ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೆ ಸೋಲು -ಗೆಲುವು ಯಾರು ಏನು ಹೇಳಿದ್ರು?

By Mahesh
|
Google Oneindia Kannada News

ಗುಲ್ಬರ್ಗ, ಅ.19: ಮಹಾರಾಷ್ಟ್ರ ಹಾಗೂ ಹರ್ಯಾಣ ರಾಜ್ಯಗಳಲ್ಲಿ ಕಾಂಗ್ರೆಸ್ ಸೋಲು ಕಾಣಲು ಭ್ರಷ್ಟಾಚಾರ ಮುಖ್ಯ ಕಾರಣ ಎನ್ನುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಲ್ಲ ಪಕ್ಷಗಳಲ್ಲೂ ಭ್ರಷ್ಟಾಚಾರವಿದೆ ಎಂದು ಲೋಕಸಭೆ ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಗುಲ್ಬರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹರ್ಯಾಣ ಮತ್ತು ಮಹಾರಾಷ್ಟ್ರಗಳ ಚುನಾವಣಾ ಸೋಲಿನ ಹೊಣೆ ಹೊರುತ್ತೇವೆ. ಜನರ ತೀರ್ಪಿಗೆ ತಲೆ ಬಾಗುತ್ತೇವೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಗೆಲ್ಲುವ ವಿಶ್ವಾಸವಿದೆ. ಸೋತಾಗ ತೆಗಳುತ್ತಾರೆ, ಗೆದ್ದಾಗ ಹೊಗಳುತ್ತಾರೆ. ಇದು ಸಾಮಾನ್ಯ. ನಾಯಕತ್ವ ಬದಲಾವಣೆ ಮಾಡಬೇಕೆಂದು ಹೇಳುವುದು ಸರಿಯಾದ ಕ್ರಮವಲ್ಲ ಎಂದರು.

ನಾಯಕತ್ವ ಬದಲಾವಣೆ? : ಸೋನಿಯಾ ಗಾಂಧಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಮುಂದುವರಿಯಲಿದೆ. ಪ್ರಿಯಾಂಕಾ ಗಾಂಧಿ ಕರೆ ತರುವ ನಿರ್ಧಾರದಲ್ಲಿ ಒಮ್ಮತ ಮೂಡಿಲ್ಲ, ಈ ಬಗ್ಗೆ ಅವರ ಕುಟುಂಬದ ನಿರ್ಧಾರವೇ ಅಂತಿಮ ಎಂದರು.[ಮಹಾರಾಷ್ಟ್ರ, ಹರಿಯಾಣ ಫಲಿತಾಂಶ]

ಸೋನಿಯಾ ಹೇಳಿಕೆ: ಇದು ಹೀನಾಯ ಸೋಲು ಎಂಬುದನ್ನು ಒಪ್ಪಿಕೊಳ್ಳುತ್ತೇವೆ. ಮಹಾರಾಷ್ಟ್ರ ಹಾಗೂ ಹರ್ಯಾಣ ಜನರ ವಿಶ್ವಾಸ ಗಳಿಸಲು ಯತ್ನಿಸುತ್ತೇವೆ. ರಚನಾತ್ಮಕ ಪಾತ್ರ ನಿರ್ವಹಿಸಿ ಪಕ್ಷ ಕಟ್ಟುತ್ತೇವೆ

ಚುನಾವಣೆಗೂ ಮುನ್ನ ಕೆಲ ನಾಯಕರು ಪಕ್ಷ ತ್ಯಜಿಸಿದರು. ಹೀಗಾಗಿ ಪಕ್ಷಕ್ಕೆ ಮಹಾರಾಷ್ಟ್ರದಲ್ಲಿ ಸ್ವಲ್ಪ ಹಿನ್ನಡೆಯಾಗಿದೆ. ಎಲ್ಲ ರಾಜಕೀಯ ಪಕ್ಷಗಳಲ್ಲೂ ಭ್ರಷ್ಟಾಚಾರವಿದೆ. ಭ್ರಷ್ಟಾಚಾರಿಗಳು ಹಲವು ಬಾರಿ ಗೆದ್ದು ಬರುತ್ತಾರೆ. ಮಹಾರಾಷ್ಟ್ರದಲ್ಲಿ 70 ರಿಂದ 90 ಸ್ಥಾನ ನಿರೀಕ್ಷೆ ಮಾಡಿದ್ದೆವು. ನಿರೀಕ್ಷಿತ ಫಲಿತಾಂಶ ನಮಗೆ ಸಿಕ್ಕಿಲ್ಲ. ಇದು ಬೇಸರದ ಸಂಗತಿ ಎಂದು ಖರ್ಗೆ ವಿಷಾದಿಸಿದರು.

