ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಸ್‌ಪೋರ್ಟ್ ಪಡೆಯಲು 4 ದಾಖಲೆಗಳು ಸಾಕೇ ಸಾಕು

|
Google Oneindia Kannada News

ನವದೆಹಲಿ, ಜನವರಿ, 28: ಕೇಂದ್ರ ಸರ್ಕಾರ ಪಾಸ್ ಪೋರ್ಟ್ ನೀಡಿಕೆಯನ್ನು ಸರಳ ಮಾಡಿದೆ. ಸ್ವತಃ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್ ಮಾಡುವ ಮೂಲಕ ಯಾವ ಯಾವ ದಾಖಲೆಗಳನ್ನು ನೀಡಿದರೆ ಸಾಕು ಎಂದು ತಿಳಿಸಿದ್ದಾರೆ. ಇನ್ನು ಮುಂದಾದರೂ ಜನ ಪಾಸ್ ಪೋರ್ಟ್ ಕಚೇರಿ ಮತ್ತು ಅಧಿಕಾರಿಗಳ ಮೇಲೆ ಹಿಡಿಶಾಪ ಹಾಕುವುದು ತಪ್ಪುವುದೇ?

ಹಾಗಾದರೆ ನಿಮಗೆ ಪಾಸ್ ಪೋರ್ಟ್ ಅಗತ್ಯವಿದೆ ಎಂದಾದಲ್ಲಿ ಯಾವ ದಾಖಲೆಗಳನ್ನು ಸಲ್ಲಿಸಬೇಕು? ಅದು ಯಾವ ಮಾದರಿಯಲ್ಲಿ ಇರಬೇಕು ಎಂಬುದಕ್ಕೆ ಉತ್ತರ ಇಲ್ಲಿದೆ.[10 ದಿನದಲ್ಲಿ ಪಾಸ್ ಪೋರ್ಟ್ ಪಡೆಯುವುದು ಹೇಗೆ]

ಈ ಮೊದಲು ಇದ್ದ ಸೂತ್ರದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದ್ದು ಸಾಮಾನ್ಯ ಬಗೆಯ ಪಾಸ್ ಪೋರ್ಟ್ ಸುಲಭವಾಗಿ ಪಡೆದುಕೊಳ್ಳಬಹುದು. ಪಾಸ್ ಪೋರ್ಟ್ ಪಡೆದುಕೊಂಡ ನಂತರವಷ್ಟೇ ಪೊಲೀಸ್ ವೆರಿಫಿಕೇಶನ್.[ಆಧಾರ್ ಕಾರ್ಡ್ ಮಾಡಿಸುವುದು ಹೇಗೆ?]

ಅಭ್ಯರ್ಥಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ 10 ದಿನಗಳಲ್ಲಿ ಪಾಸ್ ಪೋರ್ಟ್ ಪಡೆಯಲು ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿತ್ತು. ಅರ್ಜಿ ಸಲ್ಲಿಸಿ 3 ದಿನಗಳೊಳಗಾಗಿ ಅಭ್ಯರ್ಥಿಗೆ ಸಚಿವಾಲಯದೊಂದಿಗೆ ಮಾತನಾಡಲು ಅವಕಾಶ ದೊರೆಯುತ್ತದೆ. ಉಳಿದ 7 ದಿನಗಳಲ್ಲಿ ಪಾಸ್ ಪೋರ್ಟ್ ಕೈ ಸೇರುತ್ತದೆ ಎಂದು ತಿಳಿಸಿತ್ತು. ಇದೀಗ ಪೊಲೀಸ್ ವೆರಿಫಿಕೇಶನ್ ಕ್ರಮವನ್ನು ಸರಳ ಮಾಡಿದ್ದು ಯಾವ ದಾಖಲೆಗಳನ್ನು ಸಲ್ಲಿಕೆ ಮಾಡಬೇಕು ಎಂದು ನೋಡಿಕೊಂಡು ಬರೋಣ...

