ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏನಿದು ಇ ಪಾಸ್ ಪೋರ್ಟ್? ಏನು ಪ್ರಯೋಜನ?

By Mahesh
|
Google Oneindia Kannada News

ಹಲವಾರು ದೇಶಗಳಲ್ಲಿ ಚಾಲ್ತಿಯಲ್ಲಿರುವ ಜನಪ್ರಿಯ ಯೋಜನೆಯೊಂದು 2016ರಲ್ಲಿ ಭಾರತದಲ್ಲೂ ಸಾಕಾರಗೊಳ್ಳಲಿದೆ. 2016ರ ವೇಳೆಗೆ ದೇಶದಲ್ಲಿ ಇ-ಪಾಸ್​ಪೋರ್ಟ್ ಬಳಕೆ ಪ್ರಾರಂಭವಾಗಬಹುದು ಎಂದು ವಿದೇಶಾಂಗ ಸಚಿವಾಲಯದ ಮುಖ್ಯ ಪಾಸ್​ಪೋರ್ಟ್ ಅಧಿಕಾರಿ ಮತ್ತು ಜಂಟಿ ನಿರ್ದೇಶಕ (ಪಾಸ್​ಪೋರ್ಟ್ ಸೇವಾ ಯೋಜನೆ) ರಾದ ಮುಕ್ತೇಶ್ ಕೆ. ಪರದೇಸಿ ಇತ್ತೀಚೆಗೆ ತಿಳಿಸಿದ್ದಾರೆ. ಏನಿದು ಇ ಪಾಸ್ ಪೋರ್ಟ್? ಇದರಿಂದ ಏನು ಪ್ರಯೋಜನ? ಎಂಬುದರ ಬಗ್ಗೆ ವಿವರಣೆ ಇಲ್ಲಿದೆ...

ಇ ಪಾಸ್ ಪೋರ್ಟ್ : ಬಯೋಮೆಟ್ರಿಕ್ ಪಾಸ್​ಪೋರ್ಟ್ ಅಥವಾ ಡಿಜಿಟಲ್ ಪಾಸ್​ಪೋರ್ಟ್ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಬಳಕೆಯಲ್ಲಿರುವ ಪಾಸ್ ಪೋರ್ಟ್ ಬುಕ್ ನಂತೆ ಇರುತ್ತದೆ. ಅದರೆ, ಜೊತೆಗೊಂದು ಎಲೆಕ್ಟ್ರಾನಿಕ್ ಚಿಪ್ ಇರುತ್ತದೆ. ಈ ಚಿಪ್ ನಲ್ಲಿ ಪಾಸ್ ಪೋರ್ಟ್ ನ ಎರಡನೇ ಪುಟದ ವಿವರಗಳು (ಸರ್ ನೇಮ್, ಹೆಸರು, ಹುಟ್ಟಿದ ದಿನಾಂಕ, ಲಿಂಗ) ದಾಖಲಾಗಿರುತ್ತದೆ. ಡಿಜಿಟಲ್ ಭಾವಚಿತ್ರ, ಸಹಿ, ಬೆರಳಚ್ಚು ಮಾಹಿತಿ ಒಳಗೊಂಡಂತೆ ಅಗತ್ಯ ಮಾಹಿತಿಗಳಿರುತ್ತದೆ.

ಭಾರತದಲ್ಲಿ ಯಾವಾಗ ಬರಲಿದೆ?: ಇ-ಪಾಸ್​ಪೋರ್ಟ್ ಯೋಜನೆ ಅನುಷ್ಠಾನಕ್ಕೆ ಸರ್ಕಾರ ಟೆಂಡರ್ ಈಗಿನ್ನೂ ಕರೆದಿದೆ. 2015ರ ಕೊನೆ ಭಾಗದಲ್ಲಿ ಮುಕ್ತಾಯವಾಗಬೇಕಿದ್ದ ಪ್ರಕ್ರಿಯೆ ಈಗ 2016ರ ಪ್ರಾರಂಭದಲ್ಲಿ ಪೂರ್ತಿಗೊಂಡು ಇ-ಪಾಸ್​ಪೋರ್ಟ್ ವಿತರಣೆ ಮಾಡಬಹುದು.

