ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಹ್ಲಿ, ವಿಶ್ವ ಕ್ರೀಡಾರಂಗದ ಡೊನಾಲ್ಡ್ ಟ್ರಂಪ್: ಆಸೀಸ್ ಮಾಧ್ಯಮಗಳ ಟೀಕೆ

ಬೆಂಗಳೂರು ಟೆಸ್ಟ್ ಪಂದ್ಯದಲ್ಲಾದ ಡಿಆರ್ ಎಸ್ ವಿವಾದದ ನಂತರ ಕೊಹ್ಲಿ ವಿರುದ್ಧ ಮುಗಿಬೀಳುತ್ತಿರುವ ಆಸ್ಟ್ರೇಲಿಯಾ ಮಾಧ್ಯಮಗಳು.

|
Google Oneindia Kannada News

ನವದೆಹಲಿ, ಮಾರ್ಚ್ 21: ಹಾಲಿ ನಡೆಯುತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಕ್ರಿಕೆಟ್ ಸರಣಿಯು ನಾನಾ ಕಾರಣಗಳಿಗಾಗಿ ವಿವಾದದ ಗೂಡಾಗಿರುವುದು ಎಲ್ಲರಿಗೂ ಗೊತ್ತೇ ಇದೆ.

ಆದರೆ, ಈಗ, ಭಾರತದ ನಾಯಕ ವಿರಾಟ್ ಕೊಹ್ಲಿ ವಿರುದ್ಧ ಆಸ್ಟ್ರೇಲಿಯಾದ ಮಾಧ್ಯಮಗಳು ಮುಗಿಬಿದ್ದಿವೆ. ಕೊಹ್ಲಿಯವರನ್ನು ವಿಶ್ವ ಕ್ರೀಡಾ ರಂಗದ ಡೊನಾಲ್ಡ್ ಟ್ರಂಪ್ ಎಂದು ಟೀಕೆ ಮಾಡಿವೆ.

Virat Kohli Has Become Donald Trump Of World Sport: Australian Media

ಸದ್ಯಕ್ಕೆ ಭಾರತ ಪ್ರವಾಸದಲ್ಲಿರುವ ಆಸ್ಟ್ರೇಲಿಯಾ ತಂಡದ ಸ್ಟೀವನ್ ಸ್ಮಿತ್ ಅವರಿಂದ ಬೆಂಗಳೂರು ಟೆಸ್ಟ್ ಪಂದ್ಯದಲ್ಲಾದ ಡಿಆರ್ ಎಸ್ ವಿವಾದದ ನಂತರ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗರಾದ ಮಿಚೆಲ್ ಜಾನ್ಸನ್, ಇಯಾನ್ ಹೀಲಿ ಸೇರಿದಂತೆ ಅನೇಕರು ಕೊಹ್ಲಿ ವಿರುದ್ಧ ಕಿಡಿ ಕಾರಿದ್ದರು. ಅವರ ಟೀಕೆಗಳಿಗೆ ಆಸೀಸ್ ಮಾಧ್ಯಮಗಳೂ ದೊಡ್ಡ ಪ್ರಚಾರ ನೀಡಿದ್ದವು.

ಹಾಗಾಗಿ, ಭಾರತದ ಮಾಜಿ ಕ್ರಿಕೆಟಿರ್ ಸುನಿಲ್ ಗವಾಸ್ಕರ್ ಹಾಗೂ ಇನ್ನಿತರರು ಆಸ್ಟ್ರೇಲಿಯಾ ಮಾಧ್ಯಮಗಳನ್ನು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮತ್ತೊಂದು ಸಹಾಯಕ ಸಿಬ್ಬಂದಿಯೆಂದು ಟೀಕಿಸಿದ್ದು.

ಈಗ, ಅದೆಲ್ಲಾ ಮುಗಿಯಿತು ಎನ್ನುವಷ್ಟರಲ್ಲಿ ಆಸ್ಟ್ರೇಲಿಯಾ ಮಾಧ್ಯಮಗಳು ಇದೀಗ ಕೊಹ್ಲಿಯನ್ನು ಮತ್ತೆ ಕೆದಕಿವೆ. ಈ ಬಗ್ಗೆ ಮತ್ತೆ ಪ್ರತಿಕ್ರಿಯಿಸಿರುವ ಗವಾಸ್ಕರ್, ''ಆಸೀಸ್ ಮಾಧ್ಯಮಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವ ಅವಶ್ಯಕತೆಯಿಲ್ಲ'' ಎಂದಿದ್ದಾರೆ.

English summary
Indian captain Virat Kohli has found himself at the centre of the battles on and off the field ongoing four-match Test series against Australia. Now, the Australian media has termed him Donald Trump of World Sport, spiking up a new controversy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X