್ರಬಲ ವ್ಯಕ್ತಿ ಎಂಬುದರಲ್ಲಿ ಎರಡು ಮಾತೇ ಇಲ್ಲ. ಒಂದು ವೇಳೆ ಬಹುಮತಕ್ಕೆ ಕಡಿಮೆ ಸ್ಥಾನ ದಕ್ಕಿದರೆ ರಾಜನಾಥ್ ಸಿಂಗ್ ಮುಖ್ಯಮಂತ್ರಿ ಪಟ್ಟಕ್ಕೆ ತಕ್ಕ ವ್ಯಕ್ತಿ ಎಂದು ನಿರ್ಧರಿಸಲಾಗಿತ್ತು. ಆದರೆ, ಈಗ ಬಹುಮತ ಸಿಗುವುದು ಮಳೆನೀರಿನಷ್ಟೇ ಸ್ವಚ್ಛವಾಗಿದೆ. ಕೇಂದ್ರದಲ್ಲಿ ಪ್ರಬಲ ಸ್ಥಾನದಲ್ಲಿರುವ ರಾಜನಾಥ್ ಸಿಂಗ್ ಅದನ್ನು ತೊರೆದು ರಾಜ್ಯಾಡಳಿತಕ್ಕೆ ಬರುತ್ತಾರಾ ಎಂಬುದು ಪ್ರಶ್ನೆ. [ಚುನಾವಣೋತ್ತರ ಸಮೀಕ್ಷೆ : ಉತ್ತರಪ್ರದೇಶದಲ್ಲಿ ಬಿಜೆಪಿ ಹೋಳಿಯ ರಂಗು]

ಕೇಶವ್ ಪ್ರಸಾದ್ ಮೌರ್ಯ

ಕೇಶವ್ ಪ್ರಸಾದ್ ಮೌರ್ಯ

ಬಿಜೆಪಿಯ ರಾಜ್ಯಾಧ್ಯಕ್ಷರಾಗಿರುವ ಕೇಶವ್ ಪ್ರಸಾದ್ ಮೌರ್ಯ ಪ್ರಭಾವಶಾಲಿ ವ್ಯಕ್ತಿ. ಅವರು ಸಂಘ ಪರಿವಾರ ಮತ್ತು ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೂ ಹತ್ತಿರದವರಾಗಿದ್ದಾರೆ. ಇಡೀ ರಾಜ್ಯ ಸುತ್ತಾಡಿರುವ ಅವರು ಎಲ್ಲರಿಗಿಂತ ಹೆಚ್ಚು ಸಭೆಗಳಲ್ಲಿ ಭಾಗವಹಿಸಿರುವ ಹೆಗ್ಗಳಿಕೆಯನ್ನೂ ಹೊಂದಿದ್ದಾರೆ. ಇವರ ಹೆಸರು ಮುಂಚೂಣಿಯಲ್ಲಿ ಬಂದರೂ ಅಚ್ಚರಿಯಿಲ್ಲ.

ದಿನೇಶ್ ಶರ್ಮಾ

ದಿನೇಶ್ ಶರ್ಮಾ

ಉತ್ತರಪ್ರದೇಶದಲ್ಲಿ ಬಿಜೆಪಿ ಘಟಕದ ಉಪಾಧ್ಯಕ್ಷರಾಗಿರುವ ದಿನೇಶ್ ಶರ್ಮಾ ಬ್ರಾಹ್ಮಣ, ಆರೆಸ್ಸೆಸ್ ಕಟ್ಟಾಳು. ತೆರೆಯ ಹಿಂದೆಯೇ ಕೆಲಸ ಮಾಡುವಲ್ಲಿ ಸಿದ್ಧಹಸ್ತರಾಗಿರುವ ದಿನೇಶ್, ಪ್ರಚಾರ ಗಿಟ್ಟಿಸುವಲ್ಲಿ ಹಿಂದೆಯೆ. ಅವರು ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸದಿದ್ದರೂ ಪ್ರಭಾವಿ ನಾಯಕರಲ್ಲಿ ಒಬ್ಬರಾಗಿದ್ದಾರೆ.

