ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರ, ಹರಿಯಾಣ ಮತದಾನ %

By Mahesh
|
Google Oneindia Kannada News

ಮುಂಬೈ, ಅ.15: ಮಹಾರಾಷ್ಟ್ರ ಹಾಗೂ ಹರ್ಯಾಣ ವಿಧಾನಸಭೆ ಚುನಾವಣೆಗೆ ಮತದಾನ ಆರಂಭವಾಗಿದೆ. ಕಾಂಗ್ರೆಸ್, ಬಿಜೆಪಿ, ಶಿವಸೇನೆ, ಎನ್ ಸಿಪಿ, ಎಂಎನ್‍ಎಸ್, ಐಎನ್‍ಎಲ್ ಡಿ ಸೇರಿದಂತೆ ಘಟಾನುಘಟಿ ನಾಯಕರ ಹಣೆಬರಹಗಳು ಮತಪೆಟ್ಟಿಗೆಯಲ್ಲಿ ಭದ್ರವಾಗಲಿವೆ. ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಈ ಚುನಾವಣೆ ಸತ್ವ ಪರೀಕ್ಷೆ ಎನಿಸಿದೆ.

ಮಹಾರಾಷ್ಟದಲ್ಲಿ ಒಟ್ಟು 4,119 ಅಭ್ಯರ್ಥಿಗಳು 288 ಅಸೆಂಬ್ಲಿ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರೆ, ಹರಿಯಾಣದಲ್ಲಿ 1,351 ಅಭ್ಯರ್ಥಿಗಳ 90 ಕ್ಷೇತ್ರಗಳ ಭವಿಷ್ಯ ನಿರ್ಧರಿಸುವ ಮತದಾನ ಚಾಲನೆಯಲ್ಲಿದೆ. ಹರಿಯಾಣದಲ್ಲಿ ಕಾಂಗ್ರೆಸ್​, ಐಎನ್ ​​ಎಲ್ ​ಡಿ, ಬಿಜೆಪಿ ಮಧ್ಯೆ ಪೈಪೋಟಿ ಇದೆ. ಉಭಯ ರಾಜ್ಯಗಳ ಅಸೆಂಬ್ಲಿ ಚುನಾವಣೆ ಫಲಿತಾಂಶ ಅಕ್ಟೋಬರ್ 19ರಂದು ಹೊರಬೀಳಲಿದೆ. ಮತದಾನ ಪ್ರಕ್ರಿಯೆ ಅಪ್ದೇಟ್ಸ್ ಇಲ್ಲಿ ನೋಡಿ...[ಮಹಾರಾಷ್ಟ್ರದಲ್ಲಿ ಚತುಷ್ಕೋನ ಸ್ಪರ್ಧೆ]

18.00: ಹರ್ಯಾಣದಲ್ಲಿ 5 ಗಂಟೆ ವೇಳೆಗೆ ದಾಖಲೆಯ 72% ಮತದಾನ ದಾಖಲಾಗಿದೆ. ಮುಂಬೈನಲ್ಲಿ 47%.
17.15:
ಮಹಾರಾಷ್ಟ್ರದ ಕೊಲಬಾ ಕ್ಷೇತ್ರದಲ್ಲಿ 82 ವರ್ಷ ವಯಸ್ಸಿನ ಮತದಾರರೊಬ್ಬರು #NOTA ಬಟನ್ ಒತ್ತಿದ್ದಾರೆ. ಯಾವೊಬ್ಬ ಅಭ್ಯರ್ಥಿಯೂ ಸರಿ ಇಲ್ಲ ಎಲ್ಲರೂ ಅಪ್ರಯೋಜಕರು, ಅದರೆ, ನನ್ನ ಮತ ವ್ಯರ್ಥವಾಗಬಾರದು ಹಾಗಾಗಿ ನೋಟಾ ಆಯ್ಕೆ ಮಾಡಿಕೊಂಡೆ ಎಂದಿದ್ದಾರೆ. [ಎಕ್ಸಿಟ್ ಪೋಲ್: ಮಹಾರಾಷ್ಟ್ರ, ಹರ್ಯಾಣದಲ್ಲಿ ಕೇಸರಿ ರಂಗು ]

17.00: ಮುಂಬೈನಲ್ಲಿ ಶೇಕಡಾವಾರು ಮತದಾನ ಇಳಿಕೆಯಾಗಿರುವುದು ಪಕ್ಷಗಳಿಗೆ ಆತಂಕ ತಂದಿದೆ. ಮತದಾನ % ಏರಿಕೆಯಾಗದಿದ್ದರೆ ಫಲಿತಾಂಶ ಏರುಪೇರಾಗುವ ಸಾಧ್ಯತೆಯಿರುವುದರಿಂದ ಪಕ್ಷಗಳು ಚಿಂತೆಗೀಡಾಗಿವೆ.

