ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದ ಕರಾವಳಿ, ಉತ್ತರ ಭಾರತದಲ್ಲಿ ಭಾರೀ ಮಳೆ ಎಚ್ಚರಿಕೆ

By Madhusoodhan
|
Google Oneindia Kannada News

ನವದೆಹಲಿ, ಸೆಪ್ಟೆಂಬರ್, 03: ಕರ್ನಾಟಕದ ಕರಾವಳಿ ಸೇರಿದಂತೆ ಉತ್ತರ ಭಾರತದ ಹಿಮಾಲಯದ ತಪ್ಪಲು, ಪಶ್ಚಿಮ ಬಂಗಾಳ, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶದಲ್ಲಿ ಮುಂದಿನ 5 ದಿನ(ಸೆಪ್ಟೆಂಬರ್ 4 ರಿಂದ 8) ಭಾರೀ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ವರದಿ ನೀಡಿದೆ.

ಬಿಹಾರ, ಒರಿಸ್ಸಾ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮೀಜೊರಾಂ, ತ್ರಿಪುರಾದಲ್ಲೂ ವರುಣ ಆರ್ಭಟಿಸಲಿದ್ದಾನೆ. ಸಮುದ್ರ ತೀರದಲ್ಲಿ ಬೀಸುತ್ತಿರುವ ಗಾಳಿಯ ವೇಗ ಹೆಚ್ಚಾಗಿದ್ದು ಮಳೆ ತರುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.[ಜಾನ್ ಕೆರಿಗೆ ಟ್ರಾಫಿಕ್ ನರಕ ತೋರಿಸಿದ ದೆಹಲಿ ಮಳೆ]

rain

ಕಳೆದ ವಾರ ಸಹ ನವದೆಹಲಿ, ಗುರು ಗ್ರಾಮ ಪ್ರದೇಶಲ್ಲಿ ಭಾರೀ ಮಳೆಯಾಗಿತ್ತು. ನವದೆಹಲಿಯಲ್ಲಿ ಜನ ಜೀವನ ಅಸ್ತವ್ಯಸ್ಥವಾಗಿ ರೈಲು ಸಂಚಾರವನ್ನು ಬಂದ್ ಮಾಡಲಾಗಿತ್ತು.[93 ಅಡಿಗೆ ಕುಸಿದ ಕೆಆರ್‍ಎಸ್ ನೀರಿನ ಮಟ್ಟ: ಆತಂಕ ಶುರು]

ಸಮುದ್ರಲ್ಲಿ ಉಂಟಾಗಿರುವ ಮೇಲ್ಮೈ ಗಾಳಿ ಮಹಾರಾಷ್ಟ್ರ ಸಮುದ್ರ ತೀರದಿಂದ ಕೇರಳ ತೀರದ ಕಡೆಗೆ ವೇಗವಾಗಿ ಬೀಸುತ್ತಿದ್ದು ಚಂಡಮಾರುತದ ರೀತಿ ಅಕ್ಕಪಕ್ಕದ ಪ್ರದೇಶದಲ್ಲಿ ಭಾರೀ ಮಳೆ ತರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

English summary
Heavy to very heavy rain likely over Coastal Karnataka, Sub-Himalayan, West Bengal, Sikkim and Arunachal Pradesh for upcoming 5 days(September 04 to 08) Indian Metrological Department informed. Southwest monsoon was vigorous over Arunachal Pradesh and active over Himachal Pradesh, Assam & Meghalaya and Sub­Himalayan West Bengal & Sikkim.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X