ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವ್ಯಾಪಂ ಹಗರಣಕ್ಕೆ ಟ್ರೈನಿ ಮಹಿಳಾ ಎಸ್ ಐ ಬಲಿ

By Mahesh
|
Google Oneindia Kannada News

ಭೋಪಾಲ್, ಜುಲೈ,06: ಮಧ್ಯಪ್ರದೇಶ ವೃತ್ತಿಪರ ಪರೀಕ್ಷಾ ಮಂಡಳಿ (Vyapam) ನೇಮಕಾತಿ ಹಗರಣಕ್ಕೆ ಟ್ರೈನಿ ಮಹಿಳಾ ಪೊಲೀಸ್ ಇನ್ಸ್ ಪೆಕ್ಟರ್ ರೊಬ್ಬರು ಬಲಿಯಾಗಿದ್ದಾರೆ. ಎಂದಿನಂತೆ ಆತ್ಮಹತ್ಯಾ ಪ್ರಕರಣ ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವ್ಯಾಪಂ ಅವ್ಯವಹಾರದಲ್ಲಿ ಸಿಲುಕಿರುವ ರಾಜ್ಯಪಾಲ ರಾಮ್‌ ನರೇಶ್‌ ಯಾದವ್‌ ಅವರ ಪುತ್ರ ಶೈಲೇಶ್ ಅವರು ಲಕ್ನೋದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದರು. ಆನಂತರ ಸುಮಾರು 47ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಅಪಘಾತ, ಹೃದಯಾಘಾತ ಹೀಗೆ ಅನೇಕ ರೀತಿ ಸಾವು ಸಂಭವಿಸಿದೆ. ಸರಣಿ ಸಾವಿನ ಪಟ್ಟಿಗೆ ಮಹಿಳಾ ಎಸ್ ಐ ಟ್ರೈನಿ ಅನಾಮಿಕ ಖುಷ್ವಾಹ್ ಅವರ ಹೆಸರು ಸೋಮವಾರ ಸೇರ್ಪಡೆಗೊಂಡಿದೆ.[ನೇಮಕಾತಿ ಹಗರಣ ಆರೋಪಿ ನಿಗೂಢ ಸಾವು]

ಅನಾಮಿಕಾ ಅವರ ಮೃತದೇಹ ಕೆರೆಯೊಂದರಲ್ಲಿ ಪತ್ತೆಯಾಗಿದ್ದು, ಫೆಬ್ರವರಿ 2015ರಲ್ಲಿ ನೇಮಕವಾಗಿದ್ದ ಈಕೆ ಮಧ್ಯಪ್ರದೇಶದ ಸಾಗರ್ ಪೊಲೀಸ್ ಅಕಾಡೆಮಿಯ ಹಾಸ್ಟೆಲ್ ನಲ್ಲಿ ತಂಗಿದ್ದರು.

Vyapam scam

ಮೂರು ದಿನ ಮೂರು ಸಾವು: ಪತ್ರಕರ್ತ ಅಕ್ಷಯ್ ಸಿಂಗ್ ಅವರು ಶನಿವಾರ ನಿಗೂಢವಾಗಿ ಕೊನೆಯುಸಿರೆಳೆದಿದ್ದರು. ವ್ಯಾಪಂ ಹಗರಣಕ್ಕೆ ಬಲಿಯಾದ ಕುಟುಂಬದ ಸದಸ್ಯರನ್ನು ಸಂದರ್ಶಿಸಲು ಅಕ್ಷಯ್ ತೆರಳಿದ್ದರು ಅದರೆ, ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿ ಬಿದ್ದ ಅಕ್ಷಯ್ ಮತ್ತೆ ಮೇಲೇಳಲಿಲ್ಲ.

ಭಾನುವಾರದಂದು ಜಬಲ್ಪುರದ ಎನ್ ಎಸ್ ಮೆಡಿಕಲ್ ಕಾಲೇಜಿನ ಡೀನ್ ಆಗಿದ್ದ ಅರುಣ್ ಶರ್ಮ ಅವರು ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ಹೋಟೆಲ್ ವೊಂದರಲ್ಲಿ ಶವವಾಗಿ ಪತ್ತೆಯಾಗಿದ್ದರು.

ಮಧ್ಯಪ್ರದೇಶ ಸಿಎಂ ಶಿವರಾಜ್ ಚೌಹಾಣ್ ಅವರು ಈ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ದಳಕ್ಕೆ ವಹಿಸಿದ್ದಾರೆ. ಬಿಜೆಪಿ ಸರ್ಕಾರದ ಕ್ರಮವನ್ನು ಖಂಡಿಸಿರುವ ಕಾಂಗ್ರೆಸ್ ಪಕ್ಷ ಸಿಬಿಐ ತನಿಖೆಗೆ ಆಗ್ರಹಿಸಿದೆ.

ವಿಶೇಷ ತನಿಖಾ ದಳದ ಸದ್ಯದ ತನಿಖೆ ಪ್ರಕಾರ 23 ಜನ ನಿಗೂಢವಾಗಿ ಸಾವನ್ನಪ್ಪಿರುವುದು ದೃಢಪಟ್ಟಿದೆ. ಈ ಪೈಕಿ ಮಾ.25, 2015ರಂದು ಲಕ್ನೋದಲ್ಲಿರುವ ಪೂರ್ವಜರ ಮನೆಯಲ್ಲಿ ಸಾವನ್ನಪ್ಪಿದ್ದ ಶೈಲೇಶ್ ಅವರ ಹೆಸರು ಸೇರಿದೆ.

English summary
Even as the mystery around a series of deaths related to the notorious Vyapam scam in Madhya Pradesh gets murkier, another case of suicide was registered today(July 06).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X