ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈರಲ್ ವಿಡಿಯೋ : ಗಂಡನೆದುರೇ ಮಹಿಳೆಯ ಅಪಹರಣಕ್ಕೆ ಯತ್ನ

By Prasad
|
Google Oneindia Kannada News

ವಾರಣಾಸಿ, ಫೆಬ್ರವರಿ 21 : ಉತ್ತರಪ್ರದೇಶದಲ್ಲಿ ಗೂಂಡಾಗಿರಿ ಯಾವ ಮಟ್ಟ ತಲುಪಿದೆ ಎನ್ನುವುದಕ್ಕೆ ಈ ಆಘಾತಕಾರಿ ವಿಡಿಯೋನೆ ಜ್ವಲಂತ ಸಾಕ್ಷಿ. ಮಹಿಳೆಯೊಬ್ಬರನ್ನು ಗಂಡನೆದುರೇ ಅಪರಹಣ ಮಾಡಲು ಯತ್ನಿಸಿದ ಘಟನೆ ಸಾರ್ವಜನಿಕರನ್ನು ತಲ್ಲಣಗೊಳಿಸಿದೆ.

ದೆಹಲ್ಲಿ ನೆಲೆಸಿರುವ ದಂಪತಿಗಳು ವಾರಣಾಸಿಯಿಂದ ದೆಹಲಿಗೆ ರೈಲಿನ ಎರಡನೇ ದರ್ಜೆಯ ಬೋಗಿಯಲ್ಲಿ ಕುಳಿತಿದ್ದರು. ಆಗ ರೈಲು ಮೂವರು ಯುವಕರು ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಲು ಆರಂಭಿಸಿದರು. ಗಂಡ ಇದನ್ನು ವಿರೋಧಿಸಿದಾಗ ಆತ ಕಪಾಳಕ್ಕೆ ಬಾರಿಸಿದ್ದಾರೆ. ಆ ಯುವ ಮಹಿಳೆ ಮೇಲೂ ಹಲ್ಲೆ ಮಾಡಿದ್ದಾರೆ.

ಇಷ್ಟಕ್ಕೇ ನಿಲ್ಲದೆ ಗಂಡನನ್ನು ಪಕ್ಕಕ್ಕೆ ತಳ್ಳಿ ಮಹಿಳೆಯನ್ನು ಎಳೆದುಕೊಂಡು ರೈಲ್ವೆ ನಿಲ್ದಾಣದ ಹೊರಗಡೆ ನಿಲ್ಲಿಸಿದ್ದ ಸಫಾರಿ ವಾಹನವನ್ನು ಹತ್ತಿದ್ದಾರೆ. ಗಂಡ ಕಾಪಾಡಿ ಕಾಪಾಡಿ ಎಂದು ಕಿರುಚಿಕೊಳ್ಳಲು ಯತ್ನಿಸಿದರೂ ದುರುಳರು ಆಕೆಯನ್ನು ಎಳೆದೊಯ್ದು ವಾಹನದಲ್ಲಿ ಕುಳಿತಿದ್ದಾರೆ. [ಮಲಯಾಳಂ ನಟಿ ಲೈಂಗಿಕ ದೌರ್ಜನ್ಯದ ಹಿಂದೆ ಕಾಣದ ಕೈಗಳ ಸಂಚು?]

Viral Video : Miscreants try to kidnap woman in UP

ಇನ್ನೇನು ಅಲ್ಲಿಂದ ಪರಾರಿಯಾಗಬೇಕು ಎನ್ನುವಷ್ಟರಲ್ಲಿ, ಗಂಡ ಆರ್ತನಾದ ಕೇಳಿ ಸಾರ್ವಜನಿಕರು ವಾಹನವನ್ನು ಸುತ್ತುವರಿದಿದ್ದಾರೆ. ಯುವತಿ ತನ್ನನ್ನು ರಕ್ಷಿಸಬೇಕು ಎಂದು ಕೂಗಿ ಜೋರಾಗಿ ಅಳಲು ಆರಂಭಿಸಿದ್ದಾರೆ. ದುರಾದೃಷ್ಟದ ಸಂಗತಿಯೆಂದರೆ, ಅಲ್ಲಿ ಪೊಲೀಸರು ಇದ್ದರೂ ಏನನ್ನೂ ಮಾಡಿಲ್ಲ.

ಸಾರ್ವಜನಿಕರು ಬಲವಂತದಿಂದ ಮಹಿಳೆಯನ್ನು ವಾಹನದಿಂದ ಹೊರಗೆ ಎಳೆದಿದ್ದಾರೆ. ಆದರೆ, ಆ ದುರುಳರನ್ನು ಏನೂ ಮಾಡಲಾಗಿಲ್ಲ. ಪೊಲೀಸರು ಅಲ್ಲೇ ಇದ್ದರೂ ಎಲ್ಲರೂ ಅಲ್ಲಿಂದ ಪರಾರಿಯಾಗಿದ್ದಾರೆ. [ಹದಿನೈದರ ಬಾಲೆಯನ್ನು ಹೊತ್ತೊಯ್ದು, ಅತ್ಯಾಚಾರವೆಸಗಿ, ಮಾರಿದ ದುರುಳರು]

ಈ ಘಟನೆ ಆಗಿದ್ದು ಫೆಬ್ರವರಿ 7ರಂದು. ಸಂಜೆ 7ರ ಸುಮಾರಿಗೆ ಶಿವಗಂಗಾ ಎಕ್ಸ್ ಪ್ರೆಸ್ ನಲ್ಲಿ ಪಯಣಿಸುತ್ತಿದ್ದರು. ಅಂದು ಈ ಘಟನೆ ನಡೆದಿದೆ. ಆ ದುರುಳರು ಅಲ್ಲಿಂದ ಪರಾರಿಯಾದ ಮೇಲೆ ಪೊಲೀರಸ ಭದ್ರತೆಯಲ್ಲಿ ದಂಪತಿ ವಾರಣಾಸಿಯಿಂದ ದೆಹಲಿಗೆ ಸುರಕ್ಷಿತವಾಗಿ ಬಂದು ತಲುಪಿದ್ದಾರೆ.

ಉತ್ತರಪ್ರದೇಶದಲ್ಲಿ ಇಂಥ ಅಪರಹಣಗಳು, ಅತ್ಯಾಚಾರಗಳು ಹಾಡಹಗಲೇ ನಡೆಯುತ್ತಿದ್ದರು ಅಪರಾಧಿಗಳನ್ನು ಮಟ್ಟಹಾಕಲು ಪೊಲೀಸರಿಗೆ ಸಾಧ್ಯವಾಗಿಲ್ಲ. ಮೇಲಿನ ಘಟನೆಯಲ್ಲೂ ಪೊಲೀಸರು ಮೂಕಪ್ರೇಕ್ಷಕನಂತೆ ನಿಂತಿದ್ದಾರೆಯೇ ಹೊರತು ಕಿಡಿಗೇಡಿಗಳನ್ನು ಬಂಧಿಸಲು ಯತ್ನಿಸಿಲ್ಲ. [ಮಲಯಾಳಂ ನಟಿ ಕಿಡ್ನಾಪ್ : ಕೊಯಮತ್ತೂರಿನಲ್ಲಿ 7 ಕಾಮುಕರ ಬಂಧನ]

English summary
Viral Video : A horrifying incident few miscreants tried to kidnap woman in front of her husband, who were sitting in the train in Varanasi. Somehow the public rescued the woman before the miscreants were about to run away in a vehicle. Police were also there but could not do anything.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X