ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೈಶಂಕರ್ ಯಾರು? ಸುಜಾತಾರನ್ನು ಮೋದಿ ವಜಾಗೊಳಿಸಿದ್ದೇಕೆ?

By Mahesh
|
Google Oneindia Kannada News

ನವದೆಹಲಿ, ಜ.29: ಸುಜಾತಾ ಸಿಂಗ್ ಅವರನ್ನು ವಿದೇಶಾಂಗ ಕಾರ್ಯದರ್ಶಿ ಸ್ಥಾನದಿಂದ ಅವಧಿಗೆ ಮುನ್ನ ಕೆಳಗಿಳಿಸಿ, ಜೈಶಂಕರ್ ಅವರನ್ನು ಅವರ ಸ್ಥಾನಕ್ಕೆ ಕರೆ ತಂದಿರುವುದು ಈಗ ಚರ್ಚಾಸ್ಪದವಾಗಿದೆ. ಅದರಲ್ಲೂ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರು ಭಾರತಕ್ಕೆ ಬಂದು ಹೋದ ಬೆನ್ನಲ್ಲೇ ಮೋದಿ ಸರ್ಕಾರ ಈ ಮಹತ್ವದ ನಡೆ ಇಟ್ಟಿದೆ. ಜೈಶಂಕರ್ ಯಾರು? ಅವರಿಗೆ ಉನ್ನತ ಸ್ಥಾನ ಸಿಕ್ಕಿದ್ದು ಏಕೆ? ಎಂಬುದರ ಬಗ್ಗೆ ವಿವರಣೆ ಇಲ್ಲಿದೆ...

ಒಂದೇ ಮಾತಿನಲ್ಲಿ ಹೇಳಬೇಕೆಂದರೆ, ಒಬಾಮಾರನ್ನು ಭಾರತಕ್ಕೆ ಕರೆತಂದ ಜೈಶಂಕರ್ ಗೆ ಮೋದಿ ಸರ್ಕಾರ ಕೊಟ್ಟಿರುವ ದೊಡ್ಡ ಉಡುಗೊರೆ ಇದಾಗಿದೆ. ಜೈಶಂಕರ್ ಅವರು ಸಮರ್ಥ ಅಧಿಕಾರಿ ಎಂಬುದರಲ್ಲಿ ಎರಡು ಮಾತಿಲ್ಲ. ಜಪಾನೀಸ್, ಹಂಗೇರಿಯನ್, ರಷ್ಯನ್, ಹಿಂದಿ, ಇಂಗ್ಲೀಷ್ ಹೀಗೆ ಬಹುಭಾಷಾ ಪ್ರವೀಣ. ಅಮೆರಿಕದಲ್ಲಿ ಭಾರತದ ರಾಯಭಾರಿಯಾಗಿ ನಿರುಪಮಾ ರಾವ್ ಅವರ ಸ್ಥಾನವನ್ನು ಸಮರ್ಥವಾಗಿ ತುಂಬಿದವರು.

ಇದೇ ಮೊದಲಲ್ಲ: ಈ ಹಿಂದೆ ರಾಜೀವ್ ಗಾಂಧಿ ಕಾಲದಲ್ಲಿ ವಿದೇಶಾಂಗ ಕಾರ್ಯದರ್ಶಿ ಎಪಿ ವೆಂಕಟೇಶ್ವರನ್ ಅವರನ್ನು ದಿಢೀರ್ ಆಗಿ ಹುದ್ದೆಯಿಂದ ವಜಾಗೊಳಿಸಲಾಗಿತ್ತು. ಈಗ ಸುಜಾತಾ ಸಿಂಗ್ ಅವರನ್ನು ಕೆಳಗಿಳಿಸಿದ್ದರ ಹಿಂದೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಕೈವಾಡವಿದೆ ಎಂಬ ಸುದ್ದಿಯೂ ಹಬ್ಬಿದೆ. [ವಿದೇಶಾಂಗ ಕಾರ್ಯದರ್ಶಿ: ಸುಜಾತಾ ವಜಾ, ಜೈ ಶಂಕರ್ ಅಧಿಕಾರಕ್ಕೆ]

