ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಢಾರಿಯ ಗಾರ್ಡ್ ಕಣ್ಣು ಹೊಡೆದಿದ್ದಕ್ಕೆ ಯುವತಿ ಪ್ರತಿಭಟನೆ

By Mahesh
|
Google Oneindia Kannada News

ಆಗ್ರಾ, ಮೇ.19: ಆಡಳಿತಾರೂಢ ಸಮಾಜವಾದಿ ಪಕ್ಷ ಮತ್ತೊಮ್ಮೆ ಮುಜುಗರಗೊಳ್ಳಲಾಗಿದೆ. ಸಮಾಜವಾದಿ ಪಕ್ಷದ ಮುಖಂಡರೊಬ್ಬರ ಗಾರ್ಡ್ ಮಾಡಿದ ತಪ್ಪು ಈಗ ಪಕ್ಷದ ಕುತ್ತಿಗೆಗೆ ಬಂದಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಪುಢಾರಿಯ ಕಾರನ್ನೇರಿದ ಯುವತಿಯ ಫೋಟೊ, ವಿಡಿಯೋಗಳು ಹಂಚಿಕೆಯಾಗುತ್ತಿದೆ. ಧೈರ್ಯವಂತ ಯುವತಿ ಎಂದು ಎಲ್ಲರೂ ಶಭಾಷ್ ಗಿರಿ ನೀಡಿದ್ದಾರೆ.

ಉತ್ತರ ಪ್ರದೇಶದ ಆಗ್ರಾದಲ್ಲಿ ಈ ಘಟನೆ ನಡೆದಿದ್ದು, ಯುವತಿಯೊಬ್ಬರು ಸಮಾಜವಾದಿ ಪಕ್ಷದ ಮುಖಂಡ ಅಭಿನವ್ ಶರ್ಮ ಅವರ ಮರ್ಸಿಡೀಸ್ ಕಾರಿನ ಮುಂಭಾಗವನ್ನೇರಿ ಬಾವುಟ ಕಿತ್ತು ಹಾಕಿ, ವಿಂಡ್ ಶೀಲ್ಡ್ ಕಿತ್ತು ಹಾಕಿದ್ದಾರೆ. ಅಭಿನವ್ ಶರ್ಮ್ ಅವರ ಸೆಕ್ಯುರಿಟಿ ಗಾರ್ಡ್ ಅವರೊಬ್ಬರು ಯುವತಿಗೆ ಕಣ್ಣು ಹೊಡೆದಿದ್ದಕ್ಕೆ ಈ ರೀತಿ ಪ್ರತಿಭಟನೆ ವ್ಯಕ್ತವಾಗಿದೆ.

ಭಾನುವಾರ ನಡೆದ ಈ ಘಟನೆ ವಿಡಿಯೋ ಹಾಗೂ ಸುದ್ದಿ ಪ್ರಸಾರ ಮಾಡಿದ ಟೈಮ್ಸ್ ಸಮೂಹ ಸಂಸ್ಥೆ ವರದಿ ಪ್ರಕಾರ , 23 ವರ್ಷ ವಯಸ್ಸಿನ ಯುವತಿ ಹಾಗೂ ಆಕೆ ಸೋದರಿ ಇಬ್ಬರು ಸ್ಕೂಟರ್ ಏರಿ ವೈದ್ಯರನ್ನು ಕಾಣಲು ಹೋಗುತ್ತಿದ್ದರು. ಟ್ರಾಫಿಕ್ ಸಿಗ್ನಲ್ ನಲ್ಲಿ ನಿಂತಿದ್ದಾಗ ಪಕ್ಕದಲ್ಲಿದ್ದ ಎಸ್ ಪಿ ಮುಖಂಡನ ಸೆಕ್ಯುರಿಟಿ ಆಕೆಯನ್ನು ನೋಡಿ ಕಣ್ಣು ಮಿಟುಕಿಸಿದ್ದಾನೆ. ಮುಂದೇನಾಯ್ತು ನೋಡಿ