Maharashtra


16.45:
4 ಗಂಟೆ ಹೊತ್ತಿಗೆ ಹರ್ಯಾಣದಲ್ಲಿ 60% ರಷ್ಟು ಮತದಾನವಾಗಿದೆ.

16.30: ನಟ ಶಾರುಖ್ ಖಾನ್, ರಣಬೀರ್ ಕಪೂರ್ ಮತದಾನ ಮಾಡಿದ್ದಾರೆ.
16.00: 3.30 ಸುಮಾರಿಗೆ ಮಹಾರಾಷ್ಟ್ರದಲ್ಲಿ 46% ಹರ್ಯಾಣದಲ್ಲಿ 57.7 % ಮತದಾನವಾಗಿದೆ.


15.55: ನಟ ಬೊಮನ್ ಇರಾನಿ, ಕಲಾವಿದರಾದ ಅನುಪಮ್ ಖೇರ್, ಕಿರಣ್ ಖೇರ್ ಸಾಹಿತಿಗಳಾದ ಗುಲ್ಜಾರ್, ಜಾವೇದ್ ಅಖ್ತರ್ ಅವರು ಮತ ಚಲಾಯಿಸಿದ್ದಾರೆ.
15.30:
3 ಗಂಟೆ ವೇಳೆಗೆ ಮಹಾರಾಷ್ಟ್ರ 45.6%, ಹರ್ಯಾಣ 52.4%

15.00: ಪುಣೆಯಲ್ಲಿ ಮಧ್ಯಾಹ್ನ 1 ಗಂಟೆ ವೇಳೆಗೆ ಶೇ 33.62ರಷ್ಟು ಮತದಾನವಾಗಿದೆ.

14.55:
ಮಹಾ ಚುನಾವಣೆ ಅಂಕಿ ಅಂಶ

14.30: ಜನರು ಮತದಾನದ ದಿನ ರಜೆ ಸಿಕ್ತು ಎಂದು ಖುಷಿಯಿಂದ ಪಿಕ್ನಿಕ್ ಹೋಗುತ್ತಾರೆ ಅದರೆ, ನಂತರ ಸರ್ಕಾರವನ್ನು ದೂರುತ್ತಾರೆ. ಇದರ ಬದಲು ಮತದಾನ ಮಾಡಿ ಎಂದು ಎಎನ್ ಐಗೆ ನಟ ಸಲ್ಮಾನ್ ಖಾನ್ ಪ್ರತಿಕ್ರಿಯಿಸಿದ್ದಾರೆ.

Salman Khan

13.15: ಮುಂಬೈ 13.60%, ಗಡ್ಚಿರೋಲಿ 34%, ಲಾತೂರ್ 22%, ಅಮ್ರಾವತಿ 17%, ಸಾಂಗ್ಲಿ 22%, ಔರಂಗಾಬಾದ್ 21%
13.00:
ಹರ್ಯಾಣದಲ್ಲಿ ಗೋಪಾಲ್ ಕಾಂಡಾ ಹಿಂಬಾಲಕರಿಂದ ಹಿಂಸಾಚಾರ, ಪರಿಸ್ಥಿತಿ ಪ್ರಕ್ಷುಬ್ದ.
Haryana

12.45:
ನಟಿ, ಸಂಸದೆ ಹೇಮಮಾಲಿನಿ, ಪುತ್ರಿ ಇಶಾ ಡಿಯೋಲ್ ರಿಂದ ಮತದಾನ.

12.30:
ಮಹಾರಾಷ್ಟ್ರದಲ್ಲಿ ಮತದಾನ ಶೇಕಡವಾರು ನಕ್ಸಲ್ ಪೀಡಿತ ಪ್ರದೇಶದಲ್ಲೇ ಅಧಿಕ.