ಆಧಾರ್ ಕಾರ್ಡ್

ಆಧಾರ್ ಕಾರ್ಡ್

ಪಾಸ್ ಪೋರ್ಟ್ ಪಡೆಯಲು ನೀವು ಅರ್ಜಿಯೊಂದಿಗೆ ಆಧಾರ್ ಕಾರ್ಡ್ ಪ್ರತಿ ಸಲ್ಲಿಕೆ ಮಾಡಬೇಕಾಗುತ್ತದೆ. ನಿಮ್ಮ ಆಧಾರ್ ಕಾರ್ಡ್ ಆನ್ ಲೈನ್ ನಲ್ಲಿ ನೋಂದಣಿಯಾಗಿರಬೇಕು. ಆಧಾರ್ ನೆರವಿನಲ್ಲೇ ನಿಮ್ಮ ಎಲ್ಲ ವಿವರಗಳನ್ನು ಇಲಾಖೆ ಪಡೆದುಕೊಳ್ಳುತ್ತದೆ.

ಮತದಾರರ ಗುರುತಿನ ಚೀಟಿ

ಮತದಾರರ ಗುರುತಿನ ಚೀಟಿ

ಮತದಾರರ ಗುರುತಿನ ಚೀಟಿ ಅಥವಾ ಓಟರ್ ಐಡಿಯನ್ನು ಸಹ ಸಲ್ಲಕೆ ಮಾಡಬೇಕಾಗುತ್ತದೆ. ನಿಮ್ಮ ವಿಳಾಸ ದೃಢೀಕರಣಕ್ಕೆ ಇದು ನೆರವು ನೀಡುತ್ತದೆ.

ಪಾನ್ ಕಾರ್ಡ್

ಪಾನ್ ಕಾರ್ಡ್

ಆದಾಯದ ಸಂಪೂರ್ಣ ವಿವರ ನೀಡುವ ಪಾನ್ ಕಾರ್ಡ್ ಮಾಹಿತಿಯನ್ನು ಅರ್ಜಿಯೊಂದಿಗೆ ನೀಡಬೇಕು,. ನಿಮ್ಮ ಆದಾಯ ಮತ್ತು ಬ್ಯಾಂಕ್ ವ್ಯವಹಾರಗಳನ್ನು ಇದೇ ಆಧಾರದಲ್ಲಿ ತಿಳಿದುಕೊಳ್ಳಲಾಗುತ್ತದೆ.

ಅಫಿಡವಿಟ್

ಅಫಿಡವಿಟ್

ನನ್ನ ಮೇಲೆ ಯಾವುದೇ ಕ್ರಿಮಿನಲ್ ಕೇಸು ಬಾಕಿ ಇಲ್ಲ ಎಂದು ಅಫಿಡವಿಟ್ ವೊಂದನ್ನು ನೀಡಬೇಕಾಗುತ್ತದೆ. ನಿಮ್ಮ ಆಧಾರ್ ಸಂಖ್ಯೆ ಆನ್ ಲೈನ್ ನಲ್ಲಿ ಸರಿಯಾಗಿ ನಮೂದಾಗಿದ್ದರೆ ಪೊಲೀಸರ ಪರಿಶೀಲನೆ ನಂತರ ಅಫಿಡವಿಟ್ ನ್ನು ಆದ್ಯತೆ ಮೇರೆಗೆ ಪರಿಶೀಲನೆ ಮಾಡಲಾಗುತ್ತದೆ.

ಸುಷ್ಮಾ ಸ್ವರಾಜ್ ಟ್ವೀಟ್

ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಪಾಸ್ ಪೋರ್ಟ್ ನೀತಿ ಬದಲಾವಣೆ ಬಗ್ಗೆ ಟ್ವೀಟ್ ಮಾಡಿದ್ದಾರೆ. ಯಾವ ಯಾವ ದಾಖಲೆ ನೀಡಬೇಕು ಎಂದು ಒಂದೇ ಸಾಲಿನಲ್ಲಿ ವಿವರಿಸಿದ್ದಾರೆ.

English summary
This will definitely bring big smile on the face of people who want tomake passport without any hassle. Reportedly, now onwards the policeverification for the passport will be done once the document is issuedto you. The Government on Monday announced the move which is apparentlyaimed to make whole process faster and hassle free. But there is acondition attached to it. Here is the list of 4 documents.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X