ಬಿಜೆಪಿ ಪ್ರತಿಕ್ರಿಯೆ: ಆದರೆ, ಎಂದಿನಂತೆ ಸರ್ಕಾರ ಸುಜಾತಾ ಅವರನ್ನು ವಜಾಗೊಳಿಸಿದ್ದರ ಬಗ್ಗೆ ಗಪ್ ಚುಪ್ ಆಗಿದೆ. ಮನೀಶ್ ತಿವಾರಿ ಸೇರಿದಂತೆ ಕೆಲ ಕಾಂಗ್ರೆಸ್ ನಾಯಕರು ಎಂದಿನಂತೆ ಟ್ವೀಟ್ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಕ್ತಾರ ನಳಿನ್ ಕೊಹ್ಲಿ ಮಾತ್ರ ಮಾತನಾಡಿ, ಅಧಿಕಾರಿಗಳ ನೇಮಕ ವಿಷಯದಲ್ಲಿ ಸರ್ಕಾರ ಯಾವಾಗ ಯಾವ ನಿರ್ಧಾರ ಕೈಗೊಳ್ಳಬೇಕು ಎಂಬುದು ಚೆನ್ನಾಗಿ ಗೊತ್ತಿದೆ. ಇದೇ ಮೊದಲು ಈ ರೀತಿ ನಡೆದಿದ್ದಲ್ಲ ಎಂಬುದು ನೆನಪಿರಲಿ ಎಂದು ಮನೀಶ್ ಗೆ ಪ್ರತಿಕ್ರಿಯಿಸಿದ್ದಾರೆ.

Who is S Jaishankar? Why he was appointed as the new Foreign Secretary

ಆದರೆ, ಎಂದಿನಂತೆ ಸರ್ಕಾರ ಸುಜಾತಾ ಅವರನ್ನು ವಜಾಗೊಳಿಸಿದ್ದರ ಬಗ್ಗೆ ಗಪ್ ಚುಪ್ ಆಗಿದೆ. ಮನೀಶ್ ತಿವಾರಿ ಸೇರಿದಂತೆ ಕೆಲ ಕಾಂಗ್ರೆಸ್ ನಾಯಕರು ಎಂದಿನಂತೆ ಟ್ವೀಟ್ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲ್ಲದೆ, ಪಾಕಿಸ್ತಾನ ಜೊತೆಗಿನ ದ್ವಿಪಕ್ಷೀಯ ಮಾತುಕತೆ, ಒಬಾಮಾ ಅವರನ್ನು ಭಾರತಕ್ಕೆ ಕರೆಸಿಕೊಳ್ಳುವ ವಿಚಾರದಲ್ಲಿ ನಡೆದ ಸಭೆಗಳಿಂದ ಸುಜಾತಾ ಅವರನ್ನು ಮೋದಿ ಅವರು ದೂರವಿರಿಸಿದ್ದರಂತೆ.