ಯೋಗಿ ಆದಿತ್ಯಾನಂದ

ಯೋಗಿ ಆದಿತ್ಯಾನಂದ

ಉತ್ತರಪ್ರದೇಶದಲ್ಲಿ ಹಿಂದೂತ್ವದ ಮುಖವಾಣಿಯಂತಿರುವ ಯೋಗಿ ಆದಿತ್ಯನಾಥ್ ಮಹತ್ವಾಕಾಂಕ್ಷಿ ರಾಜಕಾರಣಿ. ಮಧ್ಯಪ್ರದೇಶದ ಗೋರಖ್ ಪುರದಿಂದ ಹಿಂದೆ ಸಂಸದರಾಗಿದ್ದ ಯೋಗಿ ಆದಿತ್ಯಾನಂದ ತಾವು ಕೂಡ ಉತ್ತರಪ್ರದೇಶದಲ್ಲಿ ಮುಖ್ಯಮಂತ್ರಿ ಕುರ್ಚಿಯ ಆಕಾಂಕ್ಷಿ ಎಂದು ಸಾರಿದ್ದರು. ತಮ್ಮ ವಾಕ್ಚಾತುರ್ಯದಿಂದ ಸಾಕಷ್ಟು ಜನಮನ್ನಣೆ ಗಳಿಸಿರುವ ಯೋಗಿಗೆ ಈ ಬಾರಿ ಅದೃಷ್ಟ ಒಲಿಯುವುದೆ?

ಮನೋಜ್ ಸಿನ್ಹಾ

ಮನೋಜ್ ಸಿನ್ಹಾ

ಭೂಮಿಹಾರ್ ಜಾತಿಗೆ ಸೇರಿದ ಮನೋಜ್ ಸಿನ್ಹಾ ಅವರು ಗಾಝಿಪುರ ಪ್ರದೇಶದವರು. ಹಿಂದೆ ಕೇಂದ್ರ ರೈಲು ಇಲಾಖೆ ಸಹಾಯಕ ಸಚಿವರಾಗಿದ್ದ ಮನೋಜ್ ಮೋದಿಯವರ ಮನ್ನಣೆಯನ್ನು ಕೂಡ ಗಳಿಸಿದವರು. ಹಿಂದೆ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಯೂನಿಯನ್ ಲೀಡರ್ ಆಗಿದ್ದ ಮನೋಜ್, ಉತ್ತರಪ್ರದೇಶದಲ್ಲಿ ಮುಖ್ಯಮಂತ್ರಿಯಾಗಲು ಸಮರ್ಥರು ಎಂಬ ಮಾತು ಎಲ್ಲೆಡೆ ಕೇಳಿಬರುತ್ತಿದೆ.

ಅಮಿತ್ ಶಾ ಹೆಸರು ಕೂಡ ಕೇಳಿಬಂದಿದೆ

ಅಮಿತ್ ಶಾ ಹೆಸರು ಕೂಡ ಕೇಳಿಬಂದಿದೆ

ಈ ನಡುವೆ, ಅರ್ಧ ಡಜನ್ ನಾಯಕರ ನಡುವೆ ಅಮಿತ್ ಶಾ ಅವರ ಹೆಸರು ಕೂಡ ಮುಖ್ಯಮಂತ್ರಿ ಪಟ್ಟಕ್ಕೆ ನುಸುಳಿ ಬರುವ ಸಾಧ್ಯತೆಯಿದೆ. ಉತ್ತರಪ್ರದೇಶದಂತಹ ಅಲ್ಲೋಲಕಲ್ಲೋಲ ಎಬ್ಬಿಸುವ ರಾಜ್ಯದ ಚುಕ್ಕಾಣಿ ಹಿಡಿಯುವವರು ಕೂಡ ಘಟಾನುಘಟಿಯೇ ಆಗಿರಬೇಕು.

English summary
Who will be the chief minister of Uttar Pradesh? BJP will almost clean sweep in Uttar Pradesh assembly election leaving way behind SP-Congress and BSP. Who are all the probable candidates for the chief minister post from BJP? Find out.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X