11.45:
ಶೇಕಡಾವಾರು ಮತದಾನ ಹೆಚ್ಚಳವಾಗುವ ನಿರೀಕ್ಷೆಯಿದೆ ಎಂದು ಕುಟುಂಬ ಸಮೇತ ಮತದಾನ ಮಾಡಿದ ನಂತರ ಉದ್ಧವ್ ಠಾಕ್ರೆ ಹೇಳಿಕೆ.

11.30:
ನಟ ಡಿನೋ ಮಾರಿಯಾ, ಗಾಯಕ ಶಾನ್ ರಿಂದ ಮುಂಬೈನಲ್ಲಿ ಮತದಾನ
11.25: ಮಹಾರಾಷ್ಟ್ರದಲ್ಲಿ ಔರಾಂಗಬಾದ್ 10%, ಬೀಡ್ 9%, ಸೋಲಾಪುರ 8%, ಕೋಲ್ಹಾಪುರ10%, ಹಿಂಗೋಲಿ 8.5%, ಒಸ್ಮಾನಾಬಾದ್ 9%, ನಾಸಿಕ್ 7%, ಪರ್ಭಾನಿ 7.5%
11.20:
ಎಂಎನ್ ಎಸ್ ಮುಖಂಡ ರಾಜ್ ಠಾಕ್ರೆ ಅವರಿಂದ ಮುಂಬೈನಲ್ಲಿ ಮತದಾನ
11.15: ಬೀಡ್ ನಲ್ಲಿ ಮತ ಚಲಾವಣೆ ಮಾಡಿದ ಗೋಪಿನಾಥ್ ಮುಂಡೆ ಅವರ ಪುತ್ರಿ ಪಂಕಜಾ ಮುಂಡೆ. ನಾನು ಸಿಎಂ ಆಗಬೇಕೆಂದು ಜನರ ಅಪೇಕ್ಷೆ ಇದೆ. ಆದರೆ, ನಾನು ಇನ್ನೂ ಸಿದ್ಧಳಾಗಿಲ್ಲ ಎಂದು ಹೇಳಿಕೆ.

11.10: ನಟ ಮಾಧವನ್ ಹಾಗೂ ಅವರ ಪತ್ನಿ ಮತದಾನದ ನಂತರ ಸೆಲ್ಫಿ ಫೋಟೋ


11.05:
ಮುಂಬೈನಲ್ಲ್ಲಿ 9 ಗಂಟೆ ಸುಮಾರಿಗೆ ಶೇ 7ರಷ್ಟು ಮಾತ್ರ ಮತದಾನ ದಾಖಲಾಗಿದೆ.
11.00:
ಮಾಜಿ ಕ್ರಿಕೆಟರ್ ಸಚಿನ್ ತೆಂಡೂಲ್ಕರ್ ಅವರು ಮತದಾನ ಮಾಡಿದ್ದಾರೆ. ಎಲ್ಲರೂ ಮತದಾನ ಮಾಡಿ ಎಂದು ಕರೆ ನೀಡಿದ್ದಾರೆ.
A village boycotts elections in Haryana(Live Updates)

10.55: ಸಿರ್ಸಾದಲ್ಲಿ ಬಿಜೆಪಿ ಅಭ್ಯರ್ಥಿ ಸುನೀತಾ ಅವರ ಕುಟುಂಬ ಗುಂಪು ಘರ್ಷಣೆಯಿಂದ ಸ್ವಲ್ಪದರಲ್ಲೇ ಪಾರು.

10.50: ಹರ್ಯಾಣದ ಹಿಸ್ಸಾರ್ ನ ಬಸಗಾಂವ್ ನಂತರ ಸಿರ್ಸಾದಲ್ಲೂ ಮುಂದುವರೆದ ಐಎನ್ ಎಲ್ ಡಿ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ. ಪೊಲೀಸರಿಂದ ಗಾಳಿಯಲ್ಲಿ ಗುಂಡು ಓರ್ವ ಕಾರ್ಯಕರ್ತನಿಗೆ ಗಾಯ.

10.15: ಮೈನೇ ಪ್ಯಾರ್ ಕಿಯಾ ಖ್ಯಾತಿಯ ನಟಿ ಭಾಗ್ಯಶ್ರೀ ಅವರಿಂದ ಮತ ದಾನ

10.15: ಮೈನೇ ಪ್ಯಾರ್ ಕಿಯಾ ಖ್ಯಾತಿಯ ನಟಿ ಭಾಗ್ಯಶ್ರೀ ಅವರಿಂದ ಮತ ದಾನ.

