ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳದ ವಯನಾಡು, ಕೊಲ್ಕೊತ್ತಾದಲ್ಲೂ ರಾನ್ಸಮ್ವೇರ್ ದಾಳಿ

ಸಿಸ್ಟಂ ತೆರೆಯುತ್ತಿದ್ದಂತೆ "ನಿಮ್ಮ ಸಿಸ್ಟಂನ ಎಲ್ಲಾ ಮಾಹಿತಿಗಳು ಎನ್ಕ್ರಿಪ್ಟ್ ಆಗಿವೆ," ಎಂದು ಇಂಗ್ಲೀಷ್ ನಲ್ಲಿ ಕಾಣಿಸಿಕೊಳ್ಳುತ್ತಿದೆ. ಇನ್ನೊಂದು ಬದಿಯಲ್ಲಿ ಹ್ಯಾಕ್ ಮಾಡಿದಾತ ಸೇವೆ ಪುನರಾರಂಭಿಸಲು ಹಣದ ಬೇಡಿಕೆ ಇಟ್ಟಿರುವುದು ಕಾಣಿಸುತ್ತಿದ

By ವಿಕಾಸ್ ನಂಜಪ್ಪ
|
Google Oneindia Kannada News

ತಿರವನಂತಪುರಂ, ಮೇ 15: ವಾನ್ನಕ್ರೈ ರಾನ್ಸಮ್ವೇರ್ ದಾಳಿ ಗ್ರಾಮ ಗ್ರಾಮಗಳಿಗೂ ವ್ಯಾಪಿಸುತ್ತಿದೆ. ಕೇರಳ ಗ್ರಾಮ ಪಂಚಾಯಿತಿಯ 4 ಕಂಪ್ಯೂಟರ್ ಗಳು ರಾನ್ಸಮ್ವೇರ್ ದಾಳಿಗೆ ಗುರಿಯಾಗಿವೆ. ವಯನಾಟು ವ್ಯಾಪ್ತಿಯ ಪಂಚಾಯಿತಿಯಲ್ಲಿ ಈ ದಾಳಿ ನಡೆದಿದೆ.

ಸ್ಥಳಕ್ಕೆ ಪೊಲೀಸರು ಮತ್ತು ಸೈಬರ್ ತಜ್ಞರ ತಂಡವೊಂದು ಆಗಮಿಸಿದ್ದು ಪರಿಸ್ಥಿತಿಯನ್ನು ಅವಲೋಕಿಸುತ್ತಿದೆ. ಇನ್ನು ಪತನಂತಿಟ್ಟಕ್ಕೆ ಸೇರಿದ ಅರುವಪ್ಪಲಂ ಗ್ರಾಮ ಪಂಚಾಯತ್ ಕಂಪ್ಯೂಟರ್ ಮೇಲೆಯೂ ರಾನ್ಸಮ್ವೇರ್ ದಾಳಿ ನಡೆದಿದೆ.[ಸೈಬರ್ ದಾಳಿ 'ರಾನ್ಸಮ್ವೇರ್'ನಿಂದ ತಪ್ಪಿಸಿಕೊಳ್ಳುವುದು ಹೇಗೆ?]

ಇನ್ನು ಕೊಲ್ಕೊತ್ತಾದ ರಾಜ್ಯ ವಿದ್ಯುತ್ ಸರಬರಾಜು ಕಂಪೆನಿಯ ವೆಬ್ಸೈಟಿಗೂ ರಾನ್ಸಮ್ವೇರ್ ದಾಳಿ ನಡೆದಿದ್ದು ವರದಿಯಾಗಿದೆ. ಪಶ್ಚಿಮ ಮಿಡ್ನಾಪುರ್ ನಲ್ಲಿ ಈ ದಾಳಿ ನಡೆದಿದೆ.

ಸಿಸ್ಟಂ ತೆರೆಯುತ್ತಿದ್ದಂತೆ "ನಿಮ್ಮ ಸಿಸ್ಟಂನ ಎಲ್ಲಾ ಮಾಹಿತಿಗಳು ಎನ್ಕ್ರಿಪ್ಟ್ ಆಗಿವೆ," ಎಂಬ ಮಾಹಿತಿ ಇಂಗ್ಲೀಷ್ ನಲ್ಲಿ ಕಾಣಿಸಿಕೊಳ್ಳುತ್ತಿದೆ. ಪರದೆಯ ಇನ್ನೊಂದು ಬದಿಯಲ್ಲಿ ಹ್ಯಾಕ್ ಮಾಡಿದಾತ ಸೇವೆ ಪುನರಾರಂಭಿಸಲು ಇಷ್ಟು ದುಡ್ಡು ಕೊಡಿ ಎಂದು ಹಣಕ್ಕೆ ಬೇಡಿಕೆ ಇಟ್ಟಿರುವುದು ಕಾಣಿಸುತ್ತಿದೆ.

ಮಾತ್ರವಲ್ಲ ಹಣ ಪಾವತಿ ಮಾಡದಿದ್ದಲ್ಲಿ ನಿಮ್ಮ ಎಲ್ಲಾ ಫೈಲ್ ಗಳು ಡಿಲೀಟ್ ಆಗಲಿದೆ ಎಮದು ಬೆದರಿಕೆಯ್ನನೂ ಹಾಕಲಾಗಿದೆ.[ರಾನ್ಸಮ್ವೇರ್ ಸೈಬರ್ ದಾಳಿಗೆ ತುತ್ತಾದ ಮೊದಲ ಕನ್ನಡಿಗ ಹಾವೇರಿಯವರು]

ಈಗಾಗಲೇ ವಿಶ್ವದಾದ್ಯಂತ 75 ದೇಶಗಳ ಸುಮಾರು 90,000 ಸಿಸ್ಟಂಗಳು ವಾನ್ನಕ್ರೈ ದಾಳಿಗೆ ಗುರಿಯಾಗಿವೆ. ಈಗಾಗಲೇ ಈ ಸಂಬಂಧ 'ಕೆಂಪು ಬಣ್ಣ'ದ ಎಚ್ಚರಿಕೆಯನ್ನೂ ಕಳುಹಿಸಲಾಗಿದೆ. ಭಾರತದ ಕಂಪ್ಯೂಟರ್ ಎಮರ್ಜೆನ್ಸಿ ಟೀಂ (CERT-In) ಈ ಸಂಬಂಧ ಹೇಳಿಕೆ ನೀಡಿದ್ದು, "ವ್ಯಕ್ತಿಗಳು ಹಾಗೂ ಸಂಸ್ಥೆಗಳು ಹಣ ಪಾವತಿ ಮಾಡುವಂತೆ ನಾವು ಉತ್ತೇಜಿಸುವುದಿಲ್ಲ. ಯಾಕೆಂದರೆ ಫೈಲ್ ಗಳು ಮರಳಿ ಬರುತ್ತವೆ ಎಂಬ ಗ್ಯಾರೆಂಟಿಯಿಲ್ಲ," ಎಂದು ಹೇಳಿದೆ. ಮಾತ್ರವಲ್ಲ ಈ ರೀತಿಯ ಘಟನೆಗಳನ್ನು, ವಂಚನೆಗಳನ್ನು ನಮ್ಮ ಗಮನಕ್ಕೆ ತನ್ನಿ ಎಂದು CERT-In ತಜ್ಞರು ಕೇಳಿಕೊಂಡಿದ್ದಾರೆ.

{promotion-urls}

English summary
Four computers in a panchyat office in Kerala have been suspected to be hit by "WannaCry," the ransomeware. The incident took place at Waynad in Kerala at a panchyat office. The police and the cyber team is on the spot trying to assess the situation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X