ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಲಿತ್ ಮೋದಿ-ಸುಷ್ಮಾ ವಿವಾದದ ಸಂಪೂರ್ಣ ಚಿತ್ರಣ

|
Google Oneindia Kannada News

ನವದೆಹಲಿ, ಜೂ. 15: ಲಲಿತ್ ಮೋದಿಗೆ ಪ್ರಯಾಣ ದಾಖಲೆ ನೀಡಿಕೆ ಸಂಬಂಧ ವಿವಾದಕ್ಕೆ ಸಿಲುಕಿರುವ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ರಾಜೀನಾಮೆಗೆ ವಿಪಕ್ಷಗಳು ಪಟ್ಟು ಹಿಡಿದು ಕುಳಿತುಕೊಂಡಿವೆ. ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿಯೂ ಇದರದೇ ಚರ್ಚೆ ನಡೆಯುತ್ತಿದೆ.

ಕಾಂಗ್ರಸ್ ಮುಖಂಡ, ಕೇಂದ್ರದ ಮಾಜಿ ಸಚಿವ ಸಲ್ಮಾನ್ ಖುರ್ಷಿದ್. ಪ್ರಕರಣದ ಬಗ್ಗೆ ಸುಷ್ಮಾ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಹಾಗಾದರೆ ಅಷ್ಟಕ್ಕೂ ಈ ವಿವಾದ ಹುಟ್ಟಿಕೊಳ್ಳಲು ಕಾರಣವೇನು? ನಡೆದ ಘಟನಾವಳಿಗಳು ಯಾವವು? ಎಲ್ಲ ಸಂಗತಿಗಳ ಮೇಲೆ ಒಂದು ನೋಟ ಇಲ್ಲಿದೆ.[ಸುಷ್ಮಾ ರಾಜೀನಾಮೆಗೆ ಆಗ್ರಹ]

sushma

ಪ್ರಯಾಣ ಪ್ರಮಾಣ ಪತ್ರ ವಿವಾದದ ಘಟನೆಗಳ ಚಿತ್ರಣ
* ಭಾರತದಲ್ಲಿ ತನ್ನ ವಿರುದ್ಧ ದಾಖಲಾಗಿದ್ದ ಪ್ರಕರಣಗಳ ವಿಚಾರಣೆಗೆ ಲಲಿತ್ ಮೋದಿ ವಿರೋಧ ವ್ಯಕ್ತಪಡಿಸಿದ್ದರು.
* ನನಗೆ ಭಾರತದಲ್ಲಿ ಪ್ರಾಣ ಬೆದರಿಕೆಯಿದೆ ಎಂದು ಮೋದಿ ಆರೋಪ ಮಾಡಿದ್ದರು.[ಸುಷ್ಮಾ ಅವರೇ ದಾವೂದ್ ಗೂ ಹೆಲ್ಪ್ ಮಾಡ್ತಿರಾ?]
* 2009 ರ ಐಪಿಎಲ್ ವೇಳೆ ವಿದೇಶಿ ಒಪ್ಪಂದಗಳನ್ನು ಮೋದಿ ಮುರಿದಿದ್ದರು ಎಂಬ ಆರೋಪ ಕೇಳಿ ಬಂದಿತ್ತು.
* ಅಂದಿನ ಐಪಿಎಲ್ ಮುಖ್ಯಸ್ಥರಾಗಿದ್ದ ಲಲಿತ್ ಮೋದಿ ದಕ್ಷಿಣ ಆಫ್ರಿಕಾದಲ್ಲಿ ಪಂದ್ಯಾವಳಿ ಆಯೋಜನೆ ಮಾಡಿದ್ದರು.
* ನಂತರ ಯುಪಿಎ ಸರ್ಕಾರ ಮೋದಿ ಅವರ ಪಾಸ್ ಪೋರ್ಟ್ ಮೇಲೆ ನಿರ್ಬಂಧ ಹೇರಿ, ತನಿಖೆಗೆ ಮುಂದಾಗಿತ್ತು.
* ಲಲಿತ್ ಮೋದಿಗೆ ಸಹಕಾರ ನೀಡಿದರೆ ಅದು ಭಾರತ ಮತ್ತು ಬ್ರಿಟನ್ ನಡುವಿನ ಸಂಬಂಧಕ್ಕೆ ಕೊಳ್ಳಿ ಇಡಬಹುದು ಎಂದು ಅಂದಿನ ಕೇಂದ್ರ ಸರ್ಕಾರ ಹೇಳಿತ್ತು.