ePassport will be rolled out in India by 2016

ಭಾರತ ಮಂಚೂಣಿಗೆ: ಚೀನಾ ಮತ್ತು ಅಮೆರಿಕದ ನಂತರ ಭಾರತ 1 ಕೋಟಿ ಪಾಸ್​ಪೋರ್ಟ್ ಅರ್ಜಿಗಳನ್ನು ವಿಲೇವಾರಿ ಮಾಡುವ ಮೂಲಕ ಪಾಸ್​ಪೋರ್ಟ್ ವಿಲೇವಾರಿಯಲ್ಲಿ 3ನೇ ಸ್ಥಾನದಲ್ಲಿದೆ. 2014ರ ಜನವರಿ ಇಂದ ಡಿಸೆಂಬರ್​ವರೆಗೆ ಪಾಸ್​ಪೋರ್ಟ್ ಮತ್ತು ಪಾಸ್​ಪೋರ್ಟ್ ಸಂಬಂಧಿ 1.01 ಕೋಟಿ ಅರ್ಜಿಗಳನ್ನು ವಿದೇಶಾಂಗ ಇಲಾಖೆ ವಿಲೇವಾರಿ ಮಾಡಿದೆ.

ಇ ಪಾಸ್ ಪೋರ್ಟ್ ಗೆ ಬೇಡಿಕೆ: 2013ನೇ ವರ್ಷಕ್ಕೆ ಹೋಲಿಸಿದರೆ 2014ರಲ್ಲಿ ಪಾಸ್​ಪೋರ್ಟ್ ವಿತರಣೆಯಲ್ಲಿ 15 ರಿಂದ 20% ಹೆಚ್ಚಳವಾಗಿದೆ. ಜತೆಗೆ ಪಾಸ್​ಪೋರ್ಟ್ ವಿತರಣೆಯಿಂದ ಸರ್ಕಾರಕ್ಕೆ 2000 ಕೋಟಿ ಆದಾಯ ಬಂದಿದೆ.

ಏನು ಪ್ರಯೋಜನ: ಪಾಸ್ ಪೋರ್ಟ್ ದುರ್ಬಳಕೆ, ನಕಲಿ ಪಾಸ್ ಪೋರ್ಟ್ ಬಳಕೆ ತಡೆಗಟ್ಟಬಹುದು. ಒಮ್ಮೆ ಚಿಪ್ ಗೆ ದಾಖಲಾದ ಮಾಹಿತಿ ಅಳಿಸಲು ಆಗುವುದಿಲ್ಲ. ಚಿಪ್ ನಲ್ಲಿರುವ ಮಾಹಿತಿಯನ್ನು ನಿಮ್ಮ ಗಮನಕ್ಕೆ ಬಾರದೆ ಬೇರೆಯೊಬ್ಬರು ಓದಲು ಬರುವುದಿಲ್ಲ. ಪಾಸ್ ಪೋರ್ಟ್ ಪುಟದಲ್ಲಿರುವ ಮಾಹಿತಿಯನ್ನೇ ಇ ಪಾಸ್ ಪೋರ್ಟ್ ನಲ್ಲೂ ದಾಖಲಿಸಿರುವುದರಿಂದ ಈ ಬಗ್ಗೆ ಹೆಚ್ಚಿನ ಅತಂಕ ಬೇಡ.

ನನ್ನ ಬಳಿ ಪಾಸ್ ಪೋರ್ಟ್ ಇದೆ. ಇ ಪಾಸ್ ಪೋರ್ಟ್ ಪಡೆಯುವುದು ಹೇಗೆ?
ಪಾಸ್ ಪೋರ್ಟ್ ಪರಿಷ್ಕರಣೆಗಾಗಿ ಸರಳ ಅರ್ಜಿ ಭರ್ತಿ ಮಾಡಿ ಚಾಲ್ತಿಯಲ್ಲಿರುವ ಪಾಸ್ ಪೋರ್ಟ್ ಬದಲಿಗೆ ಇ ಪಾಸ್ ಪೋರ್ಟ್ ಬಳಸುವುದರ ಬಗ್ಗೆ ಮನವಿ ಸಲ್ಲಿಸಬಹುದು. ಹಾಲಿ ಪಾಸ್ ಪೋರ್ಟ್ 12 ತಿಂಗಳುಗಳ ಕಾಲ ಅವಧಿ ಹೊಂದಿದ್ದರೆ ಬಾಕಿ ಮೊತ್ತವನ್ನು ಪಾವತಿಸಿ ಇ ಪಾಸ್ ಪೋರ್ಟ್ ಪಡೆದುಕೊಳ್ಳಬಹುದು. ಅದರೆ, ಬಳಕೆ ಮಾಡುತ್ತಿರುವ ಪಾಸ್ ಪೋರ್ಟ್ ಅನ್ನು ಬದಲಿಸಲೇಬೇಕಾದ ಯಾವುದೇ ನಿಯಮವಿಲ್ಲ.

English summary
The new age e-passports are expected to be rolled out in the country by 2016, a top official said. An ePassport is also known as a biometric passport. It looks like a traditional passport book, but it contains an electronic chip that is encoded with the same information found on page 2 of the passport.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X