ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಯಲಲಿತಾ ವಿರುದ್ಧದ ಅಕ್ರಮ ಆಸ್ತಿ ಪ್ರಕರಣದ ಕಥೆ ಏನು?

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ದಿವಂಗತ ಜೆ. ಜಯಲಲಿತಾ ಅವರ ಮೇಲಿನ ಅಕ್ರಮ ಆಸ್ತಿ ಗಳಿಕೆ ಪ್ರಕರಣ ಇನ್ನೂ ಜೀವಂತವಾಗಿದೆ. ಜಯಾ ಅವರು ಅನಾರೋಗ್ಯ ಪೀಡಿತರಾಗಿ ಅಪೋಲೋ ಆಸ್ಪತ್ರೆ ಸೇರಿದವರು ಇಹಲೋಕ ವ್ಯಾಪಾರ ಮುಗಿಸಿದ್ದಾರೆ.ಮುಂದೇನು?

By ವಿಕಾಸ್ ನಂಜಪ್ಪ
|
Google Oneindia Kannada News

ಚೆನ್ನೈ, ಡಿಸೆಂಬರ್ 06: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ದಿವಂಗತ ಜೆ. ಜಯಲಲಿತಾ ಅವರ ಮೇಲಿನ ಅಕ್ರಮ ಆಸ್ತಿ ಗಳಿಕೆ ಪ್ರಕರಣ ಇನ್ನೂ ಜೀವಂತವಾಗಿದೆ.[ಜಯಲಲಿತಾ ಅಪರೂಪದ ಚಿತ್ರಗಳು]

ದಸರಾ ರಜೆ ಮುಗಿದ ಬಳಿಕ ಅಕ್ಟೋಬರ್ 15ರಿಂದ ಈ ಪ್ರಕರಣದ ವಿಚಾರಣೆ, ತೀರ್ಪು ಹೊರಬೀಳಬೇಕಿತ್ತು. ಕಾರಣಾಂತರದಿಂದ ಮುಂದೂಡಲ್ಪಟ್ಟಿದೆ. ಈ ವೇಳೆಗಾಗಲೇ ಜಯಾ ಅವರು ಅನಾರೋಗ್ಯ ಪೀಡಿತರಾಗಿ ಅಪೋಲೋ ಆಸ್ಪತ್ರೆ ಸೇರಿದವರು ಇಹಲೋಕ ವ್ಯಾಪಾರ ಮುಗಿಸಿದ್ದಾರೆ. [ಜಯಲಲಿತಾ ಅಕ್ರಮ ಆಸ್ತಿ ಗಳಿಕೆ ಪ್ರಕರಣ : ಟೈಮ್ ಲೈನ್]

ತಮಿಳುನಾಡಿನ ಜನತೆ ಪಾಲಿಗೆ 'ಅಮ್ಮ' ಜೆ. ಜಯಲಲಿತಾ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಅಕ್ರಮ ಆಸ್ತಿ ಗಳಿಕೆ ಮಾಡಿದ್ದು ಸಾಬೀತಾಗಿ ಅಪರಾಧಿ ಎನಿಸಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿದ್ದು ನೆನಪಿರಬಹುದು. ನಂತರ ಜಾಮೀನು ಪಡೆದು ಚೆನ್ನೈ ತೆರಳಿ ಮತ್ತೊಮ್ಮೆ ಸಿಎಂ ಆಗಿ ಅಧಿಕಾರ ಮುಂದುವರೆಸಿದ್ದರು.

What happens to the disproportionate assets case against Jayalalithaa?

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೆ ಜಯಲಿತಾ ಅವರಿಗೆ ಜಾಮೀನು ಸಿಕ್ಕಿರುವುದನ್ನು ಪ್ರಶ್ನಿಸಿ ಕರ್ನಾಟಕ ಅರ್ಜಿ ಸಲ್ಲಿಸಿದೆ. ಜೆ ಜಯಲಲಿತಾ, ಶಶಿಕಲಾ ನಟರಾಜನ್, ಇಳವರಸಿ ಹಾಗೂ ಸುಧಾಕರಣ್ ಅವರನ್ನು ಅಪರಾಧಿ ಎಂದು ಕೆಳಹಂತದ ನ್ಯಾಯಲಯ ಘೋಷಿಸಿದೆ. ಈ ಬಗ್ಗೆ ಹೈಕೋರ್ಟಿನಲ್ಲಿ ಅಪೀಲ್ ಹಾಕಿದ ಬಳಿಕ ಎಲ್ಲರಿಗೂ ನೆಮ್ಮದಿ ಸಿಕ್ಕಿತ್ತು. ಈಗ ಪ್ರಕರಣ ಸುಪ್ರೀಂಕೋರ್ಟಿನಲ್ಲಿದ್ದು ,ತೀರ್ಪು ಹೊರ ಬೀಳಬೇಕಿದೆ. ಈಗ ಜಯಾ ಅವರು ಮೃತಪಟ್ಟಿರುವುದರಿಂದ ಕೇಸಿನ ಕತೆ ಏನಾಗುತ್ತದೆ?

ಒಂದು ವೇಳೆ ಈ ಪ್ರಕರಣದಲ್ಲಿ ಖುಲಾಸೆಗೊಂಡರೆ ಜಯಾ ಅವರ ವಿರುದ್ಧ ಯಾವುದೇ ಕ್ರಮ ಜರುಗಿಸಲಾಗುವುದಿಲ್ಲ. ಕೆಳಹಂತದ ನ್ಯಾಯಾಲಯದ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದರೆ ಮಾತ್ರ ಈ ಪ್ರಶ್ನೆ ಏಳುತ್ತದೆ.

ಈ ಪ್ರಕರಣದಲ್ಲಿ ಅಪರಾಧಿ ಎಂದು ಘೋಷಿತವಾದರೆ ಅಕ್ರಮವಾಗಿ ಗಳಿಸಿದ ಆಸ್ತಿ ಎಲ್ಲವನ್ನು ಜಪ್ತಿ ಮಾಡಿ ಸರ್ಕಾರದ ಬೊಕ್ಕಸಕ್ಕೆ ಸೇರಿಸಲಾಗುತ್ತದೆ. ಮಿಕ್ಕ ಆರೋಪಿಗಳ ವಿರುದ್ಧ ಶಿಕ್ಷೆ ಪ್ರಮಾಣ ಪ್ರಕಟಿಸಲಾಗುತ್ತದೆ.

ತಮಿಳುನಾಡಿನ ಮುಖ್ಯಮಂತ್ರಿ ಜೆ ಜಯಲಲಿತಾ ಅವರು ಡಿಸೆಂಬರ್ 05 (ಸೋಮವಾರ) ರಾತ್ರಿ 11.30ರ ವೇಳೆಗೆ ಅಪೋಲೋ ಆಸ್ಪತ್ರೆಯಲ್ಲಿ ನಿಧನರಾದರು.(ಒನ್ಇಂಡಿಯಾ ಸುದ್ದಿ)

English summary
J Jayalalithaa passed away last night at the Apollo hospital. While there is outpouring of grief across the state of Tamil Nadu, one also needs to understand that her death came during the pendency of the appeal against her and three others in the disproportionate assets case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X