ಜೈಶಂಕರ್ ಸಂಕ್ಷಿಪ್ತ ಪರಿಚಯ:
* 1955ರಲ್ಲಿ ದೆಹಲಿಯಲ್ಲಿ ಜನಸಿದ ಜೈಶಂಕರ್ ಅವರು ರಾಜಕೀಯ ವಿಶ್ಲೇಷಕ, ಅಧಿಕಾರಿ ಕೆ ಸುಬ್ರಮಣ್ಯಂ ಅವರ ಪುತ್ರ. ಇತಿಹಾಸಕಾರ ಸಂಜಯ್ ಸುಬ್ರಮಣ್ಯಂ ಅವರ ಸೋದರ.
* ದೆಹಲಿಯ ಏರ್ ಫೋರ್ಸ್ ಸೆಂಟ್ರಲ್ ಸ್ಕೂಲ್, ಸೈಂಟ್ ಸ್ಟೀಫನ್ ಕಾಲೇಜ್ ನಲ್ಲಿ ವಿದ್ಯಾಭ್ಯಾಸ.
* ಜವಹರಲಾಲ್ ನೆಹರು ವಿಶ್ವವಿದ್ಯಾಲಯದ ಎಂಎ, ಎಂಫಿಲ್, ಪಿಎಚ್ ಡಿ(ಅಂತಾರಾಷ್ಟ್ರೀಯ ವ್ಯವಹಾರ) ಪಡೆದಿದ್ದಾರೆ. ಅಣ್ವಸ್ತ್ರ ವಿಷಯದಲ್ಲಿ ವಿದೇಶಾಂಗ ವ್ಯವಹಾರ ನಡೆಸುವಲ್ಲಿ ನಿಪುಣರು.
* 60 ವರ್ಷ ವಯಸ್ಸಿನ ಸುಬ್ರಮಣ್ಯಂ ಜೈಶಂಕರ್ ಅವರು ಭಾರತೀಯ ರಾಯಭಾರಿಯಾಗಿದ್ದವರು ಈಗ ಜ.28,2015ರಿಂದ 2 ವರ್ಷದ ಅವಧಿಗೆ ವಿದೇಶಾಂಗ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.
*ವಿದೇಶಾಂಗ ವ್ಯವಹಾರ ಕ್ಷೇತ್ರದಲ್ಲಿ ಸುಮಾರು 36 ವರ್ಷಗಳ ಕಾಲ ಅನುಭವ ಹೊಂದಿದ್ದಾರೆ.
* 2007 ರಿಂದ 2009ರ ತನಕ ಚೀನಾಕ್ಕೆ ಭಾರತೀಯ ರಾಯಭಾರಿಯಾಗಿದ್ದರು.
* ಅತಿ ಹೆಚ್ಚು ಅವಧಿಗೆ ಚೀನಾಕ್ಕೆ ರಾಯಭಾರಿಯಾಗಿದ್ದ ಇವರು ಅರ್ಥಿಕ, ವ್ಯಾಪಾರ, ಸಾಂಸ್ಕೃತಿಕ ಒಪ್ಪಂದ ಏರ್ಪಡಲು ಕಾರಣರಾದರು.

* 2001 ರಿಂದ 2004 ರ ತನಕ ಸಿಂಗಪುರದ ಹೈ ಕಮೀಷನರ್ ಹಾಗೂ ಚೆಕ್ ಗಣರಾಜ್ಯದ ರಾಯಭಾರಿಯಾಗಿದ್ದರು.
* ಭಾರತ ಹಾಗೂ ಅಮೆರಿಕ ನಡುವಿನ ನಾಗರಿಕ ಪರಮಾಣು ಒಪ್ಪಂದಕ್ಕೆ ಸುಮಾರು 6 ವರ್ಷಗಳ ನಂತರ ಸಹಿ ಬೀಳಲು ಇವರು ಕಾರಣ.
* ಸೆಪ್ಟೆಂಬರ್ 2013ರಲ್ಲಿ ಅಮೆರಿಕಕ್ಕೆ ಭಾರತದ ರಾಯಭಾರಿಯಾಗಿ ನೇಮಕಗೊಂಡರು.
* ದೇವಯಾನಿ ಖೊಬ್ರಾಗಡೆ ಪ್ರಕರಣವನ್ನು ಸಮರ್ಥವಾಗಿ ನಿಭಾಯಿಸಿದರು.

ಒನ್ ಇಂಡಿಯಾ ಸುದ್ದಿ

English summary
S Jaishankar, who on Wednesday was appointed as the new Foreign Secretary, replaces Sujatha Singh on the post. He was the Ambassador to the US, having been appointed in December, 2013.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X