ಯುವತಿಗೆ ಕಣ್ಣು ಹೊಡೆದಿದ್ದ ಪುಢಾರಿಯ ಗಾರ್ಡ್

ಯುವತಿಗೆ ಕಣ್ಣು ಹೊಡೆದಿದ್ದ ಪುಢಾರಿಯ ಗಾರ್ಡ್

ಟ್ರಾಫಿಕ್ ಸಿಗ್ನಲ್ ನಲ್ಲಿ ನಿಂತಿದ್ದಾಗ ಪಕ್ಕದಲ್ಲಿದ್ದ ಎಸ್ ಪಿ ಮುಖಂಡನ ಸೆಕ್ಯುರಿಟಿ ಆಕೆಯನ್ನು ನೋಡಿ ಕಣ್ಣು ಮಿಟುಕಿಸಿದ್ದಾನೆ. ಮುಂದೇನಾಯ್ತು

ಯುವತಿ ಕಾರನ್ನು ಏರಿದ ವಿಡಿಯೋ

ಮರ್ಸಿಡೀಸ್ ಕಾರಿನ ಮುಂಭಾಗವನ್ನೇರಿ ಬಾವುಟ ಕಿತ್ತು ಹಾಕಿ, ವಿಂಡ್ ಶೀಲ್ಡ್ ಕಿತ್ತು ಹಾಕಿದ್ದಾರೆ. ಅಭಿನವ್ ಶರ್ಮ್ ಅವರ ಸೆಕ್ಯುರಿಟಿ ಗಾರ್ಡ್ ಅವರೊಬ್ಬರು ಯುವತಿಗೆ ಕಣ್ಣು ಹೊಡೆದಿದ್ದಕ್ಕೆ ಈ ರೀತಿ ಪ್ರತಿಭಟನೆ ವ್ಯಕ್ತವಾಗಿದೆ.

ಸಮಾಜವಾದಿ ಪಕ್ಷದ ಪ್ರತಿಕ್ರಿಯೆ

ಸಮಾಜವಾದಿ ಪಕ್ಷದ ಮುಖಂಡ ಅಭಿನವ್ ಶರ್ಮ ಪ್ರತಿಕ್ರಿಯೆ ನೀಡಿ, ನಾವು ಮಹಿಳೆಯರನ್ನು ಗೌರವಿಸುತ್ತೇವೆ. ಅದರೆ, ಕಾನೂನು ಕೈಗೆತ್ತಿಕೊಳ್ಳಬಾರದು ಎಂದಿದ್ದಾರೆ.

ಕಾರಿನ ಮುಂಭಾಗದ ಬಾವುಟಕಿತ್ತ ವಿಡಿಯೋ

ಸಮಾಜವಾದಿ ಪಕ್ಷದ ಮುಖಂಡ ಇದ್ದ ಕಾರಿನ ಮುಂಭಾಗದಲ್ಲಿದ್ದ ಎಸ್ ಪಿ ಬಾವುಟ ಕಿತ್ತು ವಿಂಡ್ ಶೀಲ್ಡ್ ಹಾಳು ಮಾಡಿ ಆಕ್ರೋಶ ವ್ಯಕ್ತಪಡಿಸಿದ ಯುವತಿ.

ವಿವಿಐಪಿ ಉಪಟಳ ನಿಲ್ಲಿಸಿ ಎಂದು ಅಭಿಯಾನ

ವಿವಿಐಪಿ ಉಪಟಳ ನಿಲ್ಲಿಸಿ ಎಂದು ಅಭಿಯಾನ ಆರಂಭಿಸಿರುವ ಟೈಮ್ಸ್ ನೌ

English summary
This is the tale of a woman who believes that eve teasers must be taught a lesson. This woman doesn't think twice to challenge even mighty politician if he involves himself in wrong practices.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X