ಇಂಗ್ಲೆಂಡ್ ನಿಂದ ಹೊರಕ್ಕೆ ಹಾರಲು ಲಲಿತ್ ಮೋದಿ ಮಾಡಿದ್ದೇನು?
* ಲಲಿತ್ ಮೋದಿ ಬಳಿ ಯಾವುದೇ ಅಧಿಕೃತ ಪಾಸ್ ಪೋರ್ಟ್ ಇರಲಿಲ್ಲ
* ಕೇಂದ್ರ ಸರ್ಕಾರದ ತೀರ್ಮಾನವನ್ನು ದೆಹಲಿ ಹೈ ಕೋರ್ಟ್ ನಲ್ಲಿ ಮೋದಿ ಪ್ರಶ್ನೆ ಮಾಡಿದ್ದರು.
* ಅಲ್ಲದೇ ಬ್ರಿಟಿಷ್ ಸರ್ಕಾರಕ್ಕೆ ವಿದೇಶಗಳಿಗೆ ಸಂಚರಿಸಲು ಮನವಿ ಪತ್ರವೊಂದನ್ನು ನೀಡಲು ಕೇಳಿಕೊಂಡಿದ್ದರು.
* ಮತ್ತೆ 2014 ರಲ್ಲಿ ಪೋರ್ಚುಗಲ್ ಗೆ ತೆರಳಲು ಅನುಮತಿ ನೀಡುವಂತೆ ಬ್ರಿಟನ್ ಸರ್ಕಾರವನ್ನು ಕೇಳಿಕೊಂಡರು.
* ನನ್ನ ಹೆಂಡತಿ ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದು ಪೋರ್ಚುಗಲ್ ಚಿಕಿತ್ಸೆಗೆ ತೆರಳಲು ಅನುಮತಿ ನೀಡಬೇಕು ಎಂದು ಆಗಸ್ಟ್ 4, 2014 ರಂದು ಕೇಳಿಕೊಂಡಿದ್ದರು.

ಸುಷ್ಮಾ ವಿರುದ್ಧ ಕೇಳಿ ಬಂದ ಆರೋಪಗಳೇನು?
* ಭಾರತ ಮೂಲದ ಇಂಗ್ಲೆಂಡ್ ಸಂಸದ ಕೀಥ್ ವಾಜ್ ಜತೆ ಸುಷ್ಮಾ ನಡೆಸಿದ ಇಮೇಲ್ ಸರಣಿಯನ್ನು ಟಿವಿ ಮಾಧ್ಯಮವೊಂದು ಬಹಿರಂಗ ಮಾಡಿತು.
* ಮೋದಿಗೆ ಬೇರೆ ದೇಶಕ್ಕೆ ತೆರಳಲು ಅವಕಾಶ ನೀಡಿದರೆ ದ್ವಿಪಕ್ಷೀಯ ಬಾಂಧವ್ಯಗಳಿಗೆ ಧಕ್ಕೆ ಬರುವುದಿಲ್ಲ ಎಂದು ಸ್ವರಾಜ್ ತಿಳಿಸಿದ್ದರು.
* ಸುಷ್ಮಾ ಹೆಸರನ್ನು ಬಳಸಿಕೊಂಡು ವಾಜ್ ಮೋದಿಗೆ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿದ್ದರು.
* ಈ ಎಲ್ಲ ಬೆಳವಣಿಗೆ ನಡೆದ 24 ಗಂಟೆ ಒಳಗಾಗಿ ಮೋದಿ ಕೈಗೆ ಪ್ರಯಾಣ ಪ್ರಮಾಣ ಪತ್ರ ಸಲ್ಲಿಸಿತ್ತು.
* ಅಲ್ಲದೇ ಸುಷ್ಮಾ ಅಳಿಯ ಜ್ಯೋತಿರ್ಮಯಿ ಕೌಶಲ್ ಅವರಿಗೆ ಬ್ರಿಟನ್ ಡಿಗ್ರಿ ಸಿಗುವಂತೆಯೂ ಮಾಡಲಾಗಿತ್ತು.

ಪ್ರಶಾಂತ್ ಭೂಷಣ್ ಹೇಳುವುದೇನು?
ಆಮ್ ಆದ್ಮಿ ಪಕ್ಷದ ಮಾಜಿ ನಾಯಕ, ಹಿರಿಯ ವಕೀಲ ಪ್ರಶಾಂತ್ ಭೂಷಣ್ ಈ ಬಗ್ಗೆ ಮಾತನಾಡಿದ್ದಾರೆ. ಬ್ರಿಟಿಷ್ ಸರ್ಕಾರಕ್ಕೆ ಮೋದಿ ಪರವಾಗಿ ಸುಷ್ಮಾ ಮಾತನಾಡುವ ವೇಳೆ ಅವರ ಮಗಳು ಲಲಿತ್ ಮೋದಿ ಪರ ವಕೀಲರಾಗಿ ವಕಾಲತ್ತು ಮಾಡುತ್ತಿದ್ದರು.

ಸ್ವರಾಜ್ ಮಗಳು ಲಲಿತ್ ಮೋದಿ ಅವರಿಂದ ಫೀಸು ಪಡೆದುಕೊಂಡರೆ ತಪ್ಪಲ್ಲ. ಆದರೆ ಇಲ್ಲಿ ಕೆಲಸ ಮಾಡಿಕೊಳ್ಳಲು ಸಚಿವ ಸ್ಥಾನದ ಅಧಿಕಾರ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಭೂಷಣ್ ಆರೋಪ ಮಾಡಿದ್ದಾರೆ.

English summary
Controversy over Sushma Swaraj and Lalit Modi hit India headlines on Sunday, June 14. A day after the "breaking news", Congress has intensified its demand for the resignation of the External Affairs Minister. Follow through Oneindia Kannada Explainer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X