10.10: ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರಿಂದ ಪುಣೆಯಲ್ಲಿ ಮತದಾನ. ಮಹಾರಾಷ್ಟ್ರದಲ್ಲಿ ಬದಲಾವಣೆ ಗಾಳಿ ಬೀಸಿದೆ ಎಂದು ಹೇಳಿಕೆ.

10.05: ಚಹಾವಾಲ ಪ್ರಧಾನಿಯಾಗಬಹುದಾದರೆ ನಾನು ಏಕೆ ಮುಖ್ಯಮಂತ್ರಿಯಾಗಬಾರದು: ಉದ್ಧವ್ ಠಾಕ್ರೆ ಹೇಳಿಕೆ.

9.55: ಉದ್ಯಮಿ ಅನಿಲ್ ಅಂಬಾನಿ ಅವರು ಮುಂಬೈನಲ್ಲಿ ಮತದಾನ ಮಾಡಿದರು.

9.45: ಹರ್ಯಾಣದ ಹಿಸ್ಸಾರ್ ನ ಬಸಗಾಂವ್ ನಲ್ಲಿ ಐಎನ್ ಎಲ್ ಡಿ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ.
9.20:
ನಟ ಅಭಿಷೇಕ್ ಬಚ್ಚನ್ ಕುಟುಂಬ ಸಮೇತ ಬಂದು ಮುಂಬೈನಲ್ಲಿ ಮತದಾನ. ಮತದಾನ ನಮ್ಮೆಲ್ಲರ ಹಕ್ಕು ಎಲ್ಲರೂ ತಪ್ಪದೇ ಮತದಾನ ಮಾಡಿ ಎಂದು ಕರೆ ನೀಡಿದರು.

9.15: ಮಹಾರಾಷ್ಟ್ರದ ಸೋಲಾಪುರದಲ್ಲಿ ಕಾಂಗ್ರೆಸ್ ನಾಯಕ ಸುಶೀಲ್ ಕುಮಾರ್ ಶಿಂಧೆ ಅವರಿಂದ ಮತದಾನ.

9.10: ತರುಣ್ ಭಾರತ್ ಮಾಜಿ ಸಂಪಾದಕ ಎಂಜಿ ವೈದ್ಯ ದಂಪತಿಯಿಂದ ಮತ ಚಲಾವಣೆ

9.01: ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ...

9.00: ಎನ್ ಸಿಪಿ ನಾಯಕ ಶರದ್ ಪವಾರ್ ಪುತ್ರಿ ಕಾಂಗ್ರೆಸ್ ನಾಯಕಿ ಸುಪ್ರಿಯಾ ಸುಳೆ ಮತದಾನದ ನಂತರ ಸೆಲ್ಫಿ ಫೋಟೋ

8.55: ಮುಂಬೈನ ಬಾಂದ್ರಾದಲ್ಲಿ ಮತದಾನ ಮಾಡಿದ ಮೇಲೆ ಪೋಸ್ ಕೊಟ್ಟ ನಟಿ ರೇಖಾ..

8.40: ನಾಗಪುರ ಹಾಗೂ ನಾಸಿಕ್ ನ ತಲಾ ಎರಡು ಬೂತ್ ಗಳಲ್ಲಿ ತಾಂತ್ರಿಕ ಕಾರಣಗಳಿಂದ ಮತಯಂತ್ರ ಕೈಕೊಟ್ಟಿದೆ. ಮತದಾನ ಸ್ಥಗಿತ.

8.35: ಮಹಾರಾಷ್ಟ್ರದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಅಜಿತ್ ಪವಾರ್(ಬರಾಮತಿ), ವಿಪಕ್ಷ ನಾಯಕ ವಿನೋದ್ ತಾವ್ಡೆ(ಮುಂಬೈ), ಗೋಪಿನಾಥ್ ಮುಂಡೆ ಪುತ್ರಿ ಪಂಕಜಾ ಮುಂಡೆ (ಬೀಡ್), ನಟಿ ರೇಖಾ (ಮುಂಬೈ) ಮತದಾನ ಮಾಡಿದ ಪ್ರಮುಖರು.

8.25:

English summary
The two states of Maharashtra and Haryana are witnessing a mega war today (Wednesday, Oct 15). It is believed to be a litmus test for Prime Minister Narendra Modi who spearheaded a high-decibel BJP campaign to wrest power from the opposition.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X