ಮಹಾರಾಷ್ಟ್ರ ಹಾಗೂ ಹರ್ಯಾಣದಲ್ಲಿ ಸಿಎಂ ಯಾರಾಗಲಿದ್ದಾರೆ ಎಂಬ ಕುತೂಹಲ ಇನ್ನೂ ಇದ್ದೇ ಇದೆ ಈ ನಡುವೆ ಫಲಿತಾಂಶದ ಬಗ್ಗೆ ಪ್ರಮುಖ ನಾಯಕರು ನೀಡಿರುವ ಪ್ರತಿಕ್ರಿಯೆಗಳು ಇಲ್ಲಿವೆ...

ಬಿಜೆಪಿಯ ಮುಂದಿನ ಟಾರ್ಗೆಟ್ ಯಾವುದು?

ಬಿಜೆಪಿಯ ಮುಂದಿನ ಟಾರ್ಗೆಟ್ ಯಾವುದು?

ಮಹಾರಾಷ್ಟ್ರ ಹಾಗೂ ಹರ್ಯಾಣದಲ್ಲಿ ಅಭೂತಪೂರ್ವ ಗೆಲುವಿನ ನಂತರ ದೆಹಲಿ, ಜಾರ್ಖಂಡ್, ಜಮ್ಮು ಮತ್ತು ಕಾಶ್ಮೀರ ಹಾಗೂ ಬಿಹಾರ ಬಿಜೆಪಿಯ ಮುಂದಿನ ಟಾರ್ಗೆಟ್ ರಾಜ್ಯಗಳಾಗಿವೆ ಮುಂಬರುವ ವರ್ಷಗಳಲ್ಲಿ ಆ ರಾಜ್ಯಗಳಲ್ಲಿ ಬಿಜೆಪಿ ಬಾವುಟ ಹಾರಾಡಲಿದೆ ಎಂದು ಬಿಜೆಪಿ ನಾಯಕ ರಾಜೀವ್ ಪ್ರತಾಪ್ ರೂಢಿ ಹೇಳಿದ್ದಾರೆ

ಕಾಂಗ್ರೆಸ್ ಮುಕ್ತ ಭಾರತ ಕನಸು ನನಸಾಗಲಿದೆ

ಕಾಂಗ್ರೆಸ್ ಮುಕ್ತ ಭಾರತ ಕನಸು ನನಸಾಗಲಿದೆ

ನಾನು ಪ್ರಚಾರಕ್ಕೆ ತೆರಳಿದ ಸಂದರ್ಭದಲ್ಲಿ ಸ್ಪಷ್ಟವಾಗಿ ಮುಂಬೈ, ಪುಣೆ ಇತರೆಡೆಗಳಲ್ಲಿ ಬಿಜೆಪಿ ಅಲೆ ಕಂಡು ಬಂದಿತ್ತು. ಮೋದಿ ಅವರ ಕಾಂಗ್ರೆಸ್ ಮುಕ್ತ ಭಾರತ ಕನಸು ನನಸು ಮಾಡುವಲ್ಲಿ ಅಮಿತ್ ಶಾ ಯಶಸ್ವಿ ಮಾಡಿದ್ದಾರೆ.

ಸಂಜೆ ದೆಹಲಿಯಲ್ಲಿ ಸಭೆಯಲ್ಲಿ ಪಾಲ್ಗೊಳ್ಳುತ್ತೇನೆ. ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ತರಲಾಗುವುದು. ಕಾಂಗ್ರೆಸ್ ಅಸ್ತಿತ್ವವನ್ನೇ ಕಳೆದುಕೊಳ್ಳುವ ಭೀತಿಯಲ್ಲಿದೆ. ಬಿಜೆಪಿ ಅಭ್ಯರ್ಥಿಯೇ ಸಿಎಂ ಅಗಲಿದ್ದಾರೆ. ಕಾಂಗ್ರೆಸ್ ಸರ್ಕಾರವಿದ್ದಾಗ ಕಾನೂನು ಸುವವ್ಯಸ್ಥೆ ಹದಗೆಟ್ಟಿತ್ತು ಹೀಗಾಗಿ ಜನ ಬದಲಾವಣೆ ಬಯಸಿದ್ದಾರೆ.

