ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

20 ಬಿಲಿಯನ್ ನೋಟು ವಿಲೇವಾರಿ, ಅದು ಹೆಂಗೆ ಮಾಡ್ತಾರ್ರೀ?

|
Google Oneindia Kannada News

ಬೆಂಗಳೂರು, ನವೆಂಬರ್ 23: 500, 1000 ನೋಟು ರದ್ದು ಮಾಡಿ ಎರಡು ವಾರ ಕಳೆದುಹೋಗಿದೆ. ಆದರೆ ಈಗಲೂ ತಮ್ಮ ಹಳೇ ನೋಟು ಬದಲಾವಣೆಗಾಗಿ ಸರತಿಯಲ್ಲಿ ನಿಲ್ಲುವವರ ಸಂಖ್ಯೆ ಕಡಿಮೆಯಾಗಿಲ್ಲ. ಹೊಸ ನೋಟುಗಳು ಮುದ್ರಣವಾಗಿ ಚಲಾವಣೆಗೆ ಬಂದರೂ ಹಳೆಯ ನೋಟುಗಳ ವಿಲೇವಾರಿ ಮುಗಿಯುವವರೆಗೆ ಸರಕಾರದ ಕೆಲಸ ಪೂರ್ತಿ ಆಗುವುದಿಲ್ಲ.

ಬಿಬಿಸಿ ಸುದ್ದಿ ಮಾಧ್ಯಮದ ವರದಿ ಪ್ರಕಾರ ಅಂದಾಜು 20 ಬಿಲಿಯನ್ ಹಳೆ ನೋಟುಗಳ ವಿಲೇವಾರಿ ಆಗಬೇಕು. ಒಂದು ಬಿಲಿಯನ್ ಅಂದರೆ ನೂರು ಕೋಟಿ. ಇನ್ನು ಇಪ್ಪತ್ತು ಬಿಲಿಯನ್ ಗೆ ಎಷ್ಟಾಯ್ತು ನೀವೇ ಲೆಕ್ಕ ಹಾಕಿಕೊಳ್ಳಿ. ದೇಶದಾದ್ಯಂತ ಇರೋ ಆರ್ ಬಿಐನ ವಿಲೇವಾರಿ ಘಟಕಗಳ ಸಂಖೆ 27. ಅವುಗಳಲ್ಲಿ ವಿಲೇವಾರಿ ಆಗುತ್ತೆ.[500ರೂ. ನೋಟುಗಳನ್ನು ಮಾತ್ರ ಮುದ್ರಿಸಲು ಮೈಸೂರು ಮುದ್ರಣಾಲಯಕ್ಕೆ ಸೂಚನೆ]

What The Govt Will Do With The Old ₹500, ₹1,000 Notes?

2015-16ನೇ ಸಾಲಿನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಣ್ಣಾದ 16 ಬಿಲಿಯನ್ ನೋಟುಗಳನ್ನು ನಾಶ ಮಾಡಿದೆಯಂತೆ. 'ಅಷ್ಟು ನಗದನ್ನು ನಾಶ ಮಾಡುವುದೇ ಸವಾಲೇ ಅಲ್ಲ, ಅದಕ್ಕೆ ಬೇಕಾದಷ್ಟು ವಿಲೇವಾರಿ ಘಟಕ ಮತ್ತು ಮಶೀನ್ ಎಲ್ಲವೂ ಇದೆ. ನಮ್ಮ ಹತ್ತಿರ ಇರೋ ಆಟೋಮ್ಯಾಟಿಕ್ ಮಶೀನ್ ನಿಂದ ನೋಟುಗಳನ್ನು ಸಣ್ಣ ಚೂರುಗಳಾಗಿ ಮಾಡಬಹುದು' ಎನ್ನುತ್ತಾರೆ ಆರ್ ಬಿಐ ಅಧಿಕಾರಿ.

