ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಠಾಣ್ ಕೋಟ್ ದಾಳಿ : ಪ್ರಧಾನಿ ಕಚೇರಿಯಿಂದ ಪಾಕ್‌ಗೆ ಪತ್ರ

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಜನವರಿ 16 : ಪಠಾಣ್ ಕೋಟ್ ವಾಯುನೆಲೆ ಮೇಲಿನ ದಾಳಿಗೆ ಸಂಬಂಧಿಸಿದಂತೆ ಬಂಧಿಸಿದವರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳನ್ನು ನೀಡುವಂತೆ ಭಾರತ ಪಾಕಿಸ್ತಾನಕ್ಕೆ ಮನವಿ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿಯಿಂದಲೇ ಈ ಕುರಿತ ಸಂದೇಶ ಪಾಕ್‌ಗೆ ರವಾನೆಯಾಗಿದೆ.

ಪಾಕಿಸ್ತಾನದ ಜೊತೆಗಿನ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಮಾತುಕತೆಯನ್ನು ಭಾರತ ಮುಂದೂಡಿದೆ. ಪಠಾಣ್ ಕೋಟ್ ದಾಳಿ ಸಂಚುಕೋರರ ವಿರುದ್ಧ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ನಿಖರವಾದ ಮಾಹಿತಿ ಲಭ್ಯವಾಗುವ ತನಕ ಮಾತುಕತೆ ನಡೆಸುವುದಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ. [ಮಸೂದ್ ಬಂಧನ : ಪಾಕಿಸ್ತಾನದ ಕಣ್ಣಾಮುಚ್ಚಾಲೆ!]

modi

ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿಯಿಂದ ಪಾಕ್‌ಗೆ ರವಾನೆಯಾಗಿರುವ ಸಂದೇಶದಲ್ಲಿ ನಾವು ನಿಮ್ಮನ್ನು ನಂಬುತ್ತೇವೆ. ಆದರೆ, ನಾವು ಪರೀಶೀಲನೆ ನಡೆಸುವ ಅಗತ್ಯವಿದೆ. ದಾಳಿಯ ಸಂಚುಕೋರರ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಅನ್ನು ನೀಡುವಂತೆ ಭಾರತ ಸಂದೇಶದಲ್ಲಿ ತಿಳಿಸಿದೆ. [ಪಠಾಣ್ ಕೋಟ್ : ಉಗ್ರರು ಕರೆ ಮಾಡಿದ 3 ನಂಬರ್ ಪಾಕಿಸ್ತಾನದ್ದು]

ಮಾತುಕತೆ ನಿಖರತೆ ಮೇಲೆ ನಿಂತಿದೆ : ಭಾರತ ಮತ್ತು ಪಾಕಿಸ್ತಾನದ ನಡುವಿನ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಸಭೆ ಪಾಕಿಸ್ತಾನ ನೀಡುವ ಸಾಕ್ಷಿಗಳ ಆಧಾರದ ಮೇಲೆ ನಿರ್ಧಾರವಾಗಲಿದೆ. ಈಗಾಗಲೇ ದಾಳಿಯ ಸಂಚುಕೋರರ ವಿರುದ್ಧ ತೆಗೆದುಕೊಳ್ಳುವ ಕ್ರಮಗಳು ತೃಪ್ತಿದಾಯಕವಾಗಿರಬೇಕು ಎಂದು ಭಾರತ ಸ್ಪಷ್ಟಪಡಿಸಿದೆ.

ದಾಳಿಯ ಸಂಚುಕೋರರ ವಿರುದ್ಧ ಪಾಕ್ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ತಕ್ಷಣಕ್ಕೆ ಹೇಳುವುದು ಕಷ್ಟ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜತ್ ಡೋವಲ್ ಅವರು ಪಾಕ್ ಜೊತೆ ನಿರಂತರ ಸಂಪರ್ಕದಲ್ಲಿದ್ದು, ತನಿಖೆಯ ಬಗ್ಗೆ ಮಾಹಿತಿಗಳನ್ನು ಸಂಗ್ರಹಣೆ ಮಾಡಲಿದ್ದಾರೆ. ತನಿಖೆ ಪೂರ್ಣಗೊಂಡ ಬಳಿಕ ಪಾಕ್ ವರದಿಯನ್ನು ಭಾರತಕ್ಕೆ ಸಲ್ಲಿಸಲಿದೆ.

English summary
India has asked Pakistan to provide copies of the first information reports and also the provisions under which the Jaish-e-Mohammad militants have been booked in connection with the Pathankot attack. The message from the Prime Minister's office.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X