ನನಗೆ ದೆಹಲಿಯಲ್ಲೇ ಸಾಕಷ್ಟು ಕೆಲಸವಿದೆ

ನನಗೆ ದೆಹಲಿಯಲ್ಲೇ ಸಾಕಷ್ಟು ಕೆಲಸವಿದೆ ನಾನು ಮಹಾರಾಷ್ಟ್ರಕ್ಕೆ ಹಿಂತಿರುಗಲಾರೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಸ್ಪಷ್ಟಪಡಿಸಿದ್ದಾರೆ.

ಕೇಂದ್ರ ಸಚಿವ ಡಿವಿ ಸದಾನಂದ ಗೌಡ

ಕೇಂದ್ರ ಸಚಿವ ಡಿವಿ ಸದಾನಂದ ಗೌಡ

ಚುನಾವಣೆಯಲ್ಲಿ ಮೈತ್ರಿ ಕಳೆದುಕೊಂಡಿರುವುದು ಫಲಿತಾಂಶದಲ್ಲಿ ದೊಡ್ಡ ಹೊಡೆತ ನೀಡಿಲ್ಲ. ಬಾಳಾ ಠಾಕ್ರೆ ಬಗ್ಗೆ ಮೋದಿ ಅವರು ವಿಶೇಷ ಗೌರವ ನೀಡಿದ್ದಾರೆ. ಅದರೆ, ಮಹಾರಾಷ್ಟ್ರದಲ್ಲಿ ನಿರೀಕ್ಷಿತ ಫಲಿತಾಂಶ ಬಂದಿಲ್ಲ ನಿಜ. ನಮ್ಮ ಸಂಬಂಧ ವ್ಯವಹಾರಗಳಲ್ಲಿ ವ್ಯತ್ಯಾಸಗಳಾಗಿಲ್ಲ. ಸರ್ಕಾರದ ರಚನೆ ಬಗ್ಗೆ ವರಿಷ್ಠರು ಸೂಕ್ತ ನಿರ್ಧಾರವನ್ನು ಕೈಗೊಳ್ಳಲಿದ್ದಾರೆ. ಹರ್ಯಾಣದಲ್ಲಿ ಅಭೂತಪೂರ್ವ ಗೆಲುವು ಸಾಧಿಸಲಾಗಿದೆ.

ಶರದ್ ಯಾದವ್ ಪ್ರತಿಕ್ರಿಯೆ

ಚುನಾವಣೆ ಸೋಲು ಗೆಲುವು ಸಿಂಹದ ಮೇಲಿನ ಸವಾರಿ ಇದ್ದಂತೆ: ಶರದ್ ಯಾದವ್ ಪ್ರತಿಕ್ರಿಯೆ

ಸೋಲೊಪ್ಪಿಕೊಂಡ ಕಾಂಗ್ರೆಸ್ ನಾಯಕ

ಸೋಲೊಪ್ಪಿಕೊಂಡ ಕಾಂಗ್ರೆಸ್ ನಾಯಕ ಸಂಜಯ್ ನಿರುಪಮ್

ಸಂಭ್ರಮಿಸುವ ದಿನ ಇದಾಗಿದೆ

ಸಂಭ್ರಮಿಸುವ ದಿನ ಇದಾಗಿದೆ ನಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ ಎಂದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

ಎಲ್ ಕೆ ಅಡ್ವಾಣಿ ಪ್ರತಿಕ್ರಿಯೆ

ಶಿವಸೇನೆ ಹಾಗೂ ಬಿಜೆಪಿ ಮೈತ್ರಿ ಮುರಿದುಕೊಂಡಿದ್ದು ದುಃಖ ತಂದಿದೆ. ಎರಡು ಪಕ್ಷಗಳು ಒಂದಾಗಲು ಈಗ ಜನರೇ ದಾರಿ ತೋರಿಸಿದ್ದಾರೆ. ಮೈತ್ರಿ ಸರ್ಕಾರದ ಮೂಲಕ ಕಾಂಗ್ರೆಸ್ ಗೆ ತಕ್ಕ ಉತ್ತರ ನೀಡಬೇಕಿದೆ. ಶಿವಸೇನೆ, ಬಿಜೆಪಿ ಸಾಧನೆ ಸಂತಸ ಉಂಟು ಮಾಡಿದೆ ಎಂದು ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಪ್ರತಿಕ್ರಿಯಿಸಿದ್ದಾರೆ.

English summary
Who said What on Maharashtra, Haryana Assembly poll 2014 verdict: Congress Senior leader Mallikarjuna Kharge accepted the defeat and said party will bounce back.We will form Govt in Delhi, Jharkhand, and J&K too. And then next year in Bihar: Raji Pratap Rudy, BJP
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X