ಸಾಮಾನ್ಯವಾಗಿ ಮಣ್ಣಾದ ನೋಟು, ನಾಣ್ಯಗಳನ್ನು ಬ್ಯಾಂಕ್ ಗಳು ಆರ್ ಬಿಐಗೆ ಕಳಿಸುತ್ತದೆ. ನೋಟುಗಳನ್ನು ಸ್ಕ್ಯಾನಿಂಗ್ ಯಂತ್ರದ ಮೂಲಕ ಬೇರ್ಪಡಿಸಲಾಗುತ್ತದೆ. ಯಾವ ನೋಟನ್ನು ಮತ್ತೆ ವಿತರಿಸುವುದಕ್ಕೆ ಸಾಧ್ಯವಿರುವುದಿಲ್ಲವೋ ಅಂಥದ್ದನ್ನು ಚೂರುಗಳಾಗಿ ಮಾಡಲಾಗುತ್ತದೆ. ಯಾವುದು ಮತ್ತೆ ವಿತರಿಸಬಹುದೋ ಅದನ್ನು ವಿತರಿಸಲಾಗುತ್ತದೆ.[ಹಳೆ 500, 1,000 ನೋಟುಗಳ ವೈಕುಂಠ ಸಮಾರಾಧನೆ!]

ನೋಟು ವಿತರಣೆಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕಾದ್ದರಿಂದ ಉಳಿದದ್ದನ್ನು ನಾಶಪಡಿಸಲಾಗುತ್ತದೆ. ನೋಟು ನಿರ್ವಹಣೆಯಲ್ಲಿ ಆರ್ ಬಿಐ ಪಾತ್ರದ ಬಗ್ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಾಯ್ದೆ 1934ರಲ್ಲಿ ತಿಳಿಸಲಾಗಿದೆ. ಹಳೆಯ ನೋಟುಗಳು, ಮಣ್ಣಾಗಿರುವುದು ಹಾಗೂ ಹರಿದಂಥದ್ದು ನಿರಂತರವಾಗಿ ಬದಲಾಯಿಸಲಾಗುತ್ತದೆ. ಈ ಬಾರಿ ಕಾರ್ಯಾಚರಣೆ ತುಂಬ ವಿಭಿನ್ನವಾದದ್ದು.[ರೈಲಿನಲ್ಲಿ ಸಾಗಿಸುತ್ತಿದ್ದ ಕೋಟ್ಯಂತರ ರು. ಹಣ ದರೋಡೆ!]

ನೋಟು ವಿಲೇವಾರಿ ಸ್ಥಳದಲ್ಲಿ ಭಾರೀ ಭದ್ರತೆ ಇರುತ್ತದೆ. ದೂಳು ಮತ್ತಿತರ ಸಮಸ್ಯೆ ಆಗಬಾರದು ಎಂಬ ಕಾರಣಕ್ಕೆ ಅಲ್ಲಿ ಕೆಲಸ ನಿರ್ವಹಿಸುವವರು ಮುಖಕ್ಕೆ ಮಾಸ್ಕ್ ಹಾಕಿಕೊಳ್ಳುತ್ತಾರೆ. ಹಳೇ ನೋಟುಗಳನ್ನು ಪೂರ್ತಿ ಪುಡಿಪುಡಿಯಾಗಿ ಮಾಡಿ, ಮಣ್ಣಿನಲ್ಲಿ ಹೂತುಬಿಡ್ತಾರೆ. 1990ರ ದಶಕದಲ್ಲಿ ಆರ್ ಬಿಐ ಪುಡಿಯಾದ ನೋಟುಗಳನ್ನು ಸುಡುತ್ತಿತ್ತಂತೆ. ಅದರೆ ಈಗಿನ ಪ್ರಕ್ರಿಯೆ ಪರಿಸರ ಸ್ನೇಹಿಯಾಗಿದೆ.[ಉತ್ತರಪ್ರದೇಶದಲ್ಲಿ ಭಸ್ಮವಾದ 500, 1000 ನೋಟುಗಳು ಯಾರದ್ದು?]

ಜೊತೆಗೆ ಪುಡಿಯಾದ ನೋಟನ್ನು ನವೀಕರಿಸಿ ಅದರಿಂದ ಫೈಲ್, ಟೀ ಕಪ್, ಕ್ಯಾಲೆಂಡರ್ ಹಾಗೂ ಟ್ರೇಗಳನ್ನು ಕೂಡ ಮಾಡುತ್ತಾರೆ.

English summary
The government has a huge task at hand with getting rid of the old notes. An estimated 20 billion old notes will have to be shredded and made into briquettes with the use of the 27 shredders